ಮಲಪ್ರಭಾ ಕಾಲುವೆಗೆ ನೀರು ಹರಿಸಿ- ತಹಶೀಲ್ದಾರರಿಗೆ ಮನವಿ

Samagraphrabha
1 Min Read

ನವಲಗುಂದ: ಮಲಪ್ರಭಾ ಬಲದಂಡೆ ಕಾಲುವೆಗೆ ಹೊಂದಿಕೊಂಡ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಬರುವ ನವಲಗುಂದ ಹಾಗೂ ಹುಬ್ಬಳ್ಳಿ ನರಗುಂದ ತಾಲೂಕುಗಳಲ್ಲಿ ಮಳೆ ಬಾರದೆ ಬೆಳೆಗಳು ಒಣಗುತ್ತಿದ್ದು ತಕ್ಷಣ ಮಲಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸಿ ರೈತರಿಗೆ ಅನುಕೂಲಕರ ಕಲ್ಪಿಸಬೇಕೆಂದು ಬಿಜೆಪಿ ಮುಖಂಡರಾದ ದೇವರಾಜ್ ದಾಡಿಬಾವಿ ಆಗ್ರಹ ಮಾಡಿದರು.

ಈ ಕುರಿತು ತಹಶೀಲ್ದಾರ ಸುಧೀರ ಸಾಹುಕಾರ ಅವರಿಗೆ ಮನವಿ ನೀಡಿ ಮಾತನಾಡಿದ ಅವರು ಕಳೆದ ತಿಂಗಳು ಅತಿವೃಷ್ಟಿಯಿಂದ ಬೆಳೆಗಳು ಹಾಳಾಗಿದ್ದು ಇದ್ದ ಅಲ್ಪಸ್ವಲ್ಪ ಬೆಳೆಗಳು ಈಗ ಮಳೆ ಬಾರದೆ ಒಣಗುತ್ತಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ, ತಕ್ಷಣ ಸರ್ಕಾರ ಬಲದಂಡೆ ಕಾಲುವೆಗೆ ಕನಿಷ್ಠ ಒಂದು ತಿಂಗಳ ನೀರು ಹರಿಸಬೇಕೆಂದು ಹಾಗೂ ಸರ್ಕಾರದಿಂದ ಬಿಡುಗಡೆಯಾಗಿರುವ ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ಧನವನ್ನು ತಕ್ಷಣ ರೈತರ ಖಾತೆಗೆ ವರ್ಗಾಯಿಸಬೇಕೆಂದು ಮನವಿಯಲ್ಲಿ ಒತ್ತಾಯ ಮಾಡಿದರು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಉಭಯ ಮಂಡಲ ಅಧ್ಯಕ್ಷ ಗಂಗಪ್ಪ ಮನಮಿ, ಮಂಜುನಾಥ ಗಣಿ, ನಗರ ಘಟಕದ ಅಧ್ಯಕ್ಷ ಸಾಯಿಬಾಬಾ ಆಣೆಗುಂದಿ, ರೈತ ಮೋರ್ಚಾ ಅಧ್ಯಕ್ಷ ನಿಂಗಯ್ಯ ಬಣ್ಣದನೂಲುಮಠ, ಓ.ಬಿ.ಸಿ ಅಧ್ಯಕ್ಷ ಆನಂದ ಚವಡಿ, ಮಹಿಳಾ ಮೋರ್ಚಾ ಅಧ್ಯಕ್ಷ ಶಕುಂತಲಾ ಕರ್ಜಗಿ, ಗ್ರಾಪಂ ಉಪಾಧ್ಯಕ್ಷ ಸವಿತಾ ಮೇಗುಂಡಿ, ಮುಖಂಡರಾದ ಪಮ್ಮು ಯಡ್ರಾವಿ, ಜಯಪ್ರಕಾಶ ಬದಾಮಿ, ಶಶಿಧರ ತೆಂಗಿನಕಾಯಿ, ಮಂಜುನಾಥ ಹಡಪದ, ಪೂರ್ಣಿಮಾ ಜೋಶಿ, ಬಸಣ್ಣ ಕಾತರಕಿ, ಮಂಜುನಾಥ ಜಾಲಗಾರ, ಸಂತೋಷ ಹೊಸಮನಿ, ಆನಂದ ಮನೇನಕೊಪ್ಪ, ಅಲೋಕ ಕುಲಕರ್ಣಿ, ಪವನ್ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Share this Article