ಧಾರವಾಡ ಜಿಲ್ಲಾ ಹುಬ್ಬಳ್ಳಿ ಗ್ರಾಮೀಣ ಸಿರುಗುಪ್ಪಿ ಹೋಬಳಿ ರೈತರಿಗೆ 30 ಕೋಟಿ ಬೆಳೆ ವಿಮಾ ಬಿಡುಗಡೆ!
ಶಿರಗುಪ್ಪಿ ಹೋಬಳಿಗಳ ಹೆಸರು ಬೆಳೆ ರೈತರಿಗೆ ಅತಿಯಾದ ಮಳೆಯಿಂದಾದ ಹಾನಿಗೆ ವಿಮಾ ದೊರಕಿರಲಿಲ್ಲ. ವಿಮಾ ಕಂಪನಿ ತಾಂತ್ರಿಕ ಕಾರಣ ನೀಡಿದಾಗ, ಕೇ೦ದ್ರಮಂತ್ರಿ ಪ್ರಲ್ಲಾದ ಜೋಶಿ ಅವರು ಮಧ್ಯಪ್ರವೇಶಿಸಿ, ಕೇಂದ್ರ ಕೃಷಿ ಸಚಿವ ಶ್ರೀ ಶಿವರಾಜ್ಸಿಂಗ್ ಚವ್ಹಾಣ್, ವಿಮಾ ಅಧಿಕಾರಿಗಳು, ಹಣಕಾಸು ಸಚಿವಾಲಯದ ಅಧಿಕಾರಿಗಳೊಂದಿಗೆ ನಿರಂತರವಾಗಿ ಚರ್ಚಿಸಿ,ಅಂತಿಮವಾಗಿ ಪರಿಹಾರ ದೊರಕಿಸಿಕೊಟ್ಟಿದ್ದಾರೆ. ಅತಿವೃಷ್ಟಿ ಅನಾವೃಷ್ಟಿಯಿಂದ ಹಾನಿಗೊಳಗಾಗಿದ್ದ ರೈತರ ಬೆಳೆ ವಿಮೆ ಬಿಡುಗಡೆಗೊಳಿಸಿದ್ದು ಸಂತಸ ಮೂಡಿದೆ ಎಂದು ನವಲಗುಂದ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ರೈತ ಮುಖಂಡರಾದ ಬಸವರಾಜ್ ಕುಂದಗೋಳ ಮಠ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ದೇವರಾಜ್ ಬ.ದಾಡಿಬಾವಿ ಹುಬ್ಬಳ್ಳಿ ಮಂಡಲ ಅಧ್ಯಕ್ಷರಾದ ಮಂಜುನಾಥ ಗಣಿ ಮುಖಂಡರುಗಳಾದ ವೀರಣ್ಣ ಮಳಗಿ ಮುಖಂಡರಾದ ಗುರುಪಾದ ಶಿರೂರು, ಪಮ್ಮು ಯಾಡ್ರಾವಿ,ಶಶಿ ಟೆಂಗಿನಕಾಯಿ,ರುದ್ರಪ್ಪ ದುಂದುರ,ಮಂಜು ಮೆಣಸಿನಕಾಯಿ,ಶಂಭು ಬಳ್ಳೊಳ್ಳಿ, ದುಂಡಪ್ಪ ಶೆಟ್ಟರ್,ಕಲ್ಲಪ್ಪ ಉಳ್ಳಾಗಡ್ಡಿ,ಮಹದೇವಪ್ಪ ಮೇಟಿ, ಗಂಗು ನಾಗನಗೌಡ್ರ ರಾಜು ಹಸರೆಡ್ಡಿ ಪ್ರಭುಹುಗ್ಗೆನ್ನವರ್,ವೀರನಗೌಡ ಪಾಟೀಲ, ಮಂಜು ಗುಡೇನಕಟ್ಟಿ, ಅರುಣ ಹುಲ್ಲೂರು,
ಮುಂತಾದವರು ಸಂತಸ ವ್ಯಕ್ತಪಡಿಸಿದ್ದಾರೆ
