ಗದಗ ತಾಲೂಕು ಪಂಚಾಯತನಲ್ಲಿ ನಿಲ್ಲದ 5 ದಿನದ ನರೇಗಾ ಪ್ರತಿಭಟನೆ…

Samagraphrabha
2 Min Read

ಶಾಂತಿಯುತ ಹೋರಾಟವೇ ನಮ್ಮ ಧ್ಯೇಯ : ಕಿರಣಕುಮಾರ ಎಸ್ ಎಚ್

ಗದಗ :- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿ ವೇತನ ಪಾವತಿಯ ವಿಳಂಬದ ವಿರುದ್ಧ ಕಳೆದ ಐದು ದಿನಗಳಿಂದ ರಾಜ್ಯಾದ್ಯಂತ ನಡೆಯುತ್ತಿರುವ ಅಸಹಕಾರ ಚಳುವಳಿಯ ಭಾಗವಾಗಿ, ಗದಗ ತಾಲೂಕ ಪಂಚಾಯತ್‌ನಲ್ಲಿ 5ನೇ ದಿನದ ಪ್ರತಿಭಟನೆ ಯಶಸ್ವಿಯಾಗಿ ನಡೆಯಿತು.

ಈ ಪ್ರತಿಭಟನೆ ಯಲ್ಲಿ ರಾಜ್ಯ ನೇವಾಕ ಸಂಘದ ಜಿಲ್ಲಾ ಪ್ರತಿನಿಧಿ ಕಿರಣಕುಮಾರ ಎಸ್. ಎಚ್. ಮಾತನಾಡಿ ಕಳೆದ ಐದು ದಿನಗಳಿಂದ ರಾಜ್ಯ ನರೇಗಾ ಕುಟುಂಬದ ಸದಸ್ಯರು ಒಗ್ಗಟ್ಟಿನಿಂದ ಅಹಕಾರ ಚಳುವಳಿ ನಡೆಸುತ್ತಿದ್ದೇವೆ,
ಈ ಅಸಹಕಾರ ಚಳುವಳಿಯಿಂದ ವೇತನ ಪಾವತಿ ಪ್ರಕ್ರಿಯೆಯ ವೇಗ ಹೆಚ್ಚುತ್ತಿದೆ ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು. ಆದರೂ ಕಡಿಮೆ ಮೊತ್ತದ FTO (ಫಂಡ್ ಟ್ರಾನ್ಸ್‌ಫರ್ ಆರ್ಡರ್) ರಚನೆಯ ಪ್ರಕ್ರಿಯೆ ಯಶಸ್ವಿಯಾಗಿದೆ, ವೇತನ ಪಾವತಿಗೆ ಸಂಬಂಧಿಸಿದ FTO ಸೃಜನೆ ಬಗ್ಗೆ ಜಿಲ್ಲಾ ಪಂಚಾಯತ ಇಂದ ಕ್ರಮ ವಹಿಸಲಾಗುತ್ತಿದೆ. ಆಯುಕ್ತಾಲಯವು ಸಹ
ಇದಕ್ಕೆ ಸ್ಪಂದನೆ ನೀಡುತ್ತಿದೆ..‌ಮುಂದಿನ ವಾರದೊಳಗೆ ವೇತನ ಪಾವತಿ ಖಂಡಿತವಾಗಿ ಆಗುತ್ತದೆ ಎಂದು ತಿಳಿಸಿದರು.‌ ಈ ಹಿನ್ನೆಲೆ “ನರೇಗಾ ಸಿಬ್ಬಂದಿಯ ವೇತನ ವಿಳಂಬದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲು ನಾವು ನೀವೆಲ್ಲರೂ ಹೋರಾಟ ಆರಂಭಿಸಿದ್ದೇವೆ. ಈ ಹಿನ್ನೆಲೆ ರಾಜ್ಯ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ,ಈ ವಿಷಯದಲ್ಲಿ ಸ್ಪಷ್ಟತೆ ಪಡೆಯುತ್ತೇವೆ. ಎಲ್ಲಾ ಸಿಬ್ಬಂದಿಗಳ ಒಗ್ಗಟ್ಟಿನಿಂದ ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲು ಕ್ರಮ ಕೈಗೊಳ್ಳುವ” ಭರವಸೆ ಇದೆ ಎಂದು ಹೇಳಿದರು…

ಜಿಲ್ಲಾ ಪಂಚಾಯತ ಐಇಸಿ ಸಂಯೋಜಕ ವೀರಭದ್ರಪ್ಪ ಸಜ್ಜನ ಮಾತನಾಡಿ, “ಕಳೆದ ಅರು ತಿಂಗಳಿಂದ 130ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ವೇತನ ಪಾವತಿಯಾಗಿಲ್ಲಾ. ಈ ಅಸಹಕಾರ ಚಳುವಳಿಯಿಂದಾಗಿ ಸರ್ಕಾರದ ಗಮನ ಸೆಳೆಯಲಾಗಿದೆ. ರಾಜ್ಯ ಪಿಡಿಒ ಕ್ಷೇಮಾಭಿವೃದ್ಧಿ ಸಂಘ, ರಾಜ್ಯ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘ, ಮತ್ತು ರಾಜ್ಯ ಡಿಇಒ ಸಂಘದಂತಹ ಹಲವು ಸಂಘಟನೆಗಳ ಬೆಂಬಲದೊಂದಿಗೆ ನಾವು ಒಗ್ಗಟ್ಟಾಗಿ ಮುಂದುವರಿಯುತ್ತೇವೆ,” ಎಂದರು. ಇನ್ನು ಪ್ರತಿಭಟನಾಕಾರರು, ಒಗ್ಗಟ್ಟಿನಿಂದ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವವರೆಗೆ ಹಿಂದೆ ಸರಿಯುವುದಿಲ್ಲಾ ಎಂದು ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯಾದ್ಯಂತ ಪ್ರತಿಭಟನಾಕಾರರು ಆಶಾದಾಯಕ ಮನೋಭಾವದಿಂದ ತಮ್ಮ ಅಸಹಕಾರ ಚಳುವಳಿಯನ್ನು ಮುಂದುವರೆಸಲಿದ್ದಾರೆ ಎಂದರು

- Advertisement -
Ad image

ಈ ಪ್ರತಿಭಟನೆಯಲ್ಲಿ ಮಹೇಶ್ ಚಿತವಾಡಗಿ, ಬಸವರಾಜ ಮಣ್ಣಮನವರ, ಮೋಹನ ಹೊಂಬಳ, ಚಂದ್ರು ಹಳ್ಳಿ, ನವೀನ ಬಸರಿ, ಅಜಯ ಅಬ್ಬಿಗೇರಿ, ಮಂಜುನಾಥ ತಳವಾರ, ಮಂಜುನಾಥ ಕುಲಕರ್ಣಿ, ವಿರೇಶ ಪಟ್ಟಣಶೆಟ್ಟಿ, ಸಚಿನ ಭಂಡಾರಿ, ಪ್ರಶಾಂತ ಯಾವಗಲಮಠ, ತಾಲೂಕಿನ ಬಿ. ಎಫ್. ಟಿ ಗಳು ಹಾಜರಿದ್ದರು.

Share this Article