ಮುಂಡರಗಿ : ರೈತನಿಂದ ಲಂಚ ಸ್ವೀಕರಿಸುತ್ತಿದ್ದ ಹೆಸ್ಕಾಂ ಗುತ್ತಿಗೆದಾರನೊಬ್ಬ ಲೋಕಾ ಬಲೆಗೆ ಬಿದ್ದಿದ್ದಾನೆ
ಗದಗ ಜಿಲ್ಲೆಯ ಮುಂಡರಗಿ ಹೆಸ್ಕಾಂ ಕಚೇರಿಯಲ್ಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದಾನೆ ಜಂತ್ಲಿಶಿರೂರು ಗ್ರಾಮದ ಬಿ ಕೆ ಗೌರಿ ಎಂಬ ರೈತನಿಂದ ಪಂಪ್ ಸೆಟ್ ಆರ್ ಆರ್ ನಂಬರ್ ಮಾಡಿಕೊಡಲು 4 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದನು ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಗುತ್ತಿಗೆದಾರ ಸಿದ್ದನಗೌಡ ಪಾಟೀಲ ಲೋಕಾ ಬಲೆಗೆ ಬಿದ್ದಿದ್ದಾನೆ ಆರೋಪಿ ಗುತ್ತಿಗೆದಾರ ಸಿದ್ದನಗೌಡನನ್ನ ವಶಕ್ಕೆ ಪಡೆದು ಲೋಕಾ ಪೊಲೀಸರಿಂದ ವಿಚಾರಣೆ ನಡೆಸಿದ್ದಾರೆ.
ಲೋಕಾಯುಕ್ತ ಡಿವೈಎಸ್ ಪಿ ವಿಜಯ್ ಬಿರಾದಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
