ಮುಂಡರಗಿ : ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಶರಣ ಚರಿತಾಮೃತ ಪ್ರವಚನ ಮಂಗಲೋತ್ಸವ ನಿಮಿತ್ತ ಜು20.ರಿಂದ23ವರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಬಸವಣ್ಣನವರ, ಶ್ರೀ ಎಡೆಯೂರ ಸಿದ್ದಲಿಂಗೇಶ್ವರ ಶಿವಯೋಗಿಗಳ ನೂತನ ರಜತಮೂರ್ತಿ, ಪಂಚಲೋಹದ ನೂತನ ಮೂರ್ತಿ ಪಲ್ಲಕ್ಕಿ ಉತ್ಸವವು ಜರುಗುವವು ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು,
ಜು.20ಭಾನುವಾರ ಸಂಜೆ 7ಘಂಟೆಗೆ ಜನಪದ ಸಂಬ್ರಮ ಕಾರ್ಯಕ್ರಮವನ್ನು ಶ್ರೀಮಹಾಂತಸ್ವಾಮಿಗಳು ವಿರಕ್ತಮಠ ಬೇಲೂರ ಹಾಸನಹಾಗೂ ಗೋಣಿರುದ್ರ ಮಹಾಸ್ವಾಮಿಗಳು ನೇತೃತ್ವದಲ್ಲಿ ನಡೆಯಲಿದೆ,ದಕ್ಷೀಣ ಭಾರತ ಮಹಿಳಾ ಸಾಧಕಿ ಪ್ರಶಸ್ತಿ ಪುರಸ್ಕøರ ಶ್ರೀಮತಿ ವೀಣಾ ಹೇಮಂತಗೌಡ ಪಾಟೀಲ ಕೃಷ್ಣ ಪ್ರಸಾದಗೌಡ ಪಾಟೀಲ ಗೌರವ ಸತ್ಕಾರ ನೀಡಲಾಗುವುದು.
ಜು.21ಸೋಮವಾರ ಸಾಂಸ್ಕøತ ನಾಯಕ ಬಸವಣ್ಣ ಹಾಗೂ ಪತ್ರಿಕಾ ದಿನಾಚರಣೆ ಸಂಜೆ7ಘಂಟೆಗೆ ಶ್ರೀಸಿದ್ದ್ಬಸವ ಮಹಾಸ್ವಾಮೀಗಳ ಬಸವಾನಂದ ಸ್ವಾಮಿಗಳ ನೇತೃತ್ವದಲ್ಲಿ ಜರುಗುವುದು, ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ವಚನ ವೈಭವ ರತಿಕಾ ನೃತ್ಯ ಶಾಲೆ ಧಾರವಾಡ ಇವರಿಂದ ನೃತ್ಯ ಜರುಗುವದು,
ಜು22 ಮಂಗಳವಾರ ಸಂಜೆ7 ಗಂಟೆಗೆ ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಸಾನಿದ್ಯದಲ್ಲಿ ಪ್ರವಚನ ಮಂಗಲೋತ್ಸವ ಜರುಗುವದು ಗುರುಸಿದ್ದಪ್ಪ ಪಟ್ಟದಾರ್ಯ ಮಹಾಸ್ವಾಮಿಗಳುಗುರುಸಿದ್ದೇಶ್ವರ ಸ್ವಾಮಿಜಿ, ಬಸವರಾಜ ಗಿಂಡಿಮಠ ಅಧ್ಯಕ್ಷತೆ ವಹಿಯಿಸುವವರು, ಪಲ್ಲಕ್ಕಿ ಹಾಗೂ ಮೂರ್ತಿ ತಯಾರಕರಿಗೆ ಹಾಗೂ ದಾನಿಗಳಿಗೆ ಮತ್ತು ವಿಯಯ ಪ್ರಶಸ್ತಿ ಪುರಸ್ಕøತರಾದ ಆನಂದಗೌಡ ಪಾಟೀಲ ಅವರಿಗೆ ಸನ್ಮಾನ ನಡೆಯಲಿದೆ, ಡಾವ್ಹಿ.ಕೆ.ಸಂಕನಗೌಡ್ರ ರವಿ ಉಪ್ಪಿನಬೇಟಗೇರಿ,ಕೆ.ವ್ಹಿ.ಹಂಚಿನಾಳ.ಎನ್.ಡಿ.ಕೆಲೂರ ಡಾ.ಅನ್ನದಾನಿಮೇಟಿ ಲಿಂಗರಾಜಗೌಡ ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಯಿಸುವರು, ಬಸವ ಕಲಾ ಲೋಕ ದಾವಣಗೆರೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ, ವಿವಿಧ ಕ್ಷೇತ್ರದಲ್ಲಿ ಸಾಧನೆ ಗೌರವ ಸತ್ಕಾರ ನಡೆಯಲಿದೆ ಎಂದು ತಿಳಿಸಿದರು.
ಜು.23 ಬುಧವಾರ ಬೆಳಿಗ್ಗೆ 9ಗಂಟೆಗೆ ಭವ್ಯ ಮೆರವಣಿಗೆಯು ನೂತನ ಪಲ್ಲಕ್ಕಿ ಮಠದಿಂದ ಪ್ರಾರಂಭವಾಗಿ ಸಾಗಿ ಮೇನ ಭಜಾರ ರಸ್ತೆ,ಕನ್ನಿಕಪರಮೇಶ್ವರಿ ರಸ್ತೆ,ಬೃಂದವನ ಸರ್ಕಲ್, ಬಜಂತ್ರಿ ಓಣಿ, ಕೊಪ್ಪಳ ಕ್ರಾಸ್,ರಾಣಿ ಚನ್ನಮ್ಮ ವೃತ್ತ ಮೂಲಕ ನಗರದ ಮುಖ ಬೀದಿಗಳಲ್ಲಿ ಸಾಗಿ ಮಠ ಬಂದು ತಲುಪುವುದು ತಿಳಿಸಿದರು.
ಈ ಸಂಧರ್ಭದಲ್ಲಿ ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಬಸಯ್ಯ ಗಿಂಡಿಮಠ, ಎಚ್.ವಿರುಪಾಕ್ಷಗೌಡ, ಕೊಟ್ರೇಶ ಅಂಗಡಿ, ಪಾಲಾಕ್ಷಿ ಗಣದಿನ್ನಿ, ಪವನ ಚೋಪ್ರಾ, ಎನ್.ಎ.ಗೌಡರ ಇತರರು ಇದ್ದರು.

