ನೂತನ 10 ಕೊಠಡಿಯ ಶಾಲಾ ಕಟ್ಟಡ ಉದ್ಘಾಟಿಸಿದ ಶಾಸಕ ಜಿ ಎಸ್ ಪಾಟೀಲ್

Samagraphrabha
3 Min Read

ನನ್ನ ಅವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವೆ

 ನನ್ನ ಅಧಿಕಾರ ಅವಧಿಯಲ್ಲಿ ಶಿಕ್ಷಣಕ್ಕೆ ಮಹತ್ವದ ಕೊಡುಗೆಯನ್ನು ನೀಡುತ್ತೇನೆ. ಈ ನಿಟ್ಟಿನಲ್ಲಿ ಕ್ಷೇತ್ರದ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣವನ್ನು ನೀಡುವ ಜವಾಬ್ದಾರಿ ನನ್ನ ಮೇಲಿದೆ ಎಂದು 1.62 ಕೋಟಿ ರೂಗಳ ವೆಚ್ಚದಲ್ಲಿ ತಾಲೂಕಿನ ಮುಗಳಿ ಗ್ರಾಮದ ಆರ್ ಎಮ್ ಎಸ್ ಎ ಸರಕಾರಿ ಪ್ರೌಢ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಜಿ ಎಸ್ ಪಾಟೀಲ್ ಶಾಲೆಯೂ ಸಮುದಾಯ ಕೇಂದ್ರ, ನಮ್ಮ ಕ್ಷೇತ್ರದ ಎಲ್ಲಾ ಮಕ್ಕಳು ವಿದ್ಯಾವಂತರಗಬೇಕು ಅಂದಾಗ ಮಾತ್ರ ತಾಲೂಕಿನ ಪ್ರಗತಿ ಸಾಧ್ಯ, ಶಾಲೆಯ ಕಟ್ಟಡವು 10 ಕೊಠಡಿಗಳನ್ನು ಹೊಂದಿದೆ ಇದರ ಸದುಪಯೋಗವನ್ನು ಶಿಕ್ಷಕರು ಬಳಸಿಕೊಳ್ಳಬೇಕು. ಶಿಕ್ಷಕರು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು, ಮಕ್ಕಳ ಹಾಜರಾತಿಗೆ ಮುಖದ ಚಿತ್ರವನ್ನು ದಿನನಿತ್ಯ ಸರಕಾರದ ವೆಬ್ ಸೈಟ್ ಗೆ ಅಪ್ಲೋಡ್ ಮಾಡುವದನ್ನು ಸರಕಾರ ಕಡ್ಡಾಯ ಮಾಡಿದೆ ಈ ರೀತಿಯ ಹಲವಾರು ಸೌಲಬ್ಯಗಳನ್ನು ಕರ್ನಾಟಕ ಸರಕಾರ ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿದ್ದು ಇದರ ಎಲ್ಲಾ ಸದುಪಯೋಗವನ್ನು ಮಕ್ಕಳು ಪಡೆದುಕೊಂಡು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಒಳ್ಳೆಯ ಉದ್ಯೋಗವನ್ನು ಪಡೆಯಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಎಸ್ ವಿ ಸಂಕನೂರ ಮಾತನಾಡಿ ಮುಗಳಿ ಸರಕಾರಿ ಪ್ರೌಢ ಶಾಲೆಗೆ ಜಾಗಾನೆ ಇರಲಿಲ್ಲ ಆದರೆ ಊರಿನ ಹಿರಿಯರು ದಾನದ ಮೂಲಕ ಈ ಜಾಗವನ್ನು ಸರಕಾರಿ ಶಾಲೆ ಪ್ರಾರಂಭಕ್ಕೆ ನೀಡಿದ್ದೀರಿ. ಯಾರಲ್ಲಿ ವಿದ್ಯೆ ಇರತ್ತದೆ ಅವರಿಗೆ ಜನರು ಗೌರವ ಮತ್ತು ಉತ್ತಮ ಸ್ಥಾನಮಾನವನ್ನು ಕೊಡುತ್ತಾರೆ, ದೇಶದ ನಿಜವಾದ ಸಂಪತ್ತು ದೇಶದಲ್ಲಿ ಇರುವಂತಹ ಮಕ್ಕಳು ಮತ್ತು ಯುವಕರು, ಶಿಕ್ಷಣಕ್ಕೆ ತನ್ನದೇ ಆದ ಮಹತ್ವವನ್ನು ಇದೆ. ದೇಶದ ಅಭಿರುದ್ದಿ ಆಗಲು ಶಿಕ್ಷಣ ಬೇಕು ಉತ್ತಮ ಶಿಕ್ಷಣ ಕೊಡಿಸುವಲ್ಲಿ ಪಾಲಕರು ಶ್ರಮಿಸಬೇಕು. 44922ಕೋಟಿ ಹಣವನ್ನ ಶಿಕ್ಷಣಕ್ಕಾಗಿ ಸರಕಾರ ಮಿಸಲಿಟ್ಟಿದೆ. ಬಸವರಾಜ ಬೊಮ್ಮಾಯಿ ಯವರು ಕೋಡಾ ತಮ್ಮ ಅವಧಿಯಲ್ಲಿ ಒಟ್ಟಾರೆ ಸರಕಾರದ ಬಜೆಟ್ ನಲ್ಲಿ ಶೇ 12% ರಷ್ಟು ಹಣವನ್ನು ಮಿಸಲಿರಿಸಿದ್ದರು. ಒಂದು ಶಾಲೆಯನ್ನು ಉತ್ತಮ ಶಾಲೆ ಎಂದು ಹೇಳಲು ಅಲ್ಲಿ ಇರುವಂತಹ ಶಿಕ್ಷಕರು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿದಾಗ ಮಾತ್ರ ಉತ್ತಮ ಶಾಲೆ ಎಂಬ ಬಿರುದು ಬರಲು ಸಾಧ್ಯ. ದೇಶದ ಭವಿಷ್ಯ ಶಾಲೆಯ ನಾಲ್ಕು ಕೊಠಡಿಗಲ್ಲಿ ನಿರ್ಮಾಣವಾಗುತ್ತದೆ ಎಂದು ಹೇಳಿದರು.

