ತಾಲೂಕಿನಾದ್ಯಂತ ಅಕ್ರಮ ಅನ್ನಭಾಗ್ಯ ಸಾಗಾಣಿ

Samagraphrabha
1 Min Read

ಮುಂಡರಗಿ :ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ಹಾಗೂ ಮುಡರಗಿ ಪಟ್ಟಣದಲ್ಲಿ ಅಕ್ಕಿದಂದೆ ಮಾಡುವ ಖದೀಮ ಕಳ್ಳರು ಹುಟ್ಟಿಕೊಂಡಿದ್ದಾರೆ.
ಕಳ್ಳರ ಅನುಯಾಯಿಗಳು ( ಹಿಂಬಾಲಕರು) ಪುರುಷರು ಹಾಗೂ ಮಹಿಳೆಯರು ಚೀಲದಲ್ಲಿ ತಕ್ಕಡಿಯನ್ನು ಇಟ್ಟುಕೊಂಡು ಮನೆ ಮನೆಗೆ ಅಲೆದಾಡಿ ಹೆಚ್ಚಿನ ಹಣ ಕೊಡುತ್ತೇವೆಂದು ಹೇಳಿ ಅಕ್ಕಿಯನ್ನು ಖರೀದಿ ಮಾಡಿ ಎರಡು ಚಕ್ರದ ವಾಹನದ ಬೈಕಿನ ಮೇಲೆ ಹಾಗೂ ಮೂರು ಚಕ್ರದ ಆಟೋ ಮೇಲೆ ಮತ್ತು ಟಮ್ ಟಮ್ ಮೇಲೆ ಅಕ್ಕಿ ಸಾಗಾಣಿಕೆ ಮಾಡುತ್ತಾರೆ.
ಇನ್ನೊಂದು ಆಶ್ಚರ್ಯದ ಸಂಗತಿ ಏನೆಂದರೆ, ಗ್ರಾಮ ಪ್ರದೇಶದಲ್ಲಿ ಅಕ್ಕಿ ನೀಡುವ ಕೇಂದ್ರಗಳಲ್ಲಿ ಹೆಬ್ಬಟ್ಟು ಹಾಕಿ ಕೆಲವರು ಅಕ್ಕಿಯನ್ನು ಅಲ್ಲೇ ಬಿಟ್ಟು ಹೋಗುತ್ತಾರೆ. ಕೇಂದ್ರಗಳಲ್ಲಿ ಅಕ್ಕಿ ಕೊಡುವ ದಿನಾಂಕದಿಂದ ಅಕ್ಕಿ ಬಂದಾಗುವ ದಿನಾಂಕದವರೆಗೆ ಸದರಿ ಕಳ್ಳರ ಅನುವಾಯಿಗಳು ( ಹಿಂಬಾಲಕರು)
ಅಕ್ಕಿಯನ್ನು ಖರೀದಿ ಮಾಡಿ ಅಕ್ಕಿಯನ್ನು ಖದೀಮ ಕಳ್ಳರ ಗುಪ್ತ ಜಾಗಕ್ಕೆ ಸಾಗಿಸುತ್ತಾರೆ.ಈ ವಿಷಯ ಎಲಾ ಜನಸಾಮಾನ್ಯರಿಗೂ ಗೊತ್ತು. ಜನಸಂಪರ್ಕದಲ್ಲಿ ಇರುವ ಸ್ಥಳೀಯ ಅಧಿಕಾರಿಗಳಿಗೆ ಈ ವಿಷಯವಾಗಿ ಏನೂ ತಿಳಿದಿಲ್ಲಾ ಎಂದರೆ ಎಂತಹ ವಿಪರ್ಯಾಸ ಅಲ್ಲವೆ? ಕಾನೂನನ್ನು ಗೌರವಿಸದೇ ಕಾನೂನನ್ನು ಗಾಳಿಗೆ ತೂರಿ ಇಂತಹ ಅಕ್ರಮ ದಂಧೆ ನಡೆದರೆ ಮೇಲಿನ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಆದಕಾರಣ ಅಕ್ರಮ ಅಕ್ಕಿದಂಧೆ ಮಾಡುತ್ತಿರುವ ಖದೀಮಕಳ್ಳರ ಅಕ್ಕಿ ಮುಚ್ಚಿಡುವ ಗುಪ್ತ ಜಾಗವನ್ನು ಪತ್ತೆ ಹಚ್ಚಿ ಸದರೀ ಕಳ್ಳರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು .ವಿಶ್ವ ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಹಶಿಲ್ದಾರರಿಗೆ ಮನವಿಸಲ್ಲಿಸಿದರು
ಈ ಸಂದರ್ಭದಲ್ಲಿ ಎಂ ಕೆ ತಳಗಡೆ, ಮಾಬುಸಾಬ ಶಾಬಾದಿ, ಬಾಷುಸಾಬ ಡಂಬಳ, ಕೋಟೆಪ್ಪ ಕುರಿ, ರಮೇಶ ರಾಮೇನಹಳ್ಳಿ, ಮೊದಿನಸಾಬ ಶಿರಹಟ್ಟಿ, ಮಧುಮತಿ ಮಡಿವಾಳರ,ರಾಜೇಶ್ವರಿ ಪಾಟೀಲ, ಸುಜಾತಾ ಕೆದ್ರಳ್ಳಿ, ಸೇರಿದಂತೆ ಇತರರು ಹಾಜರಿದ್ದರು

Share this Article