ಗಜೇಂದ್ರಗಡ : ಪುಸ್ತಕದ ಸ್ನೇಹ ಬೆಳೆಸುವುದರಿಂದ ಮೆದುಳಿನ ವೇಗ ಪಡೆಯುವುದಷ್ಟೇ ಅಲ್ಲದೆ ಬುದ್ಧಿಮತ್ತೆಯು ಬೆಳೆಯುತ್ತದೆ. ಪ್ರತಿ ಗ್ರಾಮಗಳಲ್ಲಿಯೂ ಗ್ರಾಮೀಣ ಗ್ರಂಥಾಲಯ ಹೊಂದುವುದು ಅತೀ ಮುಖ್ಯ ಇದರ ಸದುಪಯೋಗವನ್ನು ಮಕ್ಕಳು ಯುವಕರು ಪಡೆದುಕೊಳ್ಳಬೇಕು ಮಿಥುನ್ ಜಿ ಪಾಟೀಲ್ ಸಲಹೆ ನೀಡಿದರು.
ತಾಲೂಕಿನ ಗುಳಗುಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿರೇಅಳಗುಂಡಿ ಗ್ರಾಮದಲ್ಲಿ ನೂತನ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು.

ಈ ಗ್ರಂಥಾಲಯವನ್ನು ಮಕ್ಕಳಿಗೋಸ್ಕರ ನಿರ್ಮಿಸಲಾಗಿದೆ ವಿದ್ಯಾವಂತ ಯುವಕರು ಶಾಲಾ ಮಕ್ಕಳು ಈ ಗ್ರಂಥಾಲಯದ ಸದುಪಯೋಗವನ್ನು ಪಡೆದುಕೊಳ್ಳಬೇಕು ಈ ಗ್ರಂಥಾಲಯದಲ್ಲಿ ಮಕ್ಕಳಿಗೆ ಬೇಕಾಗುವಂತಹ ಕಾದಂಬರಿ ಸ್ಪರ್ಧಾತ್ಮಕ ಪುಸ್ತಕಗಳು ಲಭ್ಯವಿದ್ದು ಇದರಿಂದ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುಲ್ಲಪ್ಪ ಹಳ್ಳಿಕೇರಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷ ಬಸವರಾಜ್ ಆದಿ, ಗ್ರಾ ಪಂ ಸದಸ್ಯ ನಾಗರಾಜ ಪಾಟೀಲ್, ಉಪಾಧ್ಯಕ್ಷೇ ನೀಲವ್ವ ಕುರಿ, ನೀಲವ್ವ ಕುರ್ತಕೋಟಿ, ಉಮಾ ದೊಡ್ಡಮನಿ, ನಿಂಗಪ್ಪ ಗೊರವರ, ಊರಿನ ಹಿರಿಯರು ಯುವಕರು ಮಕ್ಕಳು ಉಪಸ್ಥಿತರಿದ್ದರು.

