ಲೇಖನ : ಶರೀಫ ಸಾಬ.ಎನ.ಹುಡೇದ
ನವಲಗುಂದ: ನವಿಲುಗುಂದ ಎಂದ ತಕ್ಷಣ ತಟ್ಟನೆ ನೆನಪಿಗೆ ಬರುವುದು ಸರ್ವ-ಧರ್ಮ ಸಾಂಕೇತಿಕವಾಗಿರುವಂತಹ ಅಜಾತ ನಾಗಲಿಂಗ ಶ್ರೀಗಳ ಮಠ. ಈ ಮಠದಲ್ಲಿ ಬೈಬಲ್ ಇದೆ ಚರ್ಚ ಅಲ್ಲಾ, ಮುಸ್ಲಿಂರ ಮೂಹರಂ ಪಂಜಾಗಳಿವೆ ಆದರೂ ದರ್ಗಾ ಅಲ್ಲಾ, ಇನ್ನೂ ಹೆಣ ಹೂರುವಂತಹ ಸಿದಗಿ ಇದೇ ರುದ್ರ ಭೂಮಿಯಲ್ಲಾ, ಅದುವೇ ಈ ಜಗದೋಳಗೆ ಎಲ್ಲರು ಒಂದೇ ಎನ್ನುವಂತಹ ಭಾವನೆಯನ್ನು ಮೂಡಿಸಿದಂತಹ ಪವಾಡ ಪುರುಷ ಶ್ರೀ ಅಜಾತ ನಾಗಲಿಂಗ ಶ್ರೀಗಳ ಮಠ.
ಇಲ್ಲಿಗೆ ಪ್ರತಿ ದಿನ ನೂರಾರು ಭಕ್ತರು ಬಂದು ಹೋಗುತ್ತಾರೆ, ಹಲವಾರು ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೂಂಡಿರುವಂತಹ ಸಾಕಷ್ಟು ಉದಾಹರಣೆಗಳು ಕೇಳಲಿಕ್ಕೇ ಸಿಗುತ್ತವೆ, ಮೂಲತ ಅಜಾತ ನಾಗಲಿಂಗ ಶ್ರೀಗಳು ರಾಯಚೂರು ಜಿಲ್ಲೆಯ ಜಾವಳಗೇರಿ ಗ್ರಾಮದ ಮೌನಾಚಾರ್ಯ ಹಾಗೂ ನಾಗಮ್ಮ ದಂಪತಿಗಳ ಸುಪುತ್ರರು, ಇವರು ಅತೀ ಚಿಕ್ಕ ವಯಸ್ಸಿನಲ್ಲಿಯೇ ವೈರಾಗ್ಯ ಭಾವನೆಯನ್ನು ಹೂಂದಿರುವ ಕಾರಣಕ್ಕೇ ಬಾಲ್ಯದಲ್ಲಿ ಇವರ ವರ್ತನೆಯನ್ನು ಕಂಡು ತಂದೆ-ತಾಯಿಗಳು ಹೆದರಿ ಹೋಗಿದ್ದರು, ಇವರ ಮುಂದಿನ ಜೀವನ ಸನ್ಯಾಸವಾಗುವುದು ನಿಜವೆಂದು ಅರಿತ ತಕ್ಷಣವೇ ಆತಂಕಕ್ಕೇ ಒಳಗಾದರು, ಆದರೆ ಅಜಾತ ನಾಗಲಿಂಗ ಶ್ರೀಗಳು ತಾನು ಬಂದಿರುವ ಉದ್ದೇಶ ಈ ಲೋಕದ ಕಲ್ಯಾಣಕ್ಕಾಗಿ ಎಂದು ಹಠ ಹಿಡಿದು ಮನೆ ಬಿಟ್ಟು ಬಂದು ನವಲಗುಂದದಲ್ಲಿ ನೆಲೆಸಿದರು..
