ನರೇಗಲ್: ಪಟ್ಟಣದಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಚ ಮಾಡಿದ ನಂತರ ಅದನ್ನು ಎಲ್ಲೋ ಹಾಕುತ್ತಿದ್ದರು ಆದಕಾರಣ ಅದನ್ನು ತಪ್ಪಿಸಲು ಸರ್ಕಾರದಿಂದ ಮಲ ಸಂಸ್ಕರಣ ಘಟಕವನ್ನು ನಿರ್ಮಾಣ ಮಾಡಲಾಗುತ್ತಿದೆ ಅಲ್ಲಿ ಸಂಸ್ಕರಣಗೊಂಡ ನಂತರ ಮರು ಬಳಕೆಗೆ ಬರುತ್ತದೆ ಎಂದು ರೋಣ ಶಾಸಕ ಜಿ. ಎಸ್. ಪಾಟೀಲ ಹೇಳಿದರು.
ಅಂದಾಜು 2.84 ಕೋಟಿ ಅನುದಾನದಲ್ಲಿ ಕಸವಿಲೇವಾರಿ ಘಟಕದಲ್ಲಿ ನಿರ್ಮಾಣವಾಗುವ ಮಲ ತ್ಯಾಜ್ಯಾ ಸಂಸ್ಕರಣಾ (ಎಫ್. ಎಸ್. ಟಿ. ಪಿ) ಘಟಕದ ಭೂಮಿ ಪೂಜೆಯನ್ನು ಸ್ಥಳೀಯ ಪಟ್ಟಣ ಪಂಚಾಯಿತಿ ಆವರಣದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ನೆರವೇರಿಸಿ ಮಾತನಾಡಿದರು.
ನರೇಗಲ್ ಪಟ್ಟಣ ಪಂಚಾಯಿತಿ ಜೊತೆಗೆ ಆರು ಗ್ರಾಮ ಪಂಚಾಯತಿ ಸೇರಿಸಲಾಗಿದೆ. ಈ ಕಾಮಗಾರಿಯನ್ನು 9 ತಿಂಗಳಲ್ಲಿ ಮುಗಿಸಿಕೊಡಲಿದ್ದಾರೆ ಎಂದರು. ಮುಖ್ಯಮಂತ್ರಿಗಳು ಕ್ಷೇತ್ರದ ಅಭಿವೃದ್ಧಿಗೆ ₹50 ಕೋಟಿ ಕೊಟ್ಟಿದ್ದಾರೆ. ಅದರಲ್ಲಿ ₹37 ಕೋಟಿ ರಸ್ತೆ ಅಭಿವೃದ್ಧಿ ನಿಗದಿಯಾಗಿದ್ದು, ಉಳಿದಿದ್ದು ಆದ್ಯತೆ ಮೇರೆಗೆ ಬಳಕೆ ಮಾಡಿಕೊಳ್ಳುವ ಅವಕಾಶವಿದೆ. ಕಾಲೇಜಿನ ವರೆಗೆ ದ್ವಿಪಥ ರಸ್ತೆಗೆ ಅದರಲ್ಲಿ ₹1.5 ಕೋಟಿ ಅನುದಾನದ ಕ್ರಿಯಾ ಯೋಜನೆ ಮಾಡಿ ಸಲ್ಲಿಸಲಾಗಿದೆ. ಮಹಾತ್ಮ ಗಾಂಧಿಯವರ ಹೆಸರಿನಲ್ಲಿರು ಹಳೇ ಭವನ ಪಾಳುಬಿದ್ದಿರುವ ಕಾರಣ ದುರಸ್ತಿ ಹಾಗೂ ಮರು ನಿರ್ಮಾಣಕ್ಕೆ ₹32 ಲಕ್ಷ ಅನುದಾನದ ನೀಡಲಾಗಿದೆ. ಇದರಿಂದ ಸಾರ್ವಜನಿಕರ ಕಾರ್ಯಕ್ರಮಗಳಿಗೆ ಉಪಯೋಗವಾಗಲಿದೆ ಎಂದರು. ಭೋವಿ ಸಮಾಜದ ಓಣಿಯಲ್ಲಿರುವ ಸಮುದಾಯದ ಭವನಕ್ಕೆ ₹10 ಲಕ್ಷ, ಕೋಚಲಾಪುರ ಗ್ರಾಮದ ಮಲ್ಲಿಕಾರ್ಜುನ ದೇವಾಲಯದ ನಿರ್ಮಾಣಕ್ಕೆ ₹10 ಲಕ್ಷ ನೀಡಲಾಗಿದೆ. ಅಂಬೇಡ್ಕರ್ ಭವನಕ್ಕೆ ₹2 ಕೋಟಿ ಅನುದಾನ ಕೇಳಲಾಗಿದೆ. ₹22 ಲಕ್ಷ ಅನುದಾನದಲ್ಲಿ ದ್ವಾರ ಬಾಗಿಲು ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಪಟ್ಟಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ₹17 ಲಕ್ಷದ ಟೆಂಡರ್ ಕರೆಯಲಾಗಿದೆ. ಬಯೋಗ್ಯಾಸ್‌ಗೆ ಸಂಬಂಧಿಸಿದಂತೆ ₹26 ಲಕ್ಷದ ಟೆಂಡರ್ ಕರೆಯಲಾಗಿದೆ. ಹೀಗೆ ಅನೇಕ ಅಭಿವೃದ್ದಿ ಕಾರ್ಯಗಳು ನಡೆದಿವೆ ಎಂದು ಮಾಹಿತಿ ನೀಡಿದರು. ಶಿವನಗೌಡ ಪಾಟೀಲರು ಅವರ ತಂದೆಯ ಹೆಸರಿನಲ್ಲಿ ನೀಡಿದ ಜಾಗದಲ್ಲಿ ಸಾರ್ವಜನಿಕ ಗ್ರಂಥಾಲಯ ನಿರ್ಮಾಣ ಮಾಡಲಾಗಿದೆ. ಪಕ್ಕದಲ್ಲಿ ಶೌಚಾಲಯವಿದೆ ಎಂದು ವಿರೋಧ ವ್ಯಕ್ತವಾಗುತ್ತಿದೆ. ಗ್ರಾಮಸ್ಥರು ತಾವೇ ಮಾತಾನಾಡಿ ಸರಿಪಡಿಸಿಕೊಂಡು ಕಟ್ಟಡ ಹಾಗೂ ಗ್ರಂಥಾಲಯ ಬಳಕೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಸ್ಥಾಯಿ ಸಮಿತಿ ಚೇರ್ಮನ್ ಮುತ್ತಪ್ಪ ನೂಲ್ಕಿ, ನರೇಗಲ್ ಶಹರ ಘಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶಿವನಗೌಡ ಪಾಟೀಲ, ಅಕ್ಕಮ್ಮ ಮಣ್ಣೊಡ್ಡರ, ವೀರನಗೌಡ ಪಾಟೀಲ, ಹನಮಂತಪ್ಪ ಎಚ್. ಅಬ್ಬಿಗೇರಿ, ಮೈಲಾರಪ್ಪ ಚಳ್ಳಮರದ, ಅಲ್ಲಾಬಕ್ಷಿ ನದಾಫ್, ದಾವುದ್ ಅಲಿ ಕುದರಿ, ವಿ. ಬಿ. ಸೋಮನಕಟ್ಟಿಮಠ, ಎಂ. ಎಸ್. ದಢೇಸೂರಮಠ, ನಿಂಗನಗೌಡ ಲಕ್ಕನಗೌಡ್ರ, ಸಕ್ರಪ್ಪ ಎಸ್. ಹಡಪದ, ಮೈಲಾರಪ್ಪ ಗೋಡಿ, ಭಾಷಾ ಹೂಲಗೇರಿ, ಬಸವರಾಜ ಅಬ್ಬಿಗೇರಿ, ಮಹ್ಮದ್‌ಗೌಸ ಹೊಸಮನಿ, ಶೇಖಪ್ಪ ಜುಟ್ಲ, ಶೇಖಪ್ಪ ಕೆಂಗಾರ ಇದ್ದರು.
₹2.84 ಕೋಟಿ ಅನುದಾನದಲ್ಲಿ ಮಲ ಸಂಸ್ಕರಣ ಘಟಕ ನಿರ್ಮಾಣಕ್ಕೆ ಚಾಲನೆ
