ಮುಂಡರಗಿ : ಹೆಸ್ಕಾಂ ಲೈನ್ಮ್ಯಾನ್ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ರೈತನ ಜಮೀನಿನಲ್ಲಿ ನಡೆದಿದೆ.
ಮುಂಡರಗಿ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಕೊರ್ಲಹಳ್ಳಿ ಗ್ರಾಮದ ರೈತರೊಬ್ಬರು ಟ್ರಾನ್ಸ್ಫಾರ್ಮ್ರಗೆ ಸಂಬಂಧಿಸಿದ ಸಮಸ್ಯೆಯನ್ನು ಬಗೆಹರಿಸುವ ಸಂದರ್ಭದಲ್ಲಿ ಕರ್ತವ್ಯನಿರತ ಹೆಸ್ಕಾಂ ಲೈನ್ ಮ್ಯಾನ್ ಗಂಗಾಧರಯ್ಯ ಹಿರೇಮಠ(51) ಅವರಿಗೆ ವಿದ್ಯುತ್ ಅಪಘಾತವಾಯಿತು. ತಕ್ಷಣ ಅವರನ್ನು ಅಲ್ಲಿರುವ ಎಲ್ಲಾ ಸಿಬ್ಬಂದಿ ಮುಂಡರಗಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಕರೆತಂದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಲೈನ್ಮ್ಯಾನ್ ಮೃತರಾದರು ಎಂದು ತಿಳಿದುಬಂದಿದೆ.
ಮೃತರ ಸ್ವಗ್ರಾಮ ಮುಂಡರಗಿ ತಾಲೂಕಿನ ಹೆಸರೂರ ಗ್ರಾಮದವರು. ಪ್ರಸ್ತುತ ಪಟ್ಟಣದ ಹುಡೋ ಕಾಲೋನಿಯಲ್ಲಿ ವಾಸವಾಗಿದ್ದರು ಎಂದು ಹೇಳಲಾಗುತ್ತಿದೆ. ಈ ಸುದ್ದಿ ಕೇಳಿದ ಕುಟುಂಬಸ್ಥರ ಅಳಲು ಮುಗಿಲುಮುಟ್ಟಿತು. ಈ ಘಟನೆ ಕುರಿತು ಮುಂಡರಗಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
