ರೋಣ: ಸ್ವಾತಂತ್ರ ಪೂರ್ವ ಹಾಗೂ ನಂತರದಲ್ಲಿ ಕಂದಾಯ ಇಲಾಖೆಯು ದೇಶದ ಅಭಿವೃದ್ಧಿಯಲ್ಲಿ ತನ್ನದೇ ಆದ ಪಾತ್ರ ವಹಿಸುತ್ತಿದೆ ಎಂದು ರೋಣ ತಾಲೂಕ ದಂಡಾಧಿಕಾರಿ ನಾಗರಾಜ್ ಕೆ. ಹೇಳಿದರು.
ತಾಲೂಕ ಆಡಳಿತದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಂದಾಯ ಇಲಾಖೆಯ ಕಂದಾಯ ದಿನಾಚರಣೆಯನ್ನು ಕಚೇರಿಯ ಸಿಬ್ಬಂದಿಗಳೊಂದಿಗೆ ಕೇಕ್ ಕಟ್ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜನ-ಸಾಮಾನ್ಯರೊಂದಿಗೆ ನಿಕಟ ಸಂಪರ್ಕ ಹೊಂದುವ ಅವರ ಕಷ್ಟ ಸುಖಗಳಿಗೆ ಹೆಚ್ಚು ಸ್ವಂಧಿಸುವ ಅವಕಾಶ ಕಂದಾಯ ಇಲಾಖೆ ನೌಕರರಿಗೆ ಸಿಗಲಿದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ಮತ್ತಷ್ಟು ಜನ ಸ್ನೇಹಿ ಯಾಗಬೇಕು ವಿಜ್ಞಾನ- ತಂತ್ರಜ್ಞಾನ ಮುಂದುವರಿಯುತ್ತಿದೆ. ಅದಕ್ಕೆ ಅನುಗುಣವಾಗಿ ಸರಕಾರವು ಜಾರಿಗೆ ತಂದಿರುವ ಎಲ್ಲಾ ಯೋಜನೆಗಳು ಸಹ ತಾಂತ್ರಿಕತೆಯನ್ನು ಅವಲಂಬಿಸಿವೆ.
ಅವುಗಳ ಉಪಯೋಗ ಪಡೆಯಲು ಜನ-ಸಾಮಾನ್ಯರು ತಾಂತ್ರಿಕ ಬಳಕೆಗೆ ಮುಂದಾಗ ಬೇಕಿದೆ, ಲ್ಯಾಪ್-ಟಾಪ್ ಕ್ರೋಮಬುಕ್ ನು ಕಂದಾಯ ಇಲಾಖೆಯು ಗ್ರಾಮ ಆಡಳಿತ ಅಧಿಕಾರಿಗಳಿಗೆ ಹಂತ ಹಂತವಾಗಿ ಈಗಾಗಲೇ ವಿತರಣೆ ಮಾಡುತ್ತಾ ಬಂದಿದೆ.
ಗ್ರಾಮ ಆಡಳಿತ ಅಧಿಕಾರಿಗಳು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವುದರ ಮೂಲಕ ಗ್ರಾಮ ಮಟ್ಟದಲ್ಲಿ ಜನರಿಗೆ ಸೇವೆಯನ್ನು ಸ್ಥಳದಲ್ಲಿ ನೀಡುವುದರಿಂದ ಕಂದಾಯ ದಿನಾಚರಣೆಗೆ ಒಂದು ಮಹತ್ವಪೂರ್ಣ ಅರ್ಥ ಬರುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪ-ತಹಶೀಲ್ದಾರ ಗಣೇಶ ಕೊಪ್ಪದ. ಶಿರಸ್ತೇದಾರ ರೇಣುಕಾ ನಿಲುಗಲ್ಲ.
ಕಂದಾಯ ನಿರೀಕ್ಷಕ ಎಚ್. ಎಂ. ಪಾಟೀಲ.
ಕಿರಣ ಕುಮಾರ ಬೆಟಗೇರಿ. ಗ್ರಾಮ ಆಡಳಿತ ಅಧಿಕಾರಿಗಳಾದ ವೆಂಕಟೇಶಸಿಂಗ್ ರಜಪೂತ. ಲೀಲಾವತಿ ಅರಹುಣಸಿ. ಪ್ರತಿಭಾ ಗೌಡರ. ಆಫ್ರಿನ ಮುಲ್ಲಾ. ಶಂಕರಗೌಡ ಗಿರಿಯಪ್ಪಗೌಡರ. ಯೋಗೇಶ ಬಡಿಗೇರ. ಬಸಪ್ಪ ಮಾದರ.
ಜಪಾರ್ ಹವಲ್ದಾರ. ಪಿ. ಡಿ. ಪಾಟೀಲ. ವಿಜಯಲಕ್ಷ್ಮಿ ಕಳ್ಳಿಗುಡ್ಡ. ಲೀಲಾವತಿ ದಾಸಪ್ಪನವರ. ಅನಸೂಯಾ ಮಸಲಾಜಿ. ಸಂಗೀತಾ ತಳವಾರ. ಸೇರಿದಂತೆ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳು ಇದ್ದರು.

