ವರದಿ: ಮಂಜುನಾಥ ಕುದರಿಕೋಟಿ
ಗಜೇಂದ್ರಗಡ : ಪಟ್ಟಣದ ಕುಷ್ಟಗಿ ರಸ್ತೆಯ ವಡ್ಡರ ಓಣಿಯಲ್ಲಿ ನಿರ್ಮಾಣವಾಗುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಕಟ್ಟಡ ಕಾಮಗಾರಿ ಕಳಪೆಯಿಂದಾಗಿ ಕೂಡಿದ್ದು ಕೋಟ್ಯಂತರ ರೂ. ದುರುಪಯೋಗವಾಗುತ್ತಿದೆ ಎಂದು ಸಾರ್ವಜನಿಕರಿಂದ ಆರೋಪ ಕೇಳಿಬಂದಿದೆ.
ಕಾಮಗಾರಿ ಸ್ಥಳದಲ್ಲಿ ಯಾವುದೇ ಮಾಹಿತಿ ಫಲಕವಿಲ್ಲ ಸದ್ಯ ನಿರ್ಮಾಣವಾಗುತ್ತಿರೋ
ವಸತಿ ನಿಲಯ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಅಂದಾಜು ವೆಚ್ಚ, ಕಟ್ಟಡ ನೀಲನಕ್ಷೆ ಮಾಹಿತಿ ಸಾರ್ವಜನಿಕವಾಗಿ ಪ್ರಕಟಿಸಿಲ್ಲ. ಕಾಮಗಾರಿಗೆ ಬಳಸುವ ಸಿಮೆಂಟ್, ಕಬ್ಬಿಣ, ಮರಳು, ಇತರೆ ಸಾಮಗ್ರಿಗಳ ಗುಣಮಟ್ಟದ ಪರೀಕ್ಷೆ ನಡೆದಿಲ್ಲ ಕಳಪೆ ಮಟ್ಟದ ಸಾಮಗ್ರಿಗಳನ್ನು ಬಳಸಿಕೊಂಡು ಕಾಮಗಾರಿ ಸ್ಥಳದಲ್ಲಿಯೇ ಸಿಮೆಂಟ್ ಇಟ್ಟಂಗಿಗಳನ್ನು ತಯ್ಯಾರಿಸಿ ಸರಿಯಾದ ಕ್ಯೂರಿಂಗ್ ಮಾಡದೆ ಕಟ್ಟಡ ಕಾಮಗಾರಿ ನಡೆಸುತ್ತಿದ್ದಾರೆ, ತಾಂತ್ರಿಕ ವಿಭಾಗದ ಅಧಿಕಾರಿಗಳು ಕಾಮಗಾರಿ ಅನುಷ್ಠಾನ ಹಂತದ ಪ್ರಗತಿ ಪರಿಶೀಲಿಸುತ್ತಿಲ್ಲ. ಹೀಗೆ ಅನೇಕ ದೂರು ಕಟ್ಟಡ ಕಾಮಗಾರಿ ಕುರಿತು ಕೇಳಿ ಬರುತ್ತಿವೆ ಈ ಬಗ್ಗೆ ಅಧಿಕಾರಿಗಳು ಗಮನ ನೀಡದೆ ಹೋಗಿದ್ದು ದುರಾದೃಷ್ಟ.
