ಗಜೇಂದ್ರಗಡ ಸಂಪರ್ಕಿಸುವ ಮುಖ್ಯ ರಸ್ತೆಗಳಲ್ಲಿ ಸ್ವಾಗತ ಕೋರುವ ದ್ವಾರ ಬಾಗಿಲುಗಳನ್ನು ನಿರ್ಮಿಸುವಂತೆ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ವೈ ಮುಧೋಳ್ ಆಗ್ರಹ

Samagraphrabha
1 Min Read

ಗಜೇಂದ್ರಗಡ : ಪಟ್ಟಣ ತಾಲೂಕಾಗಿ ಘೋಷಣೆಗೊಂಡು ಸುಮಾರು ವರ್ಷಗಳು ಕಳೆದಿವೆ. ಪಟ್ಟಣಕ್ಕೆ ಸಂಪರ್ಕ ನೀಡುವ ಮುಖ್ಯ ರಸ್ತೆಗಳಾದ ಗದಗ್ ಮಾರ್ಗ, ಕುಷ್ಟಗಿ ಮಾರ್ಗ, ಯಲಬುರ್ಗಾ ಮಾರ್ಗ ಮತ್ತು ರೋಣ ಮಾರ್ಗಗಳಲ್ಲಿ ಸ್ವಾಗತ ಕೋರುವ ದ್ವಾರ ಬಾಗಿಲುಗಳಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿವೆ. ಗಜೇಂದ್ರಗಡ ಪಟ್ಟಣಕ್ಕೆ ಬಂದರೆ ನಾವು ಯಾವ ಪಟ್ಟಣಕ್ಕೆ ಬಂದಿದ್ದೆವು ಅನ್ನುವುದೇ ತಿಳಿಯದ ಹಾಗೆ ಆಗುತ್ತದೆ. ನಗರ ಪ್ರದೇಶ ದ್ವಾರಗಳು ಇಲ್ಲದಿರುವುದು ಸೂಚನೆಯ ಇವುಗಳನ್ನು ಸ್ಥಾಪನೆಗೊಳಿಸುವ ಇಚ್ಛಾಶಕ್ತಿ ಪುರಸಭೆಗೆ ಮತ್ತು ಪುರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಮತ್ತು ಆಡಳಿತ ಮಂಡಳಿಗೆ ಸಿಬ್ಬಂದಿಗೆ ಇಲ್ಲವೋ ಅಥವಾ ಆಡಳಿತಾರೂಢ ಸರ್ಕಾರದ ಭಾಗವಾದ ಸ್ಥಳೀಯ ಶಾಸಕರಿಗೆ ಇಲ್ಲವೋ ಎಂಬುದು ಯಕ್ಷಪ್ರಶ್ನೆ. ವ್ಯಾಪಾರಕ್ಕೆ ಹಾಗೂ ಜನದಟ್ಟಣೆಗೆ ಕೇಂದ್ರಬಿಂದುವಾದ ಗಜೇಂದ್ರಗಡ ಪಟ್ಟಣಕ್ಕೆ ದ್ವಾರ ಪ್ರವೇಶ ಫಲಕ, ಸ್ವಾಗತ ಕೋರುವ ಬರವಣಿಗೆಯನ್ನು ಮಾಡದಿದ್ದರೆ ಮುಂದಿನ ದಿನಮಾನಗಳಲ್ಲಿ ಪುರಸಭೆಯ ಮುಂದೆ ಅನಿರ್ದಿಷ್ಟಾವಧಿ ಧರಣಿ ಮತ್ತು ಪ್ರತಿಭಟನೆ ಮಾಡಲಾಗುವುದು ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ ವೈ ಮುಧೋಳ್ ರವರು ಪತ್ರಿಕಾ ಪ್ರಕಟಣೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

Share this Article