ನವಲಗುಂದ: ಉತ್ತರ ಕರ್ನಾಟಕ ಭಾಗದ ಸಂಜೀವಿನಿ ಎಂದೇ ಖ್ಯಾತಿ ಪಡೆದ ಹುಬ್ಬಳ್ಳಿಯ ಕಿಮ್ಸ್ ನಿರ್ದೇಶಕರ ಹುದ್ದೆಗೆ 3 ಕೋಟಿ ಹಣದ ವ್ಯವಹಾರವಾಗಿದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಆರ್.ಟಿ.ಐ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ಲೋಕಾಯುಕ್ತದಲ್ಲಿ ದೂರು ದಾಖಲು ಮಾಡಿದ್ದಾರೆ…
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು
ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರ ಹುದ್ದೆಗೆ ಡಾ: ಎಸ್.ಎಫ್ ಕಮ್ಮಾರ ಅವರು 03 ಕೋಟಿ ರೂಪಾಯಿ (ಲಂಚ) ಹಣದ ವ್ಯವಹಾರದ ಮಾತುಕತೆ ನಡೆಸಿದ್ದಾರೆ, ಅದರಲ್ಲಿ ಕಾಂಗ್ರೆಸ್ ಶಾಸಕರ ಮನೆಗೆ ಹೋಗಿ 2 ಕೋಟಿ ರೂಪಾಯಿ ನೀಡಲಾಗಿದೆ ಎಂಬ ಗಂಭೀರ ಆರೋಪವನ್ನು ಅದೇ ಕಾಂಗ್ರೆಸ್ ಪಕ್ಷದ ಕೆ.ಪಿ.ಸಿ.ಸಿ ವಕ್ತಾರ ಮಾಡಿದ್ದು ಮಾಧ್ಯಮದಲ್ಲಿ ಪ್ರಕಟವಾಗಿ ರಾಜ್ಯಾದ್ಯಂತ ಸುದ್ದಿಯಾಗಿತ್ತು
ಈ ಪ್ರಕರಣದಲ್ಲಿ ಡೀಲ್ ಮುಗಿದಿದ್ದು 3 ಕೋಟಿ, ಆ ಹಣದಲ್ಲಿ ಮೊದಲ ಕಂತಿನ ರೂಪವಾಗಿ ನವಲಗುಂದ ಕಾಂಗ್ರೆಸ್ ಶಾಸಕರ ಮನೆಗೆ 2 ಕೋಟಿ ರೂಪಾಯಿ ಮುಟ್ಟಿಸಿರುವುದನ್ನು ನೂರಅಹ್ಮದ ಅವರು ಮಾಧ್ಯಮದ ಎದುರು ತಿಳಿಸಿದ್ದಾರೆ,
ಆ 3 ಕೋಟಿಯಲ್ಲಿ 1 ಕೋಟಿ 80 ಲಕ್ಷ ರೂಪಾಯಿ ಡಾ: ಎಸ್.ಎಫ್ ಕಮ್ಮಾರ ಅವರದು ಇನ್ನೂಳಿದ 20 ಲಕ್ಷ ರೂಪಾಯಿ ಸ್ವತಃ ನೂರಅಹ್ಮದ ಅವರೇ ಸೇರಿಸಿ ಸರಿಯಾಗಿ 2 ಕೋಟಿ ರೂಪಾಯಿ ಮುಟ್ಟಿಸಿದ್ದೇನೆ ಎನ್ನುವುದು ಕೆ.ಪಿ.ಸಿ.ಸಿ ವಕ್ತಾರ ಅವರ ವಾದವಾಗಿದೆ, ಆ 20 ಲಕ್ಷ ರೂಪಾಯಿಯನ್ನು ಸೇರಿಸಿ ಶಾಸಕರಿಗೆ ನೀಡಿದರೆ ನಿಮಗೆ ಕೀಮ್ಸ್ ಆವರಣದಲ್ಲಿರುವಂತಹ ಕಟ್ಟಡಗಳನ್ನು ಹೂಟೇಲ್ ವ್ಯಾಪಾರಕ್ಕಾಗಿ ಬಾಡಿಗೆ ಕೂಡುತ್ತೇನೆ ಎನ್ನುವಂತಹ ಭರವಸೆಯನ್ನು ಡಾ:ಎಸ್. ಎಫ್ ಕಮ್ಮಾರ ಅವರು ಶ್ರೀ ನೂರಅಹ್ಮದ ನದಾಫ ಅವರಿಗೆ ನೀಡಿದ್ದರು ಎಂಬ ವಿಷಯವನ್ನು ಮಾಧ್ಯಮದಲ್ಲಿ ನೂರಅಹ್ಮದ ನದಾಫರವರು ಸ್ಪಷ್ಟವಾಗಿ ಹೇಳಿದ್ದಾರೆ.
ಈ ಕುರಿತು ತನಿಖೆ ನಡೆಸಿ ತಪ್ಪತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ಆರ್.ಟಿ.ಐ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ದಿನಾಂಕ 17-06-2025ರಂದು ಪ್ರಕರಣ ದಾಖಲಿಸಿದ್ದು ಪ್ರಕರಣ ದ ಸಂಖ್ಯೆ: COMPT/LOK/BGM/3503/2025 ಇದ್ದು ಸದ್ಯ ಡಾ:ಎಸ್.ಎಫ್.ಕಮ್ಮಾರ ಅವರಿಗೆ ಲೋಕಾಯುಕ್ತರಿಂದ ಕಾರಣ ಕೇಳಿ ನೋಟಿಸ್ ಜಾರಿಯಾಗಿದೆ…

