ಲಕ್ಷ್ಮೇಶ್ವರ : ಸಮೀಪದಲ್ಲಿ ಬರುವ ಭೂ ಕೈಲಾಸ ಮುಕ್ತಿಮಂದಿರ ಧರ್ಮಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿ ಮಾಡಲು
ನಮ್ಮ ಪ್ರವಾಸೋದ್ಯಮ ಇಲಾಖೆಯಿಂದ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಇಂದಿನಿಂದಲೇ ಕ್ರಮ ಕೈಗೊಳ್ಳುತ್ತೇನೆ
ಎಂದು ರಾಜ್ಯದ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ
ಎಚ್ ಕೆ ಪಾಟೀಲ್ ಹೇಳಿದರು.
ನಗರದ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ನಿರ್ಮಾಣಗೊಂಡ ಶ್ರೀ ರಂಭಾಪುರಿ ಲಿಂ, ಜಗದ್ಗುರು ವೀರಗಂಗಾಧರ ಪ್ರಸಾದ ನಿಲಯವನ್ನು ಉದ್ಘಾಟಿಸಿ ಮಾತನಾಡದ
ಅವರು ಈ ಪವಿತ್ರವಾದ ಮುಕ್ತಿಮಂದಿರ ಧರ್ಮಕ್ಷೇತ್ರದ ಸಂಸ್ಥಾಪಕರಾದ ಲಿಂ, ವೀರಗಂಗಾಧರ ಜಗದ್ಗುರುಗಳ ಸಂದೇಶ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಾಹಿತ್ಯ ಸಂಸ್ಕೃತಿ ಸಂವರ್ದಿಸಲಿ ಶಾಂತಿ ಸಮೃದ್ಧಿ ಸರ್ವರಿಗಾಗಲಿ ಎಂಬ ಸಂದೇಶ
ಯಾವ ಜಾತಿ ಮತ ಪತ ಇಲ್ಲದೆ ಸರ್ವ ಜನಾಂಗದ ಒಳಿತಿಗಾಗಿ ಮಹಾ ತಪಸ್ಸು ಗೈದ ಈ ಪುಣ್ಯ ಭೂಮಿ ಈ ಪುಣ್ಯ ಭೂಮಿಯಲ್ಲಿ ನಡೆಯುತ್ತಿರುವ ತ್ರಿಕೋಟಿ ಶಿವಲಿಂಗ ಸ್ಥಾಪನೆ
ಕಾರ್ಯ ಬೇಗನೆ ಮುಗಿದು ಈ ಭಾಗದಲ್ಲಿಯ ಇರುವ ಈ ಪವಿತ್ರ ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತೆ ಆಗುತ್ತದೆ ಇದಕ್ಕೆ ನಮ್ಮ ಪ್ರವಾಸೋದ್ಯಮ ಇಲಾಖೆಯಿಂದ ದೊರಕುವ ಎಲ್ಲಾ ಸೌಲಭ್ಯಗಳನ್ನು ನೀಡುವ ಮೂಲಕ ಇದನ್ನು ಪ್ರವಾಸಿ ತಾಣವನ್ನಾಗಿ ಮಾಡಲು ನಮ್ಮ ಪ್ರವಾಸೋದ್ಯಮ ಇಲಾಖೆಯಿಂದ ಇಂದಿನಿಂದಲೇ ನಮ್ಮ ಎಲ್ಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದರು.
ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಮುಕ್ತಿಮಂದಿರ ಧರ್ಮ ಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಶ್ರೀ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು , ಶ್ರೀಗಂಗಾಧರ ಶಿವಾಚಾರ್ಯ ಸ್ವಾಮಿಗಳು ಕಲಾದಗಿ ,ಶಾಸಕ ಡಾ ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯರಾದ ಎಸ್ ವಿ ಸಂಕನೂರು, ಮಾಜಿ ಶಾಸಕ ಜಿ ಎಸ್ ಗಡ್ಡದೇವರಮಠ ಗಂಗಣ್ಣ ಮಹಾಂತಶೆಟ್ಟರ, ಕೆಪಿಸಿಸಿ ಸದಸ್ಯೆ ಸುಜಾತ ದೊಡ್ಡಮನಿ, ಸೋಮಣ್ಣ ಡಾಣಗಲ್, ಸೇರಿದಂತೆ ಇನ್ನೂ ಅನೇಕ ಭಕ್ತರು ಪಾಲ್ಗೊಂಡಿದ್ದರು
ಇದೇ ಸಮಯದಲ್ಲಿ ಪ್ರಸಾದ ನಿಲಯಕ್ಕೆ ಸೇವೆ ಸಲ್ಲಿಸಿದ ಮಲೆ ಬನ್ನೂರು ಭಕ್ತರಾದ
ಬಿ ಎಂ ವಾಗೀಶಸ್ವಾಮಿ, ಬಿ ಎಂ ಹಾಲಸ್ವಾಮಿ, ಅಕ್ಕಿ ರಾಜಣ್ಣ, ಬಿ ಪಂಚಪ್ಪ ಮತ್ತು ಸೋದರರು ಬಿ ಚಿದಾನಂದಪ್ಪನವರು, ಈರಯ್ಯ ಸ್ವಾಮಿ, ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು.