ಮಠದಲ್ಲಿ ಮೂಹರಂ ಪಂಜಾಗಳು:
ಅಣ್ಣಿಗೇರಿಯಲ್ಲಿ ಮೂಹರಂ ಹಬ್ಬದ ದಿನ ಪಂಜಾಗಳ ಮೆರವಣಿಗೆ ನಡೆಯುತ್ತಿರುವಾಗ ಅಜಾತ ನಾಗಲಿಂಗ ಶ್ರೀಗಳು ಆ ದಿನ ಗ್ರಾಮವನ್ನು ಪ್ರವೇಶ ಮಾಡಿದರು ಆವತ್ತು ಗ್ರಾಮದಲ್ಲಿ ಹಿಂದು-ಮುಸ್ಲಿಂರೆಲ್ಲರು ಮೂಹರಂ ಹಬ್ಬದ ಸಡಗರದಲ್ಲಿದ್ದರು, ಅಲ್ಲಿ ಪಂಜಾಗಳನ್ನು ಹೂತ್ತು ಕುಣಿಯುತ್ತಿದ್ದವರನ್ನು ಕಂಡ ಇವರು ಅವುಗಳನ್ನು ಹೂತ್ತು ಕುಣಿಯುವ ಆಸೆ ನನಗೂ ಆಗಿದೆ ಪಂಜಾಗಳನ್ನು ಕೂಡಿ ಎಂದು ಕೇಳಿದಾಗ ಅವರು ಸ್ವಾಮಿಗಳ ಮಾತಿಗೆ ಸೂಪ್ಪು ಹಾಕಲಿಲ್ಲಾ, ಇದರಿಂದ ಕುಪಿತಗೂಂಡ ಶ್ರೀಗಳು ಮುಂದೆ ನುಗ್ಗಿ ಅವರ ಕೈಯಿಂದ ಪಂಜಾಗಳನ್ನು ಕಿತ್ತುಕೂಂಡು ಅಲ್ಲಿಂದ ಓಡಲು ಹತ್ತಿದರು, ಅಣ್ಣಿಗೇರಿಯ ಮುಸ್ಲಿಂ ಸಮಾಜದವರು ಬೆನ್ನು ಹತ್ತಿದರು ಅವರ ಕೈಗೆ ಸಿಗದೇ ಆ ಪಂಜಾಗಳನ್ನು ತಂದು ಮಠದ ಗವಿಯಲ್ಲಿಟ್ಟು ಕುಳಿತುಕೂಂಡರು, ನಂತರ ಬಂದ ಅಣ್ಣಿಗೇರಿಯವರಿಗೆ ಇವರು ಸಾಮಾನ್ಯ ಪುರುಷನಲ್ಲಾ ಎಂಬುವುದು ತಿಳಿದಿತ್ತಾದರು ಮತ್ತೇ ಪಂಜಾಗಳನ್ನು ಊರಿಗೆ ಒಯ್ಯಲು ಮರಳಿ ಕೂಡುವಂತೆ ಕೇಳಿಕೂಂಡಾಗ “ನಿಮ್ಮ ದೇವರಾದರೆ ಹೂತ್ತು ಒಯ್ಯಿರಿ” ನಮ್ಮ ದೇವರಾದರೆ ಬಿಟ್ಟು ಹೋಗಿರಿ ಎಂದು ಗೂಢ ವಾಕ್ಯವನ್ನಾಡಿದಾಗ ಗವಿಗೆ ನುಗ್ಗಿದ ಮುಸ್ಲಿಂರು ಆ ಪಂಜಾ ದೇವರನ್ನು ಕೈಗೆತ್ತಿಕೂಳ್ಳಲು ಹೋದರು ಒಂದು ನೂಲಿನಷ್ಠು ಭೂಮಿ ಬಿಟ್ಟು ಸರಿಯಲಿಲ್ಲಾ. ಆಗ ಅವರು ಆ ಪಂಜಾಗಳನ್ನು ಅಲ್ಲಿಯೇ ಬಿಟ್ಟು ಹೋದರು, ಆ ಅಪೂರ್ವವಾದ ಘಟನೆಯೇ ಕಾರಣವಾಗಿ ಇಂದಿಗೂ ನವಲಗುಂದದ ನಾಗಲಿಂಗಸ್ವಾಮಿಗಳ ಮಠದಲ್ಲಿ ಪಂಜಾ ದೇವರು ಪೂಜೆಗೂಳ್ಳುತ್ತಿದೆ. ಮೂಹರಂ ಹಬ್ಬದಲ್ಲಿ ಮುಸ್ಲಿಂರು ಬಂದು ಅದಕ್ಕೇ ಸೇವೆಯನ್ನು ಸಲ್ಲಿಸುತ್ತಾರೆ.

