ಬಿತ್ತನೆಗೆ ಬೀಜ, ಗೊಬ್ಬರ ಸಮರ್ಪಕ ವಿತರಣೆಗೆ ಆಗ್ರಹ

Samagraphrabha
2 Min Read

ನವಲಗುಂದ: ತಾಲೂಕಿನ ರೈತರಿಗೆ ಉತ್ತಮ ಗುಣ ಮಟ್ಟದ ಬೀಜ, ಕೃಷಿ ಸಾಮಗ್ರಿ, ರಸಗೊಬ್ಬರ ಸಮರ್ಪಕವಾಗಿ ಸಕಾಲದಲ್ಲಿ ಪೂರೈಕೆ ಮಾಡಬೇಕೆಂದು ರೈತ ಮುಖಂಡ ಮಾಬುಸಾಬ ಯರಗುಪ್ಪಿ ಆಗ್ರಹ ಮಾಡಿದರು.

ತಹಶೀಲ್ದಾರ ಕಚೇರಿಯ ಶಿರಸ್ತೆದಾರ ಕೃಷ್ಣ ಆರೇರ ಅವರ ಮೂಲಕ ಜಿಲ್ಲಾಧಿಕಾರಿ ಹಾಗೂ ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ನೀಡಿ ಮಾತನಾಡಿದ ಅವರು ರೈತರಿಗೆ ಗುಣಮಟ್ಟದ ಬೀಜ ಹಾಗೂ ಗೊಬ್ಬರಗಳನ್ನು ಪೂರೈಸಬೇಕು, ಕೆಲವು ಕೀಟನಾಶಕ ಮಾರಾಟಗಾರರು ಸರ್ಕಾರದ ದರಕ್ಕಿಂತ ಹೆಚ್ಚಿನ ದರದಲ್ಲಿ ಗೊಬ್ಬರ, ಬೀಜ, ಕೀಟನಾಶಕ ಮಾರಾಟ ಮಾಡುವುದು ಕಂಡು ಬರುತ್ತಿದ್ದು,ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಪೂರ್ವಕ ಆಗ್ರಹ ಮಾಡಿದರು.

ರೈತ ಬಶೀರಅಹ್ಮದ ಹುನಗುಂದ ಮಾತನಾಡಿ ರೈತರಿಗೆ ಸಮರ್ಪಕವಾಗಿ ಸರ್ಕಾರದಿಂದ ಬರುವಂತಹ ಸವಲತ್ತು ತಲುಪಿಸಿದಾಗ ಅವರು ಉತ್ತಮ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ, ರಸಗೂಬ್ಬರ ನಿಯಂತ್ರಣ ಆದೇಶ ಬೀಜ ಕಾಯ್ದೆ ಮತ್ತು ನಿಯಮಗಳು ಸೇರಿದಂತೆ ಕೃಷಿ ಪರಿಕರ ಮಾರಾಟಕ್ಕೆ ಸಂಬಂಧಿಸಿದ ಕಾಯ್ದೆಗಳನ್ನು ಅನುಷ್ಠಾನಗೊಳಿಸುವ ಮೂಲಕ ರೈತರಿಗೆ ಅನಕೂಲವಾಗುವಂತೆ ನೋಡಿಕೊಳ್ಳಬೇಕೆಂದು ಆಗ್ರಹ ಮಾಡಿದರು.

ಈ ಸಂದರ್ಭದಲ್ಲಿ ಸುಭಾಸ ಕಿತ್ತಲಿ, ಅಣ್ಣಪ್ಪ ಬದನಿಕಾಯಿ, ಬಾಬುಶ್ಯಾ ಮಕಾಂದಾರ, ಜಾಕೀರ ಧಾರವಾಡ, ಖಾಜಾಸಾಬ ನಿಗಧಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

- Advertisement -
Ad image

ಬೇಡಿಕೆ ಮತ್ತು ಆಗ್ರಹ

1) ರೈತ ಸಂಪರ್ಕ ಕೇಂದ್ರದಲ್ಲಿ ಸಬ್ಸಿಡಿ ದರದಲ್ಲಿ ರೈತರಿಗೆ ಸಿಗುವಂತಹ ವಿವಿಧ ಬೆಳೆಗಳ ಬೀಜ ಉತ್ತಮ ಗುಣ ಮಟ್ಟದಲ್ಲಿ ಪೂರೈಕೆ ಮಾಡಬೇಕು.

2) ರೈತರಿಗೆ ಗೂಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಬೇಕು, ಗೂಬ್ಬರ ವಿತರಣೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡದಂತೆ ಕ್ರಮ ಜರುಗಿಸಬೇಕು.

3) ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಕೃಷಿ ಸಾಮಗ್ರಿಗಳು ಸಮರ್ಪಕವಾಗಿ ಸಕಾಲದಲ್ಲಿ ಸಿಗುವಂತೆ ನೋಡಿಕೊಳ್ಳಬೇಕು.

4) ರಸಗೂಬ್ಬರ ದಾಸ್ತಾನು ವಿತರಣೆ ಸಂಬಂಧ ಮಾಹಿತಿಯ ಪಟ್ಟಿಯನ್ನು ಪ್ರತಿನಿತ್ಯ ಪ್ರಕಟಿಸುವುದರ ಜೊತೆಗೆ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಲು ಕ್ರಮ ಜರುಗಿಸಬೇಕು.

5) ಬೀಜ ಮತ್ತು ರಸಗೂಬ್ಬರ ಕೀಟನಾಶಕ ಮಾರಾಟಗಾರರು ಸರ್ಕಾರ ನಿಗಧಿಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡದಂತೆ ಕ್ರಮ ಜರುಗಿಸಬೇಕು.

6) ಮಾರಾಟಗಾರರ ಪ್ರತಿ ಅಂಗಡಿಗಳಲ್ಲಿ ಪ್ರತಿ ಬೀಜ, ಗೂಬ್ಬರ ಕೀಟನಾಶಕಗಳ ದರ ಪಟ್ಟಿಯನ್ನು ಕಡ್ಡಾಯವಾಗಿ ಹಾಕಬೇಕು, ದಾಸ್ತಾನು ರಜಿಸ್ಟರ್‌ನಲ್ಲಿರುವ ದಾಸ್ತಾನಕ್ಕೂ ಭೌತಿಕ ದಾಸ್ತಾನಕ್ಕೂ ಸರಿ ಹೊಂದುವಂತೆ ನೋಡಿಕೊಳ್ಳಬೇಕು

7) ರೈತರಿಗೆ ಬೀಜ, ಗೂಬ್ಬರ ವಿತರಣೆಗೆ ಸಂಬಂಧಪಟ್ಟಂತೆ ಬಿಲ್ ವಿತರಿಸುವಂತೆ ಸಂಬಂಧಪಟ್ಟ ಅಂಗಡಿಕಾರರಿಗೆ ಸೂಚಿಸಬೇಕು

Share this Article