ಪರವಾನಿಗೆ ಪಡೆದಿರುವ ಮದ್ಯದ ಅಂಗಡಿಗಳಿಂದಲೇ ಗ್ರಾಮೀಣ ಪ್ರದೇಶದ ಅಂಗಡಿಗಳಿಗೆ ಅಕ್ರಮ ಮದ್ಯ ಸಾಗಾಣಿಕೆ : ಸಂಪರ್ಕಕ್ಕೆ ಸಿಗದ ಅಬಕಾರಿ ನಿರೀಕ್ಷಿಕರು
ರೋಣ/ಗಜೇಂದ್ರಗಡ : ಅವಳಿ ನಗರಗಳು ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದೂ, ಅಕ್ರಮ ಮದ್ಯದ ಜೊತೆಗೆ ಕಳಪೆ ಮದ್ಯ ಮಾರಾಟವು ಶುರುವಾಗಿದ್ದು ಗ್ರಾಮೀಣ ಪ್ರದೇಶದ ಜನರಲ್ಲಿ ಆರೋಗ್ಯ ಸಮಸ್ಸೆ, ಕೌಟುಂಬಿಕ ಕಲಹಕ್ಕೆ ಕಾರಣವಾಗುತ್ತಿದೆ ಎಂದು ತಾಲೂಕಿನ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಕನಿಷ್ಠ 3 ರಿಂದ 4 ಅಕ್ರಮ ಮದ್ಯದ ಮಾರಾಟ ಅಂಗಡಿಗಳಿವೆ. ಅನುಮತಿ ಪಡೆದ ಮದ್ಯದಂಗಡಿಯ ಮಾಲೀಕರೇ ಸುತ್ತಮುತ್ತಲಿನ ಹಳ್ಳಿಗಳಿಗೆ ಅಕ್ರಮ ಮದ್ಯ ಸಾಗಣೆ ಮಾಡಿ ಮಾರಾಟ ಮಾಡುತ್ತಿದ್ದಾರೆ. ಕೆಲವರು ಬಾರ್‌ಗಳಿಂದ ಖರೀದಿಸಿ, ಹಳ್ಳಿಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಹೀಗೆ ಮದ್ಯವು ಸ್ಥಳೀಯವಾಗಿ ಸಿಗುವುದರಿಂದ ಹೆಚ್ಚಿನ ಜನರು ಕುಡಿತಕ್ಕೆ ದಾಸರಾಗುವುದರಿಂದ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತಿದೆ. ಇತ್ತಿಚೆಗೆ ಗ್ರಾಮೀಣ ಪ್ರದೇಶಗಳಲ್ಲಿ ದಿನದ 24 ಗಂಟೆಯೂ ಮದ್ಯ ಸಿಗುತ್ತಿರುವುದರಿಂದ ಬಹುತೇಕ ಕೂಲಿ ಕಾರ್ಮಿಕರು ತಮ್ಮ ಒಂದು ದಿನದ ಕೂಲಿ ಹಣದ ಅರ್ಧದಷ್ಟನ್ನು ಮದ್ಯ ಸೇವನೆಗೆ ವಿನಿಯೋಗಿಸುತ್ತಿದ್ದಾರೆ. ಇದರಿಂದಾಗಿ ಮನೆಗಳಲ್ಲಿ ಜಗಳ ಉಂಟಾಗಿ ಇಡೀ ಕುಟುಂಬವೇ ಬೀದಿ ಪಾಲು ಆಗುತ್ತಿದೆ’ ಎಂದು ಮಹಿಳೆಯರು, ಗ್ರಾಮೀಣ ಪ್ರದೇಶದ ಜನರು ತಮ್ಮ ಅಳಲನ್ನು ತೋಡಿಕೊಂಡರು.
ಮದ್ಯದ ದರಕಿಂತ ದುಪ್ಪಟ್ಟು ದರದಲ್ಲಿ ಮಾರಾಟ
ರಸ್ತೆ ಪಕ್ಕದಲ್ಲಿ ಕಂಡುಬರುವ ಪ್ರತಿಯೊಂದು ಡಾಬಾಗಳಲ್ಲಿ, ಹೋಟೆಲ್ ಗಳಲ್ಲಿ ಈ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಹಳ್ಳಿಗಳಲ್ಲಿ ಚಹಾ ಅಂಗಡಿ, ಬೀಡಾ ಅಂಗಡಿ, ಕಿರಾಣಿ ಅಂಗಡಿಗಲ್ಲಿಯು ಮದ್ಯ ದೊರೆಯುತ್ತಿದ್ದೂ ಪ್ರತಿ ಮದ್ಯದ ಬಾಟಲಿಗಳ ಮೇಲೆ ಹೆಚ್ಚುವರಿಯಾಗಿ 50 ರಿಂದ 60 ರೂಗಳನ್ನು ಅಕ್ರಮ ಮದ್ಯ ಮಾರಾಟಗಾರರು ತೆಗೆದುಕೊಳ್ಳುತ್ತಿದ್ದಾರೆ ಅದಲ್ಲದೆ ಸ್ಥಳೀಯವಾಗಿ ತಯ್ಯಾರಿಸಿದ ಕಳಪೆ ಮದ್ಯವನ್ನು ತಂದು ಮಾರಾಟ ಮಾಡುತ್ತಾರೆ ಎಂದು ಗ್ರಾಮೀಣ ಪ್ರದೇಶದ ಜನರು ದುರುತ್ತಿದ್ದಾರೆ.
