ಲಕ್ಷ್ಮೇಶ್ವರ : ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ “ರಕ್ತ ಶೇಖರಣೆ ಘಟಕವನ್ನು ಶಾಸಕ ಡಾ.ಚಂದ್ರು ಕೆ. ಲಮಾಣಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಪ್ರತಿಯೊಬ್ಬರೂ ರಕ್ತದಾನವನ್ನು ಮಾಡಬೇಕು ರಕ್ತದಾನ ಮಾಡುವುದರಿಂದ ನಮ್ಮ ಶರೀರವು ಆರೋಗ್ಯವಾಗಿರುತ್ತದೆ ಈಗ ಲಕ್ಷ್ಮೇಶ್ವರ ಪಟ್ಟಣದಲ್ಲಿ ರಕ್ತ ಶೇಖರಣೆ ಘಟಕ ಸ್ಥಾಪನೆಯಾಗಿದ್ದು ಖುಷಿಯ ವಿಚಾರವಾಗಿದೆ. ಎಂದು ಹೇಳಿದರು.
ಈ ವೇಳೆಗೆ ತಾಲೂಕ ಅರೋಗ್ಯ ಅಧಿಕಾರಿಗಳಾದ ಡಾ. ಸುಭಾಷ ಡೈಗೊಂಡ, ವೈದ್ಯಾಧಿಕಾರಿಗಳಾದ ಡಾ.ಶ್ರೀಕಾಂತ ಕಾಟೆವಾಲೆ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೃಷ್ಣಪ್ಪ ಧರ್ಮರ, ಹಿರಿಯ ವೈದ್ಯರಾದ ಡಾ.ಪಿ ಡಿ ತೋಟದ, ಡಾ. ಎಸ್ ಸಿ ಮಲ್ಲಾಡದ, ಮುಖಂಡರಾದ ಜಂಬಣ್ಣ ಬಾಳಿಕಾಯಿ, ಗುರು ಹವಳ, ಮಲ್ಲಿಕಾರ್ಜುನ ಕಳಸಾಪುರ, ಡಾ. ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಡಾ. ಉಮೇಶ, ವಿಜಯ ಮೆಕ್ಕಿ, ಬಸವರಾಜ ಚಕ್ರಸಾಲಿ, ಗಂಗಣ್ಣ ಮೆಣಸಿನಕಾಯಿ, ದುಂಡೇಶ ಕೊಟಗಿ, ಪ್ರವೀಣ ಬೊಂಬಲೆ ಹಾಗೂ ಅನೇಕ ಮುಖಂಡರು ಕಾರ್ಯನಿರತ ಪತ್ರಕರ್ತರ ಸಂಘದ ಎಲ್ಲಾ ಪದಾಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
