ಕಾರ್ಮಿಕರ ಕಿಟ್ ಕಿಕ್ ಬ್ಯಾಕ್ ದಲ್ಲಿ ಕಾರ್ಮಿಕ ಮಂತ್ರಿ ಲಾಡ ರಾಜೀನಾಮೇ ಕೊಡಬೇಕು: ಸಂತೋಷ ಅಕ್ಕಿ

Samagraphrabha
2 Min Read

ಗದಗ: ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕ ಇಲಾಖೆಯು ಪ್ರತಿ ಜಿಲ್ಲೆಗೂ 34 ಸಾವಿರ ಕಿಟ್‌ಗಳಂತೆ ರಾಜ್ಯದಲ್ಲಿ ಸುಮಾರು 12.39 ಲಕ್ಷ ಕಟ್ಟಡ ಕಾರ್ಮಿಕರಿಗೆ ರೋಗನಿರೋಧಕ ಆಯುರ್ವೇದ ಔಷಧಗಳ ಕಿಟ್‌ಗಳನ್ನು ವಿತರಣೆ ಮಾಡಿದ್ದಾರೆ. ಖರೀದಿಯಲ್ಲಿ 70 ಕೋಟಿಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿದೆ. ಈ‌ ಕಿಕ್ ಬ್ಯಾಕ್ ಹಣ ಯಾರ ಖಾತೆಗೆ ಹೋಗಿದೆ ? ಕಾರ್ಮಿಕ ಸಚಿವರು ತಾವೇ ಇರುವದರಿಂದ ರಾಜೀನಾಮೇ ನೀಡಲೇಬೇಕು ಎಂದು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ ಆಗ್ರಹಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ ಅವರು, ಕಟ್ಟಡ ಕಾರ್ಮಿಕರಿಗೆ ನೀಡುವ ಕಿಟ್ ನಲ್ಲಿ ಮಹಾನಾರಾಯಣ ತೈಲ -210 ರೂ, ಚ್ಯವನಪ್ರಾಶ-255 ರೂ.ಧಾತ್ರಿ ಲೋಹ-130 ರೂ, ಕೃಮಿಕುಟಾರ- 108 ರೂ, ಆರೋಗ್ಯ ವರ್ಧಿನಿ-120 ರೂ ಇವೆಲ್ಲಾ ಸೇರಿದರೂ ಒಟ್ಟು ರೂಪಾಯಿ 953/ 1 ಕಿಟ್ ಆಗುತ್ತದೆ. ಆದರೆ, ಸರ್ಕಾರ 1 ಕಿಟ್ ಗೆ 2600 ರೂ ಬಿಲ್ ನಲ್ಲಿ ತೋರಿಸಿದ್ದಾರೆ. ಹೀಗಾಗಿ ಇದರಲ್ಲಿ ಬಹುದೊಡ್ಡ ಭ್ರಷ್ಟಾಚಾರ ನಡೆದಿದೆ. ಪೂರೈಕೆಯಲ್ಲೂ ಅವ್ಯವಹಾರ: ಒಂದೇ ಕಂಪನಿಗೆ ಕಿಟ್ ಗಳ ಪೂರೈಕೆಯ ಹೊಣೆ ನೀಡಲಾಗಿದೆ. ಎರಡು ಮೂರು ಜಿಲ್ಲೆಗಳಿಗೆ ಒಂದು ಟೆಂಡರ್‌ನಂತೆ ತಲಾ ₹6.72 ಕೋಟಿಯ 11 ಟೆಂಡರ್ ಕರೆಯಲಾಗಿದ್ದರೂ ಒಂದೇ ಕಂಪನಿಗೆ ಎಲ್ಲ ಟೆಂಡರ್ ಪಡೆದಿದೆ. ಪ್ರತಿ ಜಿಲ್ಲೆಗೂ 34 ಸಾವಿರ ಕಿಟ್ ನಿಗದಿ ಮಾಡಲಾಗಿದೆ. ಆದರೆ, ಎರಡು ಸಾವಿರ ಕಿಟ್ ಸಹ ಪೂರೈಸಿಲ್ಲ. ಕಾರ್ಮಿಕರ ಆರೋಗ್ಯ ತಪಾಸಣೆ ನೆಪದಲ್ಲಿ ರಾಜ್ಯದಾದ್ಯಂತ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೂರಾರು ಕೋಟಿ ಹಣ ಲೂಟಿಯಾಗಿದೆ. 50 ಮೌಲ್ಯದ ಕಬ್ಬಿಣಾಂಶದ ಮಾತ್ರೆಗಳಿಗೆ ₹ 600 ನೀಡಿದ್ದಾರೆ. ಕಟ್ಟಡ ಕಾರ್ಮಿಕರ ನಿಧಿ ಹಾಲು ಕರೆಯುವ ಹಸುವಿನಂತಿದ್ದು, ಸಂತೋಷ್ ಲಾಡ್ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ. ಈ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಹಾಗೂ ಕಾರ್ಮಿಕ ಸಚಿವ ರಾಜೀನಾಮೆ ನೀಡಬೇಕು. ಕೇಂದ್ರ ಸರ್ಕಾರ 2023 ಫೆಬ್ರುವರಿಯಲ್ಲಿ ಬೆಳಗಾವಿಗೆ 100 ಹಾಸಿಗೆಗಳ ನೂತನ ಇ.ಎಸ್.ಐ ಆಸ್ಪತ್ರೆಯನ್ನು ಸ್ಥಾಪಿಸಲು ಅನುಮೋದನೆ ನೀಡಿದೆ. ಆದರೆ, ರಾಜ್ಯ ಸರ್ಕಾರ ಜಮೀನು ಒದಗಿಸಲು ವಿಳಂಬ ಧೋರಣೆ ಅನುಸರಿಸುವ ಮೂಲಕ ಕಿತ್ತೂರು ಕರ್ನಾಟಕದ ಜನತೆಗೆ ದ್ರೋಹ ಬಗೆದಿದೆ.
ಎರಡು ವರ್ಷಗಳಲ್ಲಿ ಚಿತ್ರದುರ್ಗ ಜಿಲ್ಲೆಯೊಂದರಲ್ಲೇ ₹ 19 ಕೋಟಿ ಅವ್ಯವಹಾರ ನಡೆದಿದೆ. 67,000 ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಅಷ್ಟೊಂದು ಸಂಖ್ಯೆಯ ಕಾರ್ಮಿಕರೇ ಇಲ್ಲ. 13, 14 ವರ್ಷ ವಯಸ್ಸಿನ ಬಾಲಕರಿಗೂ ಸದಸ್ಯತ್ವ ನೀಡಿ ಬಾಲ ಕಾರ್ಮಿಕರನ್ನು ಸರ್ಕಾರವೇ ಸೃಷ್ಟಿ ಮಾಡಿದೆ.

ಪ್ರತಿ ಜಿಲ್ಲೆಯಲ್ಲಿ ಹೇಗೆ 33,500 ನಿಖರವಾಗಿ ಕಾರ್ಮಿಕರಿದ್ದಾರೆ? ಇದು ಸಂದೇಹ ಮೂಡಿದೆ. ಮತ್ತು ಇವರೆಲ್ಲರು ರಕ್ತ ಹೀನತೆಯಿಂದ ಬಳುತ್ತಿದ್ದಾರೆ ಎಂದು ಹೇಳಿದ್ದಾರೆ, ಇದು ಯಾವ ಆಧಾರದ ಮೇಲೆ ಹೇಳಿದ್ದಾರೆ ಇದು ಕೂಡ ಅನುಮಾನ ತಂದಿದೆ. ಆದ್ದರಿಂದ, ಕಾರ್ಮಿಕ ಇಲಾಖೆಯ ಬ್ರಹ್ಮಾಂಡ ಬ್ರಷ್ಟಾಚಾರಕ್ಕೆ ಆ ಇಲಾಖೆಯ ಸಚಿವರು ರಾಜೀನಾಮೇ ನೀಡಬೇಕೆಂದು ಆಗ್ರಹಿಸಿದ್ದಾರೆ.

Share this Article