ಲಕ್ಷ್ಮೇಶ್ವರ : ತಾಲೂಕಿನ ಶೆಟ್ಟಿಕೇರಿ ಅಕ್ಕಿಗುಂದ ಮದ್ಯದಲ್ಲಿ ಮಾಲ್ಕಿ ಜಮೀನಿನಲ್ಲಿ ಹಗಲು ರಾತ್ರಿ ಎನ್ನದೆ ಗುತ್ತಿಗೆದಾರರು ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದು ಅಧಿಕ ಭಾರಕ್ಕೆ ರಸ್ತೆಗಳು ಹಾಳಾಗುತ್ತಿದೆ ಎಂದು ಅಕ್ಕಿಗುಂದ ಗ್ರಾಮಸ್ಥರು ಟ್ರಕ್ಕ ಲಾರಿಗಳನ್ನು ತಡೆದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶೆಟ್ಟಿಕೇರಿ ಅಕ್ಕಿಗುಂದ ಮಧ್ಯದ ಅಕ್ಕಿಗುಂದ ಬೆಟ್ಟದ ಮಾಲ್ಕಿ ಜಮೀನಿನಲ್ಲಿ ಹಗಲು ರಾತ್ರಿ ಎನ್ನದೆ ಹಿಟಾಚಿ ಯಂತ್ರಗಳ ಮೂಲಕ ನಿರಂತರವಾಗಿ ಮಣ್ಣನ್ನು ಲೂಟಿ ಮಾಡಲಾಗುತ್ತಿದ್ದು ನಿತ್ಯ ನೂರಾರು ಲಾರಿಗಳು ಶೆಟ್ಟಿಕೇರಿಯಿಂದ ಅಕ್ಕಿಗುಂದ ಮಾರ್ಗವಾಗಿ ಗದುಗಿನ ರಸ್ತೆಗೆ ಗುತ್ತಿಗೆದಾರರು ಮಣ್ಣನ್ನು ಸಾಗಿಸುತ್ತಿದ್ದಾರೆ ಅಧಿಕ ಭಾರಕ್ಕೆ ರಸ್ತೆಗಳು ಹಾಳಾಗುತ್ತಿದ್ದು ಅನೇಕ ಕಡೆ ಗುಂಡಿಗಳು ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಶೆಟ್ಟಿಕೇರಿಯ ಅಕ್ಕಿಗುಂದ ಮಧ್ಯ ಭಾಗದಲ್ಲಿ ಹಗಲು ರಾತ್ರಿ ಎನ್ನದೆ ಮಣ್ಣನ್ನು ಲೂಟಿ ಮಾಡುತ್ತಿದ್ದರು ಕಂದಾಯ ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿಲ್ಲ ನಮ್ಮ ಊರಿನ ರಸ್ತೆಯ ಮೇಲೆ ನಮಗೆ ಓಡಾಡಲು ಆಗುತ್ತಿಲ್ಲ ಅಷ್ಟೊಂದು ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದೆ.ಇನ್ನಾದರು ಸಂಬಂಧಿಸಿದ ಅಧಿಕಾರಿಗಳು ಅಕ್ರಮವಾಗಿ ಮಣ್ಣು ಲೂಟಿ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಶೆಟ್ಟಿಕೇರಿ ಹಾಗೂ ಅಕ್ಕಿಗುಂದ ಮಧ್ಯಭಾಗದಲ್ಲಿ ಅಕ್ರಮ ಮಣ್ಣು ಸಾಗಿಸುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ ಹಾಗೇನಾದರೂ ಕಂಡರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
* ಧನಂಜಯ,ತಹಶೀಲ್ದಾರ ಲಕ್ಷ್ಮೇಶ್ವರ.

