ಸರ್ಕಾರಿ ಶಾಲೆಯಲ್ಲಿನ ಎಲ್‌ಕೆಜಿ, ಯುಕೆಜಿ ಬಡವರಿಗೆ ಸಹಕಾರಿ

Samagraphrabha
2 Min Read

32 ಲಕ್ಷ ವೆಚ್ಚದ ಶಾಲಾ ಕೊಠಡಿಗಳ ದುರಸ್ತಿ ಮತ್ತು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಜಿ. ಎಸ್.‌ ಪಾಟೀಲ

ನರೇಗಲ್:‌ ಸಿಎಂ ಸಿದ್ದರಾಮಯ್ಯನವರು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅವಶ್ಯಕತೆಯಿರುವ ಕಾರ್ಯವನ್ನು ಮಾಡಿಸಲು ತಿಳಿಸಿರುತ್ತಾರೆ ಅದರಂತೆ ನರೇಗಲ್‌ ಪಟ್ಟಣದ ಹಳೇ ಕಟ್ಟಡಗಳ ನೆಲಸಮ, ಸುತ್ತಲಿನ ಕಾಂಪೌಂಡ್ ಮೇಲೆತ್ತಿ ತಂತಿ ಬೇಲಿ ಹಾಕಿಸುವ ಯೋಜನೆಗೆ ಹಾಗೂ ಶಾಲೆಯ ಒಳಾಂಗಣ ಎತ್ತರಕ್ಕೆ ಒಂಭತ್ತು ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ರೋಣ ಶಾಸಕ ಜಿ. ಎಸ್.‌ ಪಾಟೀಲ ಹೇಳಿದರು.
ಪಂಚಾಯತ ರಾಜ ಮತ್ತು ಲೋಕೋಪಯೋಗಿ ಇಲಾಖೆ ಗದಗ ವಿಭಾಗ, ಶಾಲಾ ಶಿಕ್ಷಣ ಇಲಾಖೆ ರೋಣ ಇವರ ಆಶ್ರಯದಲ್ಲಿ ನರೇಗಲ್‌ ಪಟ್ಟಣದ ಬಸ್‌ ನಿಲ್ದಾಣದ ಎದುರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಶನಿವಾರ ನಡೆದ ಅಂದಾಜು ₹32 ಲಕ್ಷ ವೆಚ್ಚದ ಶಾಲಾ ಕೊಠಡಿಗಳ ದುರಸ್ತಿ ಮತ್ತು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಅಂದಾಜು 4 ದಶಕಗಳ ಹಳೇಯ ನಾಲ್ಕು ಕೊಠಡಿ ನೆಲಸಮಗೊಳಿಸಿ ಕಾಂಕ್ರಿಟ್‌ ಬಿಲ್ಡಿಂಗ್‌ನ ಕೊಠಡಿಗಳನ್ನು ನಿರ್ಮಿಸಲು ಹಾಗೂ ಅಗತ್ಯ ದುರಸ್ತಿ ಕಾರ್ಯಗಳನ್ನು ಸೇರಿದಂತೆ ಒಟ್ಟು ₹32 ಲಕ್ಷ ಅನುದಾನ ನೀಡಲಾಗಿದೆ. ಶಾಲೆಯಲ್ಲಿ ಇನ್ನುಳಿದ ಐದು ಕೊಠಡಿಗಳಿಗೆ ಹೆಚ್ಚಿನ ಆದ್ಯತೆ ನೀಡಿ, ಸುಸಜ್ಜಿತ ಶಾಲೆಯನ್ನಾಗಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಖಾಸಗಿ, ಇಂಗ್ಲಿಷ್ ಮಾಧ್ಯಮದ ಶಾಲೆಯಲ್ಲಿ ಶಿಕ್ಷಣ ಕೊಡಿಸುವ ಮನಸ್ಥಿತಿ ಈಗಿನ ಪಾಲಕರಲ್ಲಿದೆ. ಆದರೆ ನಿಸರ್ಗತಿಕರಿಗೆ, ಬಡವರಿಗೆ ಖಾಸಗಿ ಶಾಲೆಯಲ್ಲಿ ಕಲಿಸಲು ಆಗುವುದಿಲ್ಲ. ಆದಕಾರಣ ನಮ್ಮ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆಂಗ್ಲ ಮಾಧ್ಯಮದಲ್ಲಿ ಆರಂಭಕ್ಕೆ ಅವಕಾಶ ನೀಡಿದೆ. ಪಿಎಂಶ್ರೀ ಯೋಜನೆಯಲ್ಲಿ ಕಲಿಕಾ ವಸ್ತುಗಳನ್ನು ಖರೀದಿಸಿ ಆರಂಭಿಸಲು ಅವಕಾಶವಿದೆ ಎಂದರು. ಸರ್ಕಾರಿ ಶಾಲೆಯಲ್ಲಿ ಆರಂಭಿಸಿದ ಎಲ್‌ಕೆಜಿ, ಯುಕೆಜಿಯು ಬುನಾದಿಯಾಗಿ ಮುಂದೆ ಸಾಗಬೇಕು. ಎಲ್ಲಾ ಬಡಮಕ್ಕಳಿಗೆ ನಿರಂತರವಾಗಿ ದೊರೆಯುವಂತಾಗಬೇಕು ಅದಕ್ಕಾಗಿ ಉತ್ತಮ ಶಿಕ್ಷಣ ಒದಗಿಸುವ ಮೂಲಕ ಸರ್ಕಾರದ ಯೋಜನೆಗಳು ಉಪಯೋಗವಾಗುವಂತೆ ಮಾಡಬೇಕು ಎಂದರು. ಈಗಾಗಲೇ 32 ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದು ಸಂತೋಷದ ವಿಷಯ, ಹೀಗೆ ಮುಂದೊರೆಯಲಿ ಎಂದರು.
ಕಾರ್ಯಕ್ರಮದ ಉದ್ಘಾಟನೆಯ ಆರಂಭದಲ್ಲಿ ಶಾಸಕರು ಎಲ್‌ಕೆಜಿ, ಯುಕೆಜಿ ಆಂಗ್ಲ ಮಾಧ್ಯಮದ ಬೋಧನೆಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ರೋಣ ತಾಲ್ಲೂಕು ಗ್ಯಾಂರಟಿ ಅಧ್ಯಕ್ಷ ಮಿಥುನ್‌ ಜಿ. ಪಾಟೀಲ, ಅಕ್ಷಯ ಐ. ಪಾಟೀಲ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಸ್ಥಾಯಿ ಸಮಿತಿ ಚೇರ್ಮನ್‌‌ ಮುತ್ತಪ್ಪ ನೂಲ್ಕಿ, ನರೇಗಲ್‌ ಶಹರ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಶಿವನಗೌಡ ಪಾಟೀಲ, ಹನಮಂತಪ್ಪ ಅಬ್ಬಿಗೇರಿ, ಮೈಲಾರಪ್ಪ‌ ವೀ. ಚಳ್ಳಮರದ, ಅಲ್ಲಾಬಕ್ಷಿ ನದಾಫ್‌, ಕ್ಷೇತ್ರ ಶಿಕ್ಷಣಾಧಿಕಾರಿ ಫಣಿಬಂದ, ಎಸ್‌ಡಿಎಂಸಿ ಅಧ್ಯಕ್ಷ ತಿಮ್ಮರಡ್ಡಿ ಬಂಡಿವಡ್ಡರ, ಎಂ. ಎಸ್. ಧಡೆಸೂರಮಠ, ವಿ. ಆರ್.‌ ಗುಡಿಸಾಗರ, ನಿಂಗನಗೌಡ ಲಕ್ಕನಗೌಡ್ರ, ಸಂತೋಷ ಹನಮಸಾಗರ, ಸದ್ದಾಂ ನಶೇಖಾನ್‌, ಶೇಖಪ್ಪ ಕೆಂಗಾರ, ಕಳಕನಗೌಡ ಪೊಲೀಸ್ ಪಾಟೀಲ, ಮೈಲಾರಪ್ಪ ಗೋಡಿ, ದಾವುದ್‌ ಅಲಿ ಕುದರಿ, ರಫೀಕ, ಆಶೀಪ್‌ ಹೊಸಮನಿ ಪಟ್ಟಣ ಪಂಚಾಯ್ತಿ ಸದಸ್ಯರು ಇದ್ದರು.

Share this Article