*ಪತ್ರಕರ್ತರೆ ನಿಜವಾದ ಸಂಶೋಧಕರು

Samagraphrabha
2 Min Read

ನವಲಗುಂದ: ಪೆನ್ನು ಹಿಡಿದು ದೇಶದ ಜನರಲ್ಲಿ ಅರಿವು ಮೂಡಿಸುವ ಮೂಲಕ ಸಮಾಜದಲ್ಲಿ ನಡೆಯುವ ಶೋಷಣೆ ಹಾಗೂ ಕುಂದು ಕೊರತೆಗಳನ್ನು ಆಲಿಸಿ ಬಯಲಿಗೆಳೆದು ನ್ಯಾಯ ಒದಗಿಸಿಕೊಡುವ ಪತ್ರಕರ್ತರೇ ನಿಜವಾದ ಸಂಶೋಧಕರು ಎಂದು ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ಸಭಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪತ್ರಿಕಾ ಮಾಧ್ಯಮ ಪ್ರಜಾ ಪ್ರಭುತ್ವದ ನಾಲ್ಕನೇಯ ಅಂಗವೆಂದು ಪರಿಗಣಿಸಲ್ಪಟ್ಟಿದೆ, ಜನರು ಮತ್ತು ಸರ್ಕಾರಗಳ ನಡುವೆ ಇರುವ ಮಹತ್ವದ ಕೊಂಡಿ ಎಂದರೆ ಅದು ಪತ್ರಿಕೋದ್ಯಮವಾಗಿದೆ ಎಂದರು.

ರೈತ ಮುಖಂಡ ಬಸನಗೌಡ ಪಾಟೀಲ ಮಾತನಾಡಿ ಪತ್ರಕರ್ತರು ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯದೆ ಪ್ರತಿ ನಿತ್ಯ ಸಮಾಜ ಸೇವೆ ಮಾಡುತ್ತಾರೆ. ದಿನದ 24 ಘಂಟೆಗಳ ಕಾಲ ಜಾಗೃತರಾಗಿ ಸಮಾಜಕ್ಕಾಗಿ ಅರ್ಪಣೆ ಮಾಡಿಕೊಂಡು ಸೇವೆ ಮಾಡುತ್ತಿರುವವರು ಪತ್ರಕರ್ತರು ಎಂದರು.

ನವಲಗುಂದ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ವಿಕಾಸ ತದ್ದೇವಾಡಿ ಮಾತನಾಡಿ
ನೊಂದವರಿಗೆ ನೆರವು ದೊರಕಿಸಿಕೊಡುವಲ್ಲಿ ಪತ್ರಿಕಾ ರಂಗ ತೀವ್ರ ಪರಿಣಾಮಕಾರಿಯಾಗಿದೆ. ಸ್ವಾತಂತ್ರ ಸಂಗ್ರಾಮದಲ್ಲಿ ಪತ್ರಿಕಾ ಮಾದ್ಯಮ ಮಾಡಿದ ಹೋರಾಟ ಸ್ಮರಣೀಯವಾಗಿದೆ ಎಂದರು.

- Advertisement -
Ad image

ಮಾಜಿ ತಾ.ಪಂ ಅಧ್ಯಕ್ಷ ನಿಂಗಪ್ಪ ಬಾರಕೇರ ಮಾತನಾಡಿ ಪತ್ರಕರ್ತರನ್ನು ದುಂಬಿಗಳಂತೆ ಸಮಾಜದ ಮೂಲೆ-ಮೂಲೆಗಳಿಂದ ಸುದ್ದಿಗಳನ್ನು ಸಂಗ್ರಹಿಸಿ, ವಾಸ್ತವಿಕ ನೈಜ ಸುದ್ದಿಗಳಿಂದ ಹೊರತರಬೇಕು. ಈ ವೃತ್ತಿಯಲ್ಲಿ ಅನೇಕ ಅಡೆತಡೆಗಳು ಎದುರಾದರೂ, ಅವುಗಳನ್ನು ಮೆಟ್ಟಿ ನಿಂತು ವೃತ್ತಿ ಗೌರವಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನಿಯ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತಧ್ವನಿ ಸಂಘದ ತಾಲ್ಲೂಕು ಅಧ್ಯಕ್ಷ ನಂದೀಶ ಸಂಗಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಉಚಿತ ಬಸ್ ಪಾಸ್ ಕೊಡುತ್ತೀವೆ ಅಂತಾ ಹೇಳಿದ ಸರಕಾರ ಈವರೆಗೂ ಯಾವುದೇ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸಿಕ್ಕಿಲ್ಲ ಕೂಡಲೇ ಉಚಿತ ಬಸ್ ಪಾಸ್ ನೀಡಬೇಕು ಜೊತೆಗೆ ಪತ್ರಿಕಾ ವಿತರಕರಿಗೂ ಉಚಿತ ಬಸ್ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಇದೆ ವೇಳೆ ಗಣ್ಯರನ್ನು ಸನ್ಮಾನಿಸಲಾಯಿತು

ನವಲಗುಂದ ತಾಲ್ಲೂಕು ವಿತರಕರ ಸಂಘದ ಅಧ್ಯಕ್ಷ ದೇವರಾಜಸ್ವಾಮಿ ಹಿರೇಮಠ, ಶಿವು ನಾಯ್ಕ, ಸಂಜಯ ಗುರಿಕಾರ, ಗಂಗಾಧರ ಕತ್ತಿ, ಈರಣ್ಣ ಪೂಜಾರ, ನಿಂಗಪ್ಪ ಕುಂಬಾರ, ಅಬ್ದುಲರಝಾಕ್ ನದಾಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share this Article