ನಾರು ಹುಣ್ಣಿಗೆ ಕುಲುಮೆ ಚಿಕಿತ್ಸೆ:
ಕುರ್ತಕೋಟಿಯ ಭಕ್ತರ ಮನೆಯಲ್ಲಿ ಕುಳಿತಾಗ ಒಬ್ಬ ಭಕ್ತನ ಕಾಲಿನಲ್ಲಿ ಹುಳವು ಬಿದ್ದು ಹುಣ್ಣು ಉಲ್ಬಣಿಸಿ ಅತೀಯಾದ ನೋವಿನಿಂದ ನರಳಾಡುತ್ತಿದ್ದನು. ಇದಕ್ಕೇನು ಚಿಕಿತ್ಸೆಯಿಲ್ಲವೇ ಅಜ್ಜಾ ಎಂದು ಭಕ್ತನು ಕೇಳಿದ್ದಕ್ಕೇ ಈ ದಿನ ಮಾಡಿಸುತ್ತೇನೆ ಎಂದು ಹೇಳಿ ತಾವೇ ಕಾಲಿಗೆ ಬಟ್ಟೆಯನ್ನು ಸುತ್ತಿಕೂಂಡು ನರಳುತ್ತ ಕುಂಟುತ್ತ ವೀರಪ್ಪನೆಂಬ ಕಮ್ಮಾರನ ಮನೆಗೆ ಹೋದರು. ವೀರಪ್ಪಾ ಈ ನಾರು ಹುಣ್ಣಿನ ಕಾಲನ್ನು ನಿನ್ನ ಕುಲುಮೆಯಲ್ಲಿ ಚನ್ನಾಗಿ ಕಾಯಿಸಬೇಕು, ಈ ಊರು ಸಾಕಾಗಿದೆ ಮುಂದಕ್ಕೇ ಪ್ರಯಾಣವನ್ನು ಬೆಳೆಸಬೇಕಾಗಿದೆ ಎಂದಾಗ ವೀರಪ್ಪನು ಸೇರಿದಂತೆ ಇತರರು ಗಾಬರಿಯಾದರು. ಕಬ್ಬಿಣವನ್ನು ಕಾಯಿಸಿ ಬಡಿಯುವುದೇ ಹೂರತು ನಿನ್ನ ಕಾಲನ್ನು ಕಾಯಿಸುವುದಿಲ್ಲಾ ಗುರುವೇ ಎಂದು ಹೇಳಿ ಕೈ ಮುಗಿದು ಹಿಂದೆ ಸರಿದು ನಿಂತು ಬಿಟ್ಟನು. ಆಗ ಶ್ರೀಗಳು ತಾವೇ ಕುಲುಮೆಯೋಳಗೆ ಬಲಪಾದವನ್ನು ಇಟ್ಟು ತಾವೇ ಅದನ್ನು ಇದ್ದಲಿನಿಂದ ಮುಚ್ಚಿ ಇದ್ದ ಬೆಂಕಿಯನ್ನು ಸ್ಪುಟಿಗೂಳಿಸುತ್ತಾ ದೊಡ್ಡದಾದ ಹಗ್ಗವನ್ನು ತಾವೇ ಜಗ್ಗ ತೂಡಗಿದರು. ಅಗ್ನಿಜ್ವಾಲೆ ಆವರಿಸುತ್ತಾ ಕುಲುಮೆ ಉರಿಯತೂಡಗಿತು.
ಸ್ವಲ್ಪ ಹೂತ್ತಿನ ಬಳಿಕ ಕುಲುಮೆಯೋಳಗಿಂದ ಛಟಾರ ಎಂಬ ಸಿಡಿತದ ಸದ್ದಾಯಿತು ಆಗ ಅವರು ತಮ್ಮ ಕಾಲನ್ನು ಕುಲುಮೆಯಿಂದ ಹೂರತೆಗೆದು ನಾರು ಹುಣ್ಣು ಸುಟ್ಟು ಭಸ್ಮವಾದೆಯಾ ಎಂದು ನಗಲು ಪ್ರಾರಂಭಿಸಿದರು. ಇವರ ಈ ಪವಾಡವನ್ನು ಕಂಡು ಅಲ್ಲಿ ನೆರೆದಿದ್ದ ಭಕ್ತರು ಇವರ ಪಾದಕ್ಕೇ ಬಿದ್ದರು, ಇವರು ಬಲಗಾಲನ್ನು ಕುಲುಮೆಯಲ್ಲಿ ಇಟ್ಟು ಬಡಿದುಕೂಂಡರು ಇವರ ಕಾಲಿನ ಮೇಲೆ ಒಂದು ಸುಟ್ಟ ಗುರುತು ಇರಲಿಲ್ಲಾ, ಆವತ್ತೇ ಹೂರಟು ಹೋದಂತಹ ನಾರುಹುಣ್ಣು ರೋಗ ಇವತ್ತಿಗೂ ಮರಳಿ ಬಂದಿಲ್ಲವೆಂಬುವುದು ಸತ್ಯ..