ಅಕ್ರಮ ಮದ್ಯ ಮಾರಾಟ ಕಂಡು ಕಾಣದಂತೆ ಇರುವ ಅಧಿಕಾರಿಗಳು
ಅಕ್ರಮ ಮದ್ಯ ಮಾರಾಟ ತಾಲೂಕಿನಾದ್ಯಂತ ಏತೇಚ್ಚವಾಗಿ ನಡೆಯುತ್ತಿದ್ದು, ಅಕ್ರಮ ಮದ್ಯ ಮಾರಾಟಗಾರಗ ವಿರುದ್ದ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಅಬಕಾರಿ ಹಾಗೂ ಪೊಲೀಸ್ ಇಲಾಖೆಯವರು ಜಾಣ ಕುರುಡರಂತೆ ಕೆಲಸ ನಿರ್ವಹಿಸುತ್ತಿರುವುದು ವಿಪರ್ಯಾಸ. ಪ್ರತಿಯೊಂದು ಅಕ್ರಮ ಮದ್ಯದ ಅಂಗಡಿಯಿಂದ ತಿಂಗಳಿಗೆ ಅಬಕಾರಿ ಇಲಾಖೆಗೆ ಇಂತೀಷ್ಟು ರೂಪಾಯಿ ಮಾಮೂಲಿ ಹೋಗುತ್ತಿದೆ. ಇಲಾಖೆಯವರು ಮೌನ ವಹಿಸಿದ್ದು ಅಕ್ರಮ ವ್ಯವಹಾರಕ್ಕೆ ಇವರೇ ಸಾಥ್ ನೀಡುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಆದ್ದರಿಂದ ಅಧಿಕಾರಿಗಳು ಎಚ್ಛೆತ್ತು ಅಕ್ರಮ ಮದ್ಯ ಮಾರಾಟಗಾರರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.
ರೈತರಿಗೆ ಕಿರಿಕಿರಿ
ಗ್ರಾಮೀಣ ಪ್ರದೇಶದಲ್ಲಿ ಅಂಗಡಿಗಳಲ್ಲಿ ದೊರೆಯುವ ಮಧ್ಯವನ್ನು ತೆಗೆದುಕೊಂಡು ಸಮೀಪದ ಜಮೀನುಗಳಲ್ಲಿ ಮದ್ಯ ಸೇವನೆ ಮಾಡುವದರಿಂದ ಮದ್ಯದ ಬಾಟಲಿಗಳನ್ನು, ನೀರಿನ ಪ್ಯಾಕೆಟ್, ಸಿಗರೇಟ್ ಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ. ಮದ್ಯದ ಬಾಟಲಿಗಳನ್ನು ಒಡೆಯುತ್ತಾರೆ ಇದರಿಂದ ರೈತರಿಗೆ ಹೊಲಗಳಿಗೆ ಹೋದರೆ ಮದ್ಯದ ಬಾಟಲಿಗಳನ್ನು ಆರಿಸುವದು ನಿತ್ಯದ ಕೆಲಸವಾಗಿದೆ. ಮದ್ಯದ ಬಾಟಲಿಗಳ ಚುರುಗಳು ಜಮೀನಿನ ತುಂಬಾ ಬಿದ್ದಿರುತ್ತವೆ ಇದರಿಂದ ಹೊಲಗಳಲ್ಲಿ ಕೆಲಸ ಮಾಡಲು ತುಂಬಾ ತೊಂದರೆಯಾಗುತ್ತದೆ ಎಂದು ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಳ್ಳಿಗಳಲ್ಲಿ ಎಲ್ಲಾ ಸಮಯದಲ್ಲೂ ಮದ್ಯ ಸಿಗುವುದರಿಂದ ಯುವಕರು ಸೇರಿ ಹೆಚ್ಚಿನ ಜನರು ಕುಡಿತದ ಚಟಕ್ಕೆ ದಾಸರಾಗುತ್ತಿದ್ದಾರೆ, ಚಿಕ್ಕವಯಸ್ಸಿನಲ್ಲೇ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ, ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ದಂದೆಯನ್ನು ನಿಲ್ಲಿಸಬೇಕು, ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಇಲ್ಲದಿದ್ದರೆ ಬರುವ ದಿನಮಾನಗಳಲ್ಲಿ ಸಂಬಂಧಪಟ್ಟ ಇಲಾಖೆಗಳ ವಿರುದ್ಧ ಹೋರಾಟ ಮಾಡಲಾಗುವದು.
ವಿನಾಯಕ ಜರತಾರಿ, ಅಧ್ಯಕ್ಷರು ಕರ್ನಾಟಕ ಅಭಿವೃದ್ಧಿ ವೇದಿಕೆ (ರಿ) ಗಜೇಂದ್ರಗಡ.
ತಾಲೂಕಿನಲ್ಲಿ ಅಕ್ರಮ ಮಧ್ಯ ಮಾರಾಟ ಹೆಚ್ಚಾಗಲು ಇಲಾಖೆಯ ನಿಷ್ಕ್ರಿಯತಿಯೇ ಕಾರಣ ಇದು ಹೀಗೆ ಮುಂದುವರೆದರೆ ಯುವ ಸಮೂಹ ದಾರಿ ತಪ್ಪುತ್ತದೆ. ಸಾರ್ವಜನಿಕರು ಹಾಗೂ ಯುವಕರ ಹಿತಾಸಕ್ತಿಯಿಂದ ಅಕ್ರಮ ಮಧ್ಯ ಮಾರಾಟಗಾರರ ಮೇಲೆ ಇಲಾಖೆಯ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು.
ಮೈನುದ್ದಿನ್ ನದಾಫ್, ತಾಲೂಕಾಧ್ಯಕ್ಷ ಸ್ವಾಭಿಮಾನಿ ಕರವೇ ರೋಣ.
ವರದಿ : ಮಂಜುನಾಥ ಕುದರಿಕೋಟಿ

