ನವಲಗುಂದ : ಬದುಕಿನ ಆರಂಭದ ಮೆಟ್ಟಿಲುಗಳನ್ನು ಕಲಿಸುವ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮರೆಯಲು ಅಸಾಧ್ಯ ಎಂದು ಬೆಳಹಾರದ ಸೋಮಲಿಂಗಯ್ಯ ಹಿರೇಮಠ ಹೇಳಿದರು ಅವರು ಬೆಳಹಾರ ಗ್ರಾಮದ ಶರಣಬಸವೇಶ್ವರ ಕಲ್ಯಾಣ ಮಂಟಪದಲ್ಲಿ 2004 ಮತ್ತು 05 ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಯುವಜನರು ಪಾಶ್ಚಿಮತ್ಯ ಸಂಸ್ಕೃತಿಕ ಅಂಟಿಕೊಳ್ಳದೆ ನಮ್ಮ ದೇಶದ ಸಂಸ್ಕೃತಿ ಆ ರೀತಿ ಮುನ್ನಡೆಯ ಬೇಕು ವಿದ್ಯಾರ್ಥಿಗಳು ಕಲಿಸಿದ ಗುರುಗಳಿಗಿಂತ ಉನ್ನತ ಸ್ಥಾನ ತಲುಪಬೇಕು ಆಗ ಮಾತ್ರ ವಿದ್ಯೆ ಕಲಿಸಿದ ಗುರುಗಳಲ್ಲಿ ಸಾರ್ಥಕಭಾವ ಮೂಡುತ್ತದೆ ಎಂದು ಗೆಳೆಯರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ವಿ ಟಿ ಪಾಟೀಲ್ ಗುರುಗಳು ಹೇಳಿದರು.
ಗುರುಗಳಾದಂತ ಕುಮಾರ್ ಪಿ ಜಿ ಮಾತನಾಡಿ ಗ್ರಾಮದ ಈ ಶಾಲೆ ಒಂದು ಶಕ್ತಿ ಕೇಂದ್ರ ಶಾಲೆಯಲ್ಲಿ ಕಲಿತ ಎಲ್ಲರೂ ಪುಣ್ಯವಂತರು ನಮ್ಮ ಮಕ್ಕಳು ಕೂಡಾ ಗೌರವಿಸದ ಈ ಕಾಲ ಘಟ್ಟದಲ್ಲಿ ಹಳೆ ವಿದ್ಯಾರ್ಥಿಗಳು ನಮ್ಮನ್ನು ನಡೆಸಿಕೊಂಡ ರೀತಿ ಅದ್ಭುತ ಅದನ್ನು ಮಾತಿನಲ್ಲಿ ವರ್ಣಿಸಲು ಆಸಾಧ್ಯ ಎಂದು ಭಾವನಾತ್ಮಕವಾಗಿ ನುಡಿದರು.
ಗುರುಗಳಾದ ವಿ ಟಿ ಪಾಟೀಲ, ಎಸ್ ಎನ್ ದೊಡ್ಡಮನೆ, ನರೇಗಲ ,ಹಡಗಲಿ , ಆರ್ಯರ, ಹೋಗಾರ , ವಿ ಬ ಹೂಲಿಕೊಪ್ಪ , ಜಿ ವಾಯ್ ಸೀತಿಮನಿ, ಬಸವರಾಜ , ಕೃಷ್ಣ ಎಂ ಹಚ್, ,ಗೀತಾ ಹಿರೇಮಠ, ಎಂ ಎಂ ಹಿರೇಹೊಳಿ ರವರನ್ನು ಸನ್ಮಾನಿಸಲಾಯಿತು.
ಬೆಳಹಾರ ಗ್ರಾ ಪಂ ಅಧ್ಯಕ್ಷ ರುದ್ರಪ್ಪ ಬಳಗಲಿ , ಪಿಡಿಓ ಗುರುಸಿದ್ದಪ್ಪ ಮಡಿವಾಳರ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಶ್ರೀ ಸಿದ್ದನಗೌಡ ಪಾಟೀಲ್ ಅಜಯ್ ಹಿರೇಹೊಳಿ (ಪೊಲೀಸ್ ಇಲಾಖೆ ಗ್ರಾಮದ ಗುರುಹಿರಿಯರು ಯುವಕ ಮಿತ್ರರು ಕಾರ್ಯಕ್ರಮ ಯಶಸ್ವಿಗೊಳಿಸಿದರು ಹಳೆಯ ವಿದ್ಯಾರ್ಥಿಗಳು ತಮ್ಮ ಹಳೆಯ ಸಿಹಿ ನೆನಪುಗಳು ಭಾಷಣ ಮಾಡುವ ಮೂಲಕ ಮೆಲಕು ಹಾಕಿದರು.

