ಗದಗ: ಸರ್ಕಾರ ಅನ್ನಭಾಗ್ಯ ಅಕ್ಕಿಯನ್ನು ಬಡವರಿಗೆ ಉಚಿತವಾಗಿ ಪಡಿತರ ಅಂಗಡಿ ಮೂಲಕ ನೀಡುತ್ತಿದ್ದರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ದಂಧೆಕೋರರು ಬಡವರಿಂದ ಅಕ್ಕಿ ಸಂಗ್ರಹಿಸಿ ಕಾಳ ಸಂತೆಯಲ್ಲಿ ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದಾರೆ.
ಬೆಟಗೇರಿ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಶುಕ್ರವಾರ ಖಚಿತ ಮಾಹಿತಿ ಮೇರೆಗೆ ಕಾರ್ಯಚರಣೆ ನಡೆಸಿ ಬೆಟಗೇರಿ ಭಾಗದಲ್ಲಿ ಅನ್ನಭಾಗ್ಯ ಸಂಗ್ರಹಿಸಿಟ್ಟ ಸುಮಾರು ಮೂರು ಕ್ವಿಂಟಲ್ ೬೦ ಕೆಜಿ ಅಕ್ಕಿ ವಶಕ್ಕೆ ಪಡೆದಿದ್ದಾರೆ.
ಆಹಾರ ನಿರೀಕ್ಷಕ ನಾಗನಗೌಡ ಚಿನ್ನಪ್ಪಗೌಡ್ರ ಮತ್ತು ಬೆಟಗೇರಿ ಪೋಲಿಸ್ ಠಾಣೆಯ ಪಿಎಸ್ಐ ಎಲ್ ಎಂ ಆರಿ ನೇತೃತ್ವದಲ್ಲಿ
ಬೆಟಗೇರಿಯ ಮಂಜುನಾಥ ನಗರ
ಅಹ್ಮದ್ ಯಲಿಗಾರ (೩೯ ) ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಅಕ್ಕಿ ವಶಕ್ಕೆ ಪಡೆದಿದ್ದಾರೆ.
ಅಕ್ಕಿ ದಂಧಕೋರನನ್ನ ವಶಕ್ಕೆ ಪಡೆದಿದ್ದಾರೆ ಬೆಟಗೇರಿ ಪೊಲೀಸರು ಈ ಕುರಿತು ಬೆಟಗೇರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
