ಮುಂಡರಗಿ : ವಚನ ಪಿತಾಮಹ ಹಳಕಟ್ಟಿಯವರು ಜೀವನದ ಬಹುದೊಡ್ಡ ಸಾಧನೆ,ತಮ್ಮ ಮನೆ ಆಸ್ತಿಯನ್ನು ಮುದ್ರಣ ಮಳಿಗೆ ಮಾರಿ ವಚನಗಳ ಸಂಗ್ರಹ ಮಾಡಿ ಈ ನಾಡಿನ ಶರಣರ ವಚನಗಳನ್ನು ಇಂದಿಗೂ ಚಿರಸ್ಥಾಯಿಯಾಗಿ ಉಳಿಸಿದವರು ಎಂದು ಹಿರಿಯ ಸಾಹಿತಿ ಆರ್ ಎಲ್ ಪೋಲಿಸ್ ಪಾಟೀಲ ಹೆಳಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮುಂಡರಗಿ ಹಾಗೂ ಮಾತೋಶ್ರೀ ಶಾಂತಾಬಾಯಿ ಕೊರ್ಲಹಳ್ಳಿ ಸರಕಾರಿ ಪ್ರೌಡಶಾಲೆ ಮೇವುಂಡಿ , ಇವುಗಳ ಆಶ್ರಯದಲ್ಲಿ ಶನಿವಾರ ನಡೆದ ವಚನ ಪಿತಾಮಹ ಫ ಗು ಹಳಕಟ್ಟಿ ಯವರ ಕುರಿತು ಉ ಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಅವರು ಮಾತನಾಡಿ
ಈ ನಾಡಿನ ವಚನ ಸಾಹಿತ್ಯಕ್ಕೆ ಬಹಳ ಅಧ್ಬುತವಾದ ಕೊಡುಗೆ ನಿಡಿದವರು ಫ ಗು ಹಳಕಟ್ಟಿ ಯವರು ಇವರು ಸವದತ್ತಿ ತಾಲೂಕಿನ ಹಳಕಟ್ಟಿಯವರು ಇವರ ಜನ್ಮದಿನಾಚರಣೆ ಆಚರಿಸುವ ಮೂಲಕ ಸಾಧನೆ ಕುರಿತು ಇಂದಿನ ಮಕ್ಕಳಿಗೆ ಇಂತಹ ಕಾರ್ಯಕ್ರಮಗಳ ಮೂಲಕ ತಿಳಿಸುತ್ತಿರುವದು ಶ್ಲಾಘನೀಯ, ಜನ್ಮದಿನಾಚರಣೆ ಕೇವಲ ಪ್ರತಿಷ್ಠೆಗಾಗಿ ಹೆಸರಿಗಾಗಿ ಮಾಡದೆ ಈ ನಾಡಿನ ಪ್ರಗತಿಗಾಗಿ,ಅವರು ನಡೆದ ಬಂದ ದಾರಿಯನ್ನು ಅವಲೋಕನ ಮಾಡುವದೆ ನೀಜವಾದ ಜನ್ಮದಿನಾಚರಣೆಯಾಗಿದೆ. ಮಕ್ಕಳು ಕನ್ನಡ ಭಾಷೆ ಹಾಗೂ ಬರಹದ ಮೇಲೆ ಬಹಳ ಗಮನ ಹರಿಸಬೇಕು ಕನ್ನಡ ಅಂಕಿಗಳ ಬಳಸಬೇಕು, ಎಲ್ಲೋ ಮೂಲೆಯಲ್ಲಿ ಇದ್ದ ವಚನಗಳನ್ನು ಹುಡುಕಿ ಮರು ಮುದ್ರಣ ಮಾಡಿ ವಚನಗಳಿಗೆ ಜೀವ ತುಂಬಿದವರು ಫ ಗು ಹಳಕಟ್ಟಿ ಯವರು ತಂದೆ ತಾಯಿಯ ಪ್ರೀತಿಯ ಮಗನಾಗಿ ಬೆಳೆದು, ಓದಿನಲ್ಲಿ ಆಸಕ್ತಿಯುಳ್ಳವರಾಗಿದ್ದರು, ಒಮ್ಮೆ ಕಣ್ಣಡದ ಕಣ್ವ ಬಿ ಎಂ ಶ್ರೀ ಯವರು ಬಿಜಾಪುರಕ್ಕೆ ಬರುತ್ತಾರೆ ಅವರನ್ನು ಕರೆದುಕೊಂಡು ನೇರವಾಗಿ ಗೋಳಗುಮ್ಮಟ ತೊರಿಸುತ್ತಾರೆ ಆದರೆ ಅದನ್ನು ನೊಡದೆ ಬಿಜಾಪೂರದೊಳಗೆ ಇನ್ನೋಂದು ಗುಮ್ಮಟವಿದೆ ಅವರನ್ನು ನೊಡಬೇಕು ಎಂದಾಗ ಅಲ್ಲಿದ್ದ ಎಲ್ಲರಿಗೂ ಆಶ್ಚರಿಯಾಗುತ್ತದೆ ಅವರೆ ವಚನ ಗುಮ್ಮಟ ಫ ಗು ಹಳಕಟ್ಟಿಯವರು ಎಂದು ಅವರನ್ನು ಬೇಟಿಯಾಗಿ ಮಾತನಾಡಿಸುತ್ತಾರೆ ಇವರ ಸಾಧನೆಗೆ ಕೈಗನ್ನಡಿಯಾಗಿದೆ. ಸುಮಾರು ೨೫೦ ವಚನಕಾರರ ವಚನಗಳನ್ನು, ೯೦೦ ಪುಟಗಳ ೭೫ ಗ್ರಂಥಗಳ ಬಿಡುಗಡೆ ಮಾಡಿದ ಕಿರ್ತಿ ಹಳಕಟ್ಟಿಯವರಿಗೆ ಸಲ್ಲುತ್ತದೆ.
