ಪೆಟ್ರೋಲ್ ಬಂಕ್ ಗೆ ನುಗ್ಗಿ ಖಾರದ ಪುಡಿ ಎರಚಿ ನಗದು ದೋಚಿ ಪರಾರಿಯಾದ ಖದೀಮರು

Samagraphrabha
1 Min Read

ಗದಗ : ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಖಾರದ ಪುಡಿ ಎರಚಿ ನಗದು ದೋಚಿ ಪರಾರಿಯಾದ ಘಟನೆ ನಗರದ ಬೆಟಗೇರಿಯ ಶರಣಬಸವೇಶ್ವರ ನಗರದ ಸಾಯಿ ಪೆಟ್ರೋಲ್ ಬಂಕ್ ನಲ್ಲಿ ಘಟನೆ ನಡೆದಿದೆ.

ತಡ ರಾತ್ರಿ 2 ಗಂಟೆ ಸುಮಾರಿಗೆ ಪೆಟ್ರೋಲ್ ಬಂಕ್’ಗೆ ನುಗ್ಗಿದ ಮೂವರು
ಕಳ್ಳರು ಪೆಟ್ರೊಲ್ ಬಂಕ್ ನ ಗಾಜಿನ ಬಾಗಿಲು ಒಡೆದು ಸಿಬ್ಬಂದಿ ಕಣ್ಣಿಗೆ ಖಾರದ ಪುಡಿ ಎರಚಿ ಕ್ಯಾಶ್ ಬ್ಯಾಗ್ ಕಿತ್ತುಕೊಂಡು ಬಾಗಿಲು ಒಡೆದಿದ್ದಾರೆ ಕ್ಯಾಶ್ ಬ್ಯಾಗ ಕೊಡದಿದದ್ದಕ್ಕೆ ಚಾಕು ತೋರಿಸಿ ಬೆದರಿಕೆ ಹಾಕಿದ್ದಾರೆ.

ವಸತಿ ಪ್ರದೇಶವಿರುವ ಸ್ಥಳದಲ್ಲಿ ಅಕ್ಕ ಪಕ್ಕದ ನಾಲ್ಕು ಮನೆಗಳಲ್ಲಿ ಸಿ ಸಿ ಕ್ಯಾಮರಾ ಇದ್ದರೂ ಆದರೆ ರಾತ್ರಿ ಆ ನಾಲ್ಕು ಮನೆಗಳಲ್ಲಿ ವಿದ್ಯುತ್ ವ್ಯತ್ಯಯ ಪೂರ್ವನಿಯೋಜಿತ ಕಳ್ಳತನ ಶಂಕೆ ಎಂದು ಸ್ಥಳೀಯ ವ್ಯಕ್ತಪಡಿಸಿದ್ದಾರೆ.

ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು
ಸ್ಥಳಕ್ಕೆ ಬೆಟಗೇರಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

- Advertisement -
Ad image

Share this Article