ವಸತಿ ನಿಲಯದ ಮಕ್ಕಳ ಭವಿಷ್ಯ ವೃದ್ಧಿಸುವ ಉದ್ದೇಶದಲ್ಲಿ ಸದೃಢವಾಗಿ ನಿರ್ಮಾಣಗೊಳ್ಳಬೇಕಾದ ಕಟ್ಟಡಗಳು, ಆಡಳಿತದ ನಿರ್ಲಕ್ಷ್ಯದುಂದಲೋ ಅಥವಾ ಹಣದಾಸೆಯಿಂದಾಗಿ ಕಳಪೆ ದರ್ಜೆಯಲ್ಲಿ ನಿರ್ಮಾಣಗೊಳ್ಳುತ್ತಿದೆ ಮಕ್ಕಳ ಜೀವಕ್ಕೆ ಅಪಾಯ ತರುವಂತೆ ಕಟ್ಟಡ ಕಾಮಗಾರಿ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಸಂಪರ್ಕಕ್ಕೆ ಸಿಗದ ತಾಲೂಕು ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ :
ತಾಲೂಕು ಹಿಂದುಳಿದ ವರ್ಗಗಳ ಇಲಾಖೆ ರೋಣ ಪಟ್ಟಣದಲ್ಲಿ ಇರುವದರಿಂದ ಕಚೇರಿಗೆ ಹೋದರು ತಾಲೂಕು ಅಧಿಕಾರಿ ಮಲ್ಲಿಕಾರ್ಜುನ ಹಣಸಿ ಲಭ್ಯವಿಲ್ಲ, ಫೋನ್ ಕರೆ ಮೂಲಕವು ಅವರು ಸಂಪರ್ಕಕ್ಕೆ ಸಿಗದಿರುವದು ವಿಪರ್ಯಾಸದ ಸಂಗತಿಯಾಗಿದೆ.

ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಹಿನ್ನಲೆಯಲ್ಲಿ ಸರ್ಕಾರ ನೂತನ ವಸತಿ ನಿಲಯಗಳ ನಿರ್ಮಾಣಕ್ಕೆ ಮುಂದಾಗಿದೆ ಆದರೆ ಅಧಿಕಾರಿಗಳು, ಗುತ್ತಿಗೆದಾರರು ಸರ್ಕಾರದ ಹಣವನ್ನು ದುರುಪಯೋಗ ಗೊಳಿಸಿ ಕಳಪೆ ಗುಣಮಟ್ಟದ ಕಟ್ಟಡವನ್ನು ನಿರ್ಮಿಸುತ್ತಿದ್ದಾರೆ. ಈ
ಕಟ್ಟಡ ಕಾಮಗಾರಿ ಯಾವುದೇ ಗುಣಮಟ್ಟದಿಂದ ಕೂಡಿಲ್ಲ, ಕೂಡಲೇ ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು, ಇತ್ತ ಗಮನಹರಿಸಿ ಕಟ್ಟಡ ಕಾಮಗಾರಿಯನ್ನು ಪರಿಶೀಲನೆ ನಡೆಸಬೇಕು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಳಪೆ ಕಾಮಗಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು.
ಮಂಜುನಾಥ್ ರಾಠೋಡ್, ರಾಜ್ಯಾಧ್ಯಕ್ಷರು, ಕ್ರಾಂತಿಸೂರ್ಯ ಜೈಭೀಮ್ ಸೇನೆ (ರಿ) ಗಜೇಂದ್ರಗಡ.
ನನ್ನ ಹತ್ತಿರ ಯಾವುದೇ ಕ್ರಿಯಾಯೋಜನೆ ಇಲ್ಲಾ, ಅವರು ಬಂದು ಹೇಳಿ ಹೋಗುತ್ತಾರೆ ನಾನು ಕೆಲಸ ಮಾಡಿಸುತ್ತೇನೆ ಅವಧಿಯೊಳಗೆ ಕೆಲಸ ಮುಗಿಸುವದಷ್ಟೇ ನನ್ನ ಕೆಲಸ ನೀವು ಸಂಬಂಧ ಪಟ್ಟ ಇಲಾಖೆಯವರನ್ನು ಕೇಳಬೇಕು, ಇದು ಕರ್ನಾಟಕ ಗೃಹ ಮಂಡಳಿ ಇಲಾಖೆಗೆ ಸೇರಿದ ಕಾಮಗಾರಿಯಾಗಿದೆ. ಇಂಜಿನಿಯರ್ಗಳು ಎರಡು ತಿಂಗಳಿಗೊಮ್ಮೆ ಬರುತ್ತಾರೆ ಹೆಚ್ಚಿನ ಮಾಹಿತಿಗಾಗಿ ಅವರನ್ನು ಸಂಪರ್ಕಿಸಿ.
ಗುತ್ತಿಗೆದಾರ