ಇವರು ಬರಹಗಾರರಾಗಿ ಶಿವಾನುಭವ ಎಂಬ ಪತ್ರಿಕೆಯನ್ನು ೩೫ ವರ್ಷಗಳ ಕಾಲ ನಡೆಸಿ ವಚನಗಳ ಬೆಳವಣಿಗೆ ಕಾರಣರಾದರು,ಒಬ್ಬ ವ್ಯಕ್ತಿ ಎಷ್ಟು ದಿನ ಬದುಕ್ಕಿದ್ದಾನೆ ಎನ್ನುವದಕ್ಕಿಂತ ಹೇಗೆ ಬದುಕಿದ್ದಾನೆ ಎನ್ನುವದಕ್ಕೆ ಪ್ರತ್ಯಕ್ಷ ಸಾಕ್ಷಿ ಫ ಗು ಹಳಕಟ್ಟಿಯವರು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಲೆಯ ಭೂ ದಾನಿಗಳಾದ ಬಸವರಾಜ ಕೊರ್ಲಹಳ್ಳಿ ಯವರು ಮಾತನಾಡಿ ಕನ್ನಡ ಭಾಷೆ ಸಂಸ್ಕೃತಿ, ಕನ್ನಡ ಉಳಿವಿಗಾಗಿ ತಾಲೂಕಿನಾಧ್ಯಂತ ಕಸಾಪದ ಕಾರ್ಯಕ್ರಮಗಳು ಚಟುವಟಿಕೆಗಳು ಮಾಡುತ್ತಾ ಬರುತ್ತಿರುವದು ಶ್ಲಾಘನೀಯ, ಭೂಮಿ ತಾಯಿ,ಜನ್ಮ ನಿಡಿದ ತಾಯಿ, ಭಾಷೆ ಈ ಮೂರನ್ನು ನಾವುಗಳು ಯಾವತ್ತೂ ಮರೆಯಬಾರದು ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಂಜುನಾಥ ಮುಧೋಳ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಮೂರು ವರ್ಷದಲ್ಲಿ ಈ ನಾಡಿಗಾಗಿ ದೇಶಕ್ಕಾಗಿ ಸೇವೆ ಮಾಡಿದ ಹೋರಾಟ ಮಾಡಿದ ಮಹನಿಯರ ಆದರ್ಶದ ಬದುಕನ್ನು ಇಂದಿನ ಮಕ್ಕಳಿಗೆ ಮುಟ್ಟಿಸುವ ಮೂಲಕ ತಾಲೂಕ ವಿವಿದ ಗ್ರಾಮಗಳಲ್ಲಿ ಉಪನ್ಯಾಸ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸುವ ಕೇಲಸ ಮಾಡುತ್ತಿದ್ದೆವೆ, ಮಕ್ಕಳು ಜ್ಞಾನಾರ್ಜನೆಗಾಗಿ ನಿಮ್ಮ ಗ್ರಾಮದಲ್ಲೆ ಉತ್ತಮವಾದ ಗ್ರಂಥಾಲಯ ಇದೆ ಕವನ,ಕಾದಂಬರಿ,ಸ್ಪರ್ಧಾತ್ಮಕ ಪುಸ್ತಕಗಳನ್ನು ದಿನನಿತ್ಯ ಹೋಗಿ ಓದಬೇಕು ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಅತಿಥಿಗಳಾಗಿ ಭಾಗವಹಿಸಿದ ಯುವ ಮುಖಂಡ ಅಂದಪ್ಪ ಹಾರೋಗೇರಿ ಮಾತನಾಡಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಗೆ ಓದು ಬಹಳ ಮುಖ್ಯವಾಗಿದೆ, ಇಂತಹ ಕಾರ್ಯಕ್ರಮಗಳಿಂದ ಹಲವಾರು ವಿಷಯಗಳು ನಮ್ಮ ಜೀವನಕ್ಕೆ ಮಾದರಿಯಾಗಿವೆ ಗಮನವಿಟ್ಟು ಭಾಗವಹಸಿ ಆಲಿಸಬೇಕು ಮುಂದಿನ ಜೀವನದ ದೊಡ್ಡ ಗುರಿಯನ್ನು ಮುಟ್ಟಲು ಪರಿಶ್ರಮದಿಂದ ಓದಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಕಸಾಪ ಅಧ್ಯಕ್ಷರಾದ ಎಮ್ ಜಿ ಗಚ್ಚಣ್ಣವರ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕದಿಂದ ದತ್ತಿನಿಧಿ,ಕರ್ನಾಟಕ ಸಂಭ್ರಮ ೫೦,ವಿಶೇಷ ಉಪನ್ಯಾಸ ಕಾರ್ಯಕ್ರಮಗಳ ಮೂಲಕ
ಶಾಲೆ ಕಾಲೇಜ್ ವಿಧ್ಯಾರ್ಥಿಗಳ ಮನ ಮುಟ್ಟುವ ಕಾರ್ಯವಾಗಿದೆ, ಫ ಗು ಹಳಕಟ್ಟಿಯವರು ಒಬ್ಬ ಸಂಶೋದಕರಾಗಿ,ವಕೀಲರಾಗಿದ್ದವರು ಇವರು ಇದನ್ನು ಮುಂದು ವರೆಸಿದ್ದರೆ ವಚನಗಳನ್ನು ಎಲ್ಲರೂ ಹುಡುಕುಂತಾಗುತ್ತಿತ್ತು ಅವರು ವಚನಗಳ ಸಂಗ್ರಹಕ್ಕಾಗಿ ಮಾಡಿದ ತ್ಯಾಗ ಮರೆಯಲಾಗದು, ಸರಕಾರ ಇದನ್ನು ಮನಗಂಡು ಜುಲೈ ೨ ಫ ಗು ಹಳಕಟ್ಟಿಯವರ ಜನ್ಮದಿನವನ್ನು ವಚನ ಸಾಹಿತ್ಯ ಸಂರಕ್ಷಣಾ ದಿನವನ್ನಾಗಿ ಆಚರಿಸಲು ಸರಕಾರ ಘೋಷಣೆ ಮಾಡಿದ್ದು ಸ್ವಾಗತಾರ್ಹ ಎಂದರು.
ಮುಖ್ಯೋಪಾದ್ಯಾಯ ಯುವರಾಜ ಮುಂಡರಗಿ ಸರ್ವರನ್ನು ಸ್ವಾಗತಿಸಿದರು.
ಪ್ರೌಢಶಾಲಾ ವಿಧ್ಯಾರ್ಥಿನಿಯರು ಪ್ರಾರ್ಥಿಸಿದರು
ಈ ಸಂದರ್ಭದಲ್ಲಿ ಗ್ರಾ ಪಂ ಮಾಜಿ ಅಧ್ಯಕ್ಷರಾದ ಎಚ್ ಎಪ್ ಪಾಟೀಲ,ಎಸ್ ಡಿ ಎಮ್ ಸಿ ಅಧ್ಯಕ್ಷರಾದ ರವಿ ಮೇಟಿ,ಸದಸ್ಯರಾದ ಮೌನೇಶ ಕಮ್ಮಾರ, ಕೊಟ್ರಪ್ಪ ಬ್ಯಾಳಿ,ಮುದ್ಲಿಂಗಪ್ಪ ಕೊರ್ಲಹಳ್ಳಿ, ಕೃಷ್ಣಮೂರ್ತಿ ಸಾವುಕಾರ, ರವಿಗೌಡ ಪಾಟೀಲ, ಲಮಾಣಿ ಸಹ ಶಿಕ್ಷಕರು, ಶಾಲೆಯ ಶಿಕ್ಷಕ ವರ್ಗದವರು, ವಿದ್ಯಾರ್ಥಿಗಳು ಇದ್ದರು.
ಸಹ ಶಿಕ್ಷಕ ಮಂಜುನಾಥ ಲಮಾಣಿ ನಿರೂಪಿಸಿದರು
ಕಸಾಪ ಸದಸ್ಯ ಸಿ ಕೆ ಗಣಪ್ಪನವರ ವಂದಿಸಿದರು.