- Advertisement -
Ad image

ಶರಣು ಗೊಗೇರಿ ಸಹಾಯಕ ಯೋಜನಾ ಅಧಿಕಾರಿಗಳು ಗದಗ ಪ್ರಾಸ್ತವಿಕವಾಗಿ ಮಾತನಾಡಿ ಪ್ರತಿಯೊಂದು ಸರಕಾರಿ ಶಾಲೆಯೂ ತನ್ನದೇ ಆದ ಇತಿಹಾಸವನ್ನು ಹೊಂದಿದ್ದು, ಮುಗಳಿ ಗ್ರಾಮದಲ್ಲಿ ಯಾವುದೇ ಸರಕಾರಿ ಹೊಸ ಕಟ್ಟಡದ ಶಾಲೆ ಇದ್ದಿಲ್ಲ ಮಾನ್ಯ ಶಾಸಕರಿಗೆ ಹೇಳಿ ಅನುದಾನ ಹಾಕಿಸಿ ಈ ಶಾಲೆಯನ್ನು ನಿರ್ಮಿಸಲಾಗಿದೆ. ಮುಖ್ಯವಾಗಿ ಊರಿನ ಹಿರಿಯರೆಲ್ಲರೂ ಸೇರಿ ಮನೆ ಮನೆಗೆ ಹೋಗಿ 2 ಸಾವಿರ ರೂ ಗಳನ್ನು ತಗೆದುಕೊಂಡು ಈ ನೂತನ ಶಾಲೆಯ ಜಾಗವನ್ನು ತೆಗೆದುಕೊಂಡು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೊಟ್ಟಿದ್ದು ಇತಿಹಾಸ. ಊರಿನ ಜನರು ಸೇರಿ ಶಾಲಾ ಕಟ್ಟಡ ನಿರ್ಮಿಸಿದ್ದು ಒಳ್ಳೆಯ ವಿಷಯ. ಈ ಶಾಲೆಯಲ್ಲಿ ಇತಿಹಾಸದ ನಕ್ಷೆಗಳು, ಚಿತ್ರಪಠಗಳು ಮತ್ತು ಇನ್ನು ಮುಂತಾದ ಕೆಲಸ ಕಾರ್ಯಗಳನ್ನು ಮಾಡಲಾಗುವದು ಇದಕ್ಕೆ ಮಾನ್ಯ ಶಾಸಕರು 10 ಲಕ್ಷ ಹೆಚ್ಚುವರಿ ಮೊತ್ತವನ್ನು ನೀಡಬೇಕು, ಈಗಾಗಲೇ ಗ್ರಾ ಪಂ ಅನುದಾನದಲ್ಲಿ 9.50 ಲಕ್ಷ ಕಪೌಂಡ್ ಕಾಮಗಾರಿಗೆ ನೀಡಿದ್ದಾರೆ ಆದ್ದರಿಂದ ಮುಂದಿನ ದಿನಮಾನಗಳಲ್ಲಿ ಶಾಲೆಗೆ ಬೇಕಾಗುವಂತಹ ಸೌಲಭ್ಯಗಳನ್ನು ಒದಗಿಸಬೇಕು ಎಂದರು.

ಈ ಸಂದರ್ಭದಲ್ಲಿ ಎಮ್ ಎ ರಡ್ಡೆರ್, ತಾ ಪಂ ಇಒ ಚಂದ್ರಶೇಖರ ಕಂದಕೂರ್ , ಬಿಇಒ ಅರ್ಜುನ ಕಾಂಬೋಗಿ, ಮಲ್ಲಿಕಾರ್ಜುನ ಖವಾಸ್ತ, ಮುದಿಯಪ್ಪ ಬಿಸಾಟಿ, ಗ್ರಾ ಪಂ ಅಧ್ಯಕ್ಷೆ ಭೀಮವ್ವ ಪ ಗುಳಗುಳಿ, ವೀರಣ್ಣ ಶೆಟ್ಟರ್, ಸಿದ್ದಣ್ಣ ಬಂಡಿ, ಹಣಮಪ್ಪ ಬ ಅಸೂಟಿ, ಮುಖ್ಯೋಪಾಧ್ಯಾಯ ಪಿ ಎ ಹುನಗುಂದ, ಬಸವನಗೌಡ ಉಸಲಕೊಪ್ಪದ್, ಯಲ್ಲಪ್ಪ ಕುರಿ, ಎಸ್ ಎಸ್ ಅವಾರಿ, ಊರಿನ ಗುರು ಹಿರಿಯರು, ಶಾಲೆಯ ಮಕ್ಕಳು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Share this Article