ಗಜೇಂದ್ರಗಡ :
ಸಮಾಜ ಮತ್ತು ಮಾಧ್ಯಮಕ್ಕೂ ಅವಿನಾಭಾವ ಸಂಬಧವಿದೆ. ಪತ್ರಿಕೆಗಳು ಸಮಾಜದ ಜೀವಾಳವಾಗಿದ್ದು, ಮಾದ್ಯಮ ಸಮಾಜದ ಪ್ರತಿಬಿಂಬ ಎಂದು ಜಿಲ್ಲಾ ಕಾರ್ಯನಿರತ ಪತ್ರ ಕರ್ತ ಸಂಘ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ಅನಂತ ಕಾರ್ಕಳ ಹೇಳಿದರು.
ಸ್ಥಳೀಯ ಎಸ್.ಎಂ. ಭೂಮರೆಡ್ಡಿ ಪಿಯು ಕಾಲೇಜನಲ್ಲಿ ಸೋಮವಾರ ನಡೆದ ಬಿಎಸ್‌ಎಸ್ ಮಿಡಿಯಾ ತರಬೇತಿ ಕೇಂದ್ರ, ಎಸಿಎನ್ ವತಿಯಿಂದ ಮಾಧ್ಯಮ ಕಾರ್ಯಗಾರ, ಪತ್ರಿಕಾ ದಿನಾಚರಣೆ ಪ್ರಯುಕ್ತ ಡಾ. ಡಿ.ವಿ. ಗುಂಡಪ್ಪನವರು, ಡಾ. ಹರ್ಮನ್ ಮೋಗ್ಲಿಂಗ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಸಿ ವಿಶೇಷ ಉಪನ್ಯಾಸ ನೀಡಿದರು.
ಸಮಾಜದ ಮುಖ್ಯ ಪ್ರತಿನಿಧಿಯಾಗಿ ಮಾಧ್ಯಮ ಕಾರ್ಯನಿರ್ವಹಿಸುತ್ತಿದೆ. ಪತ್ರಿಕೆಗಳು ಸಮಾಜದ ಕನ್ನಡಿಯಿದ್ದಂತೆ. ಸಮುದಾಯವನ್ನು, ದೇಶವನ್ನು, ಜಗತ್ತನ್ನು ಏಕಕಾಲದಲ್ಲಿ ಮತ್ತು ಸಾಮೂಹಿಕವಾಗಿ ಒಂದೇ ಬಾರಿಗೆ ಎಚ್ಚರಿಸಬಲ್ಲ ಏಕೈಕ ಸಮೂಹ ಸಂವಹನ ಶಕ್ತಿ ಪತ್ರಿಕೆಗಳಿವೆ. ಆಧುನಿಕ ಜಗತ್ತಿನ ಹೊಸ ಆವಿಷ್ಕಾರಗಳು ಸಮೂಹ, ಮುದ್ರಣ ಮಾಧ್ಯಮದಲ್ಲಿ ಸಾಕಷ್ಟು ಬದಲಾವಣೆ ಆಗಿವೆ. ಜನರಿಗೆ ಹಿಂದಿನಿಕ್ಕಿAತಲೂ ಶೀಘ್ರಗತಿಯಲ್ಲಿ ಸುದ್ದಿ ತಲುಪುತ್ತಿವೆ. ಡಿಜಲೀಕರಣ ಸೋಶಿಯಲ್ ಮೀಡಿಯಾ ಇಂದಿನ ಪ್ರಮುಖ ಮಾಧ್ಯಮವಾಗಿ ಹೊರ ಹೊಮ್ಮುತ್ತಿದೆ ಎಂದರು.
ಪತ್ರಿಕೋದ್ಯಮ ಒಂದು ಉತ್ತಮ ದಿನ ಪತ್ರಿಕೆ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದರೆ ಆ ಸಮಾಜ ಆರೊಗ್ಯಯುತ ಸಮಾಜವಾಗಿ ಪರಿವರ್ತಿತವಾಗುತ್ತದೆ. ಪತ್ರಿಕೆಗಳಿಗೆ ಐದನೂರು ವರ್ಷಗಳ ಇತಿಹಾಸವಿದೆ. ಭಾರತದ ಮೊತ್ತ ಮೊದಲ ಪತ್ರಿಕೆ ದಿ ಹಿಕ್ಕೀಸ್ ಗೆಜೆಟ್ ಅಥವಾ ಬೆಂಗಾಲ್ ಗೆಜೆಟ್ ೧೭೮೦ ರಲ್ಲಿ ಬ್ರಿಟಿಷ್ ವ್ಯಕ್ತಿ ಜೇಮ್ಸ್ ಆಗಸ್ಟಸ್ ಹಿಕ್ಕಿಯಿಂದ ಪ್ರಾರಂ ಭವಾಯಿತು ಎಂದರು.
