ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಯ ಅಮೋಘ ಸಾಧನೆ

Samagraphrabha
1 Min Read

ಗದಗ : ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಅಭ್ಯಸಿಸಿದ ಇಬ್ಬರು ವಿದ್ಯಾರ್ಥಿಗಳ ಅಮೋಘ ಸಾಧನೆಗಳು ಇನ್ನೂ ಜನಮಾನದಿಂದ ಮರೆಯಾಗುವ ಮುನ್ನವೆ ಮತ್ತೋರ್ವ ವಿದ್ಯಾರ್ಥಿ ಕುಮಾರ ಪಕ್ಷಲ್ ಕಟಾರಿಯಾ ಮುಂಬೈ IIಖಿ ಕಾಲೇಜಿಗೆ ಆಯ್ಕೆಯಾದದ್ದು ಹೆಮ್ಮೆಯ, ಸಂತಸದ ಸಂಗತಿಯೇ ಸರಿ. ಕುಮಾರ ಪಕ್ಷಲ್ ಕಟಾರಿಯಾ 2024-2025 ನೇ ಶೈಕ್ಷಣಿಕ ಸಾಲಿನಲ್ಲಿ ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪಿ.ಯು ತರಗತಿಗೆ ಸೇರಿದರು. ಮೊದಲಿನಿಂದಲೂ ಪ್ರತಿಭಾನ್ವಿತ ವಿದ್ಯಾರ್ಥಿಯಾದ ಕುಮಾರ ಪಕ್ಷಲ್ ಕಟಾರಿಯಾ ಪಿ.ಯು ದ್ವಿತೀಯ ವರ್ಷದಲ್ಲಿಯೂ ಉತ್ತಮ ಶ್ರೇಣಿಯಲ್ಲಿ ಪಾಸಾಗಿದ್ದಲ್ಲದೇ ಸಿ.ಇ.ಟಿ.ಯಲ್ಲಿಯೂ ಅಸಾಧಾರಣ ಪ್ರತಿಭೆ ಮೆರೆದು ಈಗ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮುಂಬೈನ IIಖಿ ಕಾಲೇಜಿಗೆ ಆಯ್ಕೆಯಾಗಿದ್ದಾರೆ. ಕಳೆದ ವರ್ಷದ ತಮ್ಮ ಪದವಿ ಪೂರ್ವ ಶಿಕ್ಷಣದ ನಿತ್ಯ ಪಾಠ ಪ್ರವಚನದಲ್ಲಿ ಹಾಗೂ ಅಇಖಿ ಯಲ್ಲೂ ಅತ್ತ್ಯುತ್ತಮ ಮಾರ್ಗದರ್ಶನ ನೀಡಿ ಪ್ರೇರೆಪಿಸಿದ ಸನ್ಮಾರ್ಗ ಪದವಿ ಪೂರ್ವ ಉಪನ್ಯಾಸಕರನ್ನು ಕುಮಾರ ಪಕ್ಷಲ್ ಹೃತ್ಪೂರ್ವಕವಾಗಿ ಸ್ಮರಿಸಿದರು.

ಅವರ ಭವಿಷ್ಯದ ಶೈಕ್ಷಣಿಕ ಸಾಧನೆ ಪ್ರಗತಿ ಇನ್ನೂ ಉಜ್ವಲವಾಗಲಿ, ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯದ ಚೇರಮನ್ ಪ್ರೋ ರಾಜೇಶ ಎಸ್ ಕುಲಕರ್ಣಿ, ಪ್ರಾಚಾರ್ಯ ಪ್ರೇಮಾನಂದ ರೋಣದ, ಆಡಳಿತಾಧಿಕಾರಿಯಾದ ಶ್ರೀ ಎಮ್. ಸಿ. ಹಿರೇಮಠ, ನಿರ್ದೇಶಕರುಗಳಾದ ಪ್ರೋ. ರೋಹಿತ್ ಒಡೆಯರ್, ಪ್ರೋ. ಸೈಯದ ಮತೀನ್ ಮುಲ್ಲಾ, ಪ್ರೋ. ಉಡುಪಿ ದೇಶಪಾಂಡೆ, ಪ್ರೋ. ರಾಹುಲ್ ಒಡೆಯರ್ ಹಾಗೂ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ಕುಮಾರ ಪಕ್ಷಲ್ ಕಟಾರಿಯಾ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.

Share this Article