ಬೈಬಲ್ಗೆ ಮಳೆ ಜಡಿದು ರಂದ್ರ ಮಾಡಿದರು:
ಮುಷ್ಠಿಗೇರಿಯ ಕಾಳಪ್ಪ ಎಂಬಾತನು ದ್ಯಾಮವ್ವನ ಗುಡಿಯಲ್ಲಿ ಬೈಬಲ್ ನ್ನು ಓದುತ್ತ ಕುಳಿತಿದ್ದನು. ಶ್ರೀ ಅಜಾತ ನಾಗಲಿಂಗ ಶ್ರೀಗಳು ದೇವಸ್ಥಾನದ ಹತ್ತಿರ ಬರುತ್ತಿರುವಂತಹ ಸುದ್ದಿಯನ್ನು ತಿಳಿದ ಕೂಡಲೇ ಬೈಬನ್ನು ದ್ಯಾಮವ್ವನ ಮೂರ್ತಿಯ ಹಿಂದೆ ಮುಚ್ಚಿಟ್ಟನು, ತಕ್ಷಣವೇ ಅಲ್ಲಿಗೆ ಬಂದ ಸ್ವಾಮಿಗಳು ಮೂರ್ತಿಯ ಹಿಂದೆ ಮುಚ್ಚಿಟ್ಟಿರುವಂತಹ ಬೈಬಲ್ ನ್ನು ಕೂಡುವಂತೆ ಆಜ್ಞೇ ಮಾಡಿದರು, ನಂತರ ಆ ಬೈಬಲ್ ನ್ನು ತೆಗೆದುಕೂಂಡು ಕಾಯಿ ಸುಲಿಯಲು ಇಟ್ಟಿರುವಂತಹ ಮಳೆಯಿಂದ ಆ ಬೈಬಲ್ ಮೇಲೆ ಜಡಿದರು, ಆ ಬೈಬಲ್ ನಲ್ಲಿ ದೂಡ್ಡದಾದಂತಹ ರಂದ್ರವು ಬಿದ್ದಿತು, ನೋಡು ಈ ರಂದ್ರಗಳು ಯಾವತ್ತು ಮುಚ್ಚಿ ಹೋಗುತ್ತವೆಯೋ ಆವತ್ತು ನಾನು ಮತ್ತೇ ಹುಟ್ಟಿ ಬರುತ್ತೇನೆ ಎಂದು ಹೇಳಿದರು. ಸದ್ಯ ಆ ರಂದ್ರಗಳು ಅತೀ ಸಣ್ಣದಾಗಿ ಕಾಣುತ್ತಿವೆ, ರಂದ್ರದಿಂದ ಹೋಗಿದ್ದ ಅಕ್ಷರಗಳು ಯಥಾವತ್ತಾಗಿ ಮತ್ತೇ ಮೂದಲಿನ ರೀತಿಯಲ್ಲಿಯೇ ಕಾಣುತ್ತಿವೆ, ದಿನಂಪ್ರತಿ ಪೂಜೇ ನಡೆಯುವಂತಹ ಸಮಯದಲ್ಲಿ ಈ ಬೈಬಲ್ ನ್ನು ಸಾರ್ವಜನಿಕ ದರ್ಶನಕ್ಕೇ ಇಡಲಾಗುತ್ತದೆ. ಅದೇ ರೀತಿ ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುವಂತಹ ಆರಾಧನಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೂಂಡು ಶ್ರೀ ಅಜಾತ ನಾಗಲಿಂಗ ಮಹಾಸ್ವಾಮಿಗಳ ಕೃಪೆಗೆ ಪಾತ್ರರಾಗುