ನವಲಗುಂದ: ಕಾರ್ಗಿಲ್ ವಿಜಯೋತ್ಸವದ ನಿಮಿತ್ಯ ಹುಬ್ಬಳ್ಳಿ ಮಂಡಲ ಭಾರತೀಯ ಜನತಾ ಪಕ್ಷದ ಆಶ್ರಯದಲ್ಲಿ ಕೋಳಿವಾಡ ಗ್ರಾಮದ ಹುತಾತ್ಮ ಯೋಧ ದಿ: ಕರವೀರಪ್ಪ ಕಮತರವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸುವುದರ ಮುಖಾಂತರ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಿದರು.
ಬಿಜೆಪಿ ರಾಜ್ಯ ಮುಖಂಡ ಬಸವರಾಜ ಕುಂದಗೋಳಮಠ ಮಾತನಾಡಿ ಇಂದಿನ ಯುವಕರು ರಾಷ್ಟ್ರಭಕ್ತಿ ಬೆಳೆಸಿಕೊಳ್ಳಲು ಕರೆ ನೀಡಿದರು.
ಬಿಜೆಪಿ ಮುಖಂಡ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ದೇವರಾಜ ದಾಡಿಬಾವಿ ಮಾತನಾಡಿ ತಾಯಿ ಭಾರತ ಮಾತೆಯ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಟ ಮಾಡಿ ಸಾವಿರಾರು ಸೈನಿಕರ ತಮ್ಮ ಪ್ರಾಣವನ್ನು ಕೊಟ್ಟು ಕಾರ್ಗಿಲ್ ಯುದ್ಧವನ್ನು ಜಯಿಸಿದ ಯೋಧರು ಮತ್ತು ಹುತಾತ್ಮ ಯೋಧರು ನಿತ್ಯ ಸ್ಮರಣೆಯರು ಎಂದರು..
ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಗಣಿ ಅಧ್ಯಕ್ಷತೆ ವಹಿಸಿದ್ದರು ಮುಖಂಡರಾದ ಮೃತ್ಯುಂಜಯ ಹಿರೇಮಠ, ರಾಜಶೇಖರ್ ಕಂಪ್ಲಿ, ಯೋಧರಾದ ಪರಶುರಾಮ ದಿವಾನದ, ರುದ್ರಪ್ಪ ದುಂದೂರ, ಮಲ್ಲಪ್ಪ ಹಳಕಟ್ಟಿ, ಮಂಜುನಾಥ ಗಡಿಯನ್ನವರ, ಗುಂಜಾಳ ಶಶಿಧರ್ ತೆಂಗಿನಕಾಯಿ, ಪಮ್ಮು ಯಡ್ರಾವಿ ಅರುಣ್ ಹುಲ್ಲೂರು ದುಂಡಪ್ಪ ಶೆಟ್ಟರ್ ಅಪ್ಪಣ್ಣ ಕಮತರ ಷಣ್ಮುಖ ಗುಂಜಾಳ ಶಂಭು ಮೆಣಸಿನಕಾಯಿ ಬಿಕೆ ಸೊರಟೂರು ರುದ್ರಪ್ಪ ಕಗ್ಗಣ್ಣವರ ಪ್ರಭು ಜಂತ್ಲಿ ರಾಜು ಕಣಿವಿ ಮುತ್ತು ಚೌಡಶೆಟ್ಟಿ ಎರ್ರಿಸ್ವಾಮಿ ಗಣಾಚಾರ್ಯ ವಿನಯ್ ಹಿರೇಮಠ ಈರಣ್ಣ ಕೆ ಹಾಜರಿದ್ದರು.