ಸಮಾರಂಭ ಉದ್ಘಾಟಿಸಿದ ತಹಸೀಲ್ದಾರ ತಹಸೀಲ್ದಾರ ಕಿರಣಕುಮಾರ ಕುಲಕರ್ಣಿ ಮಾತನಾಡಿ, ಸಮಾಜ ಸುಧಾರಣೆಯಲ್ಲಿ ಮಾಧ್ಯಮಗಳ ಪಾತ್ರ ಅಪಾರವಾಗಿದೆ. ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಪತ್ರಿಕೆಗಳು ಬಹಳಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ಹಿಸುತ್ತವೆ. ಸಮಾಜದಲ್ಲಿ ಬೇರು ಬಿಟ್ಟಿರುವ ಸಮಸ್ಯೆಗಳು, ನೊಂದವರ ಪರ ಸುದ್ದಿ ಬಿತ್ತರಿಸುವ ಮೂಲಕ ಸಂಬAಧಿಸಿದವರ ಕಣ್ತೆರೆಸುತ್ತವೆ. ಸರಕಾರ ಮತ್ತು ಸಮಾಜ ಕೊಂಡಿಯಾಗಿ, ಜನದ್ವನಿಯಾಗಿ ಕಾರ್ಯ ನಿರ್ವಹಿಸುವ ಪತ್ರಿಕೆಗಳು ಆಡಳಿತಕ್ಕೆ ಮಾರ್ಗದರ್ಶನ ನೀಡುತ್ತವೆ ಎಂದರು. ಪತ್ರಕರ್ತ ಸಲಿಂ ಬಳಬಟ್ಟಿ ಮಾತನಾಡಿ, ಭಾರತದ ಸ್ವಾತಂತ್ರ‍್ಯ ಹೋರಾಟದಲ್ಲಿ ಪತ್ರಿಕೆಗಳು ಮಹತ್ತರ ಪಾತ್ರ ವಹಿಸಿದ್ದವು. ಪತ್ರಿಕೆಗಳು ಬ್ರಿಟಿಷರ ವಿರುದ್ಧ ಸಾರ್ವಜನಿಕರನ್ನು ಸ್ವಾತಂತ್ರ‍್ಯ ಹೋರಾಟಕ್ಕೆ ಕರೆ ನೀಡಿ ಉತ್ತೇಜಿಸಿದವು ಎಂದರು.
ಪ್ರಾ. ಜಿ.ಬಿ. ಗುಡಿಮನಿ ಮಾತನಾಡಿದರು. ವೈದ್ಯರಾದ ಡಾ. ಆರ್.ಎಸ್. ಜೀರೆ ಅಧ್ಯಕ್ಷತೆ ವಹಿಸಿದ್ದರು. ಕಾಶಿನಾಥ ಮಿಸ್ಕಿನ್, ಪತ್ರಕರ್ತರಾದ ಕಿರಣ ನಿಡಗುಂದಿ, ಶಂಕರ್ ರಾಟೋಡ, ಆಕಾಶ ತಾಳಿಕೋಟಿ, ಮುಸ್ತಾಕ ಓಟಗೂರ, ರಾಘವೇಂದ್ರ ಕುಲಕರ್ಣಿ, ಜಗದೀಶ ಹೊಸಲ್ಳಿ, ಅರವಿಂದ ವಡ್ಡರ್, ಸಂತೊಷ ವಾಲಿ ಇನ್ನಿತರಿದ್ದರು. ಚೈತ್ರಾ ಗಿತೆ ಜನಮನ ಸೆಳೆಯಿತು.
ಗಜೇಂದ್ರಗಡ ಎಸ್.ಎಂ. ಭೂಮರೆಡ್ಡಿ ಪಿಯು ಕಾಲೇಜನಲ್ಲಿ ಸೋಮವಾರ ನಡೆದ ಬಿಎಸ್‌ಎಸ್ ಮಿಡಿಯಾ ತರಬೇತಿ ಕೇಂದ್ರ, ಎಸಿಎನ್ ವತಿಯಿಂದ ಮಾಧ್ಯಮ ಕಾರ್ಯ ಗಾರ, ಪತ್ರಿಕಾ ದಿನಾಚರಣೆಯಲ್ಲಿ ಪತ್ರಕರ್ತ ಅನಂತ ಕಾರ್ಕಳ ಮಾತನಾಡಿದರು.
ಸಮಾರಂಭ ಉದ್ಘಾಟಿಸಿದ ತಹಸೀಲ್ದಾರ ಕಿರಣಕುಮಾರ ಕುಲಕರ್ಣಿ ಮಾತನಾಡಿದರು.
ಮಾಧ್ಯಮ ಕಾರ್ಯ ಗಾರ, ಪತ್ರಿಕಾ ದಿನಾಚರಣೆಯಲ್ಲಿ ಡಾ ಹರ್ಮನ್ ಮೊಗ್ಲಿಂಗ್, ಡಾ. ಡಿ.ವಿ. ಗುಂಡಪ್ಪನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

