ಬೆಟಗೇರಿ ಪೋಲಿಸರ ಕಾರ್ಯಾಚರಣೆಗೆ 4 ಮೌಲ್ಯ ಆಭರಣ ವಶಕ್ಕೆ ಆರೋಪಿ ಬಂಧನ

Samagraphrabha
1 Min Read

ಗದಗ : ನಗರದ ಬೆಟಗೇರಿ ಠಾಣೆಯ ಪೊಲೀಸರು ಕಾರ್ಯಚರಣೆ ನಡೆಸಿ ಎರಡು ಪ್ರತ್ಯೇಕ ಮನೆ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ ಆರೋಪಿಯಿಂದ ಸುಮಾರು 401,900/- ರೂಗಳ ಕಿಮ್ಮತ್ತಿನ ಬಂಗಾರ, ಬೆಳ್ಳಿಯ ಆಭರಣಗಳು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ 24.6 ಗ್ರಾಂ ತೂಕದ ಬಂಗಾರ ಆಭರಣಗಳು ಅಂದಾಜು ಕಿಮ್ಮತ್ತು 1,15,000/- ರೂಗಳ,
78 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಅಂದಾಜು ಕಿಮ್ಮತ್ತು 1900/- ರೂಗಳು,ಒಂದು ಮಾರುತಿ 800 ಕಾರ್ ನಂಬರ್ ಕೆ.ಎ.25/ಎಂ-6743 ಅಂದಾಜು ಕಿಮ್ಮತ್ತು 85,000/-, ಒಂದು ಬಜಾಜ್ ಮ್ಯಾಕ್ಸಿಮಾ ಆಟೋ ರೀಕ್ಷಾ ನಂಬರ್: ಕೆಎ-26/ಬಿ-6438 ಅಂದಾಜು ಕಿಮ್ಮತ್ತು 2,00,000/- ರೂಗಳು, ಒಂದು ಕಬ್ಬಿಣದ ರಾಡ ಸೇರಿದಂತೆ ಇಬ್ಬರನ್ನೂ ಬಂಧಿಸಿದ್ದಾರೆ.

ಆರೋಪಿಗಳಾಗ ಗದಗ ನಿವಾಸಿಯಾದ ಪ್ರಶಾಂತ ಬಿನ್ನಾಳ, ಲಕ್ಷ್ಮೇಶ್ವರ ನಿವಾಸಿಯಾದ ಮಂಜುನಾಥ ಅಮರಶೆಟ್ಟಿ ಇವರನ್ನು ವಶಕ್ಕೆ ಪಡೆದು ಇವರಿಂದ ಸುಮಾರು 401.900/- ರೂಗಳ ಕಿಮ್ಮತ್ತಿನ ಕಳ್ಳತನವಾದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು, ಕಳ್ಳತನ ಮಾಡಿದ ಹಣದಲ್ಲಿ ಖರೀದಿ ಮಾಡಿದ ಒಂದು ಕಾರು, ಕೃತ್ಯಕ್ಕೆ ಬಳಸಿದ ಒಂದು ಆಟೋ ರೀಕ್ಷಾ ಹಾಗೂ ಒಂದು ಕಬ್ಬಿಣದ ರಾಡನ್ನು ವಶಪಡಿಸಿಕೊಂಡು ತನಿಖೆಯನ್ನು ಮುಂದುವರಿಸಿರುತ್ತಾರೆ.

ಆರೋಪಿಯನ್ನು ಬಂಧಿಸುವಲ್ಲಿ ಧೀರಜ, ಉ. ಶಿಂದೆ, ಸಿಪಿಐ ಬೆಟಗೇರಿ ವೃತ್ತ, ಎಲ್.ಎಂ. ಆರಿ. ಪಿ.ಎಸ್.ಐ(ಕಾವಸು) ಬೆಟಗೇರಿ,ಸಿಬ್ಬಂದಿಗಳಾದ ಎಸ್.ಎ. ಗುಡ್ಡಮಠ,ಆರ್.ವಿ. ಪಾಟೀಲ್, ಪಿ.ಆರ್. ರಾಠೋಡ, ಕೆ ಡಿ ಜಮಾದಾರ,ಎಂ ಎಸ್ ಗಾಣಗೇರ,ಎಸ್ ಡಿ ಬಳ್ಳಾರಿ, ಪಿ.ಎ.ಭರಮಗೌಡ್ರ, ಆರ್.ಎಸ್.ನಾಯಕ ಹಾಗೂ ಟೆಕ್ನಿಕಲ್ ಸೆಲ್‌ನ ಸಿಬ್ಬಂದಿ ಗುರುರಾಜ ಬೂದಿಹಾಳ, ಎಸ್.ಸಿ. ಕೊರಡೂರ, ಭಾಗಿಯಾಗಿದ್ದರು.

- Advertisement -
Ad image

ಈ ಪತ್ತೆ ಕಾರ್ಯವನ್ನು ಕೈಕೊಂಡ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ರೋಹನ ಜಗದೀಶ,ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

Share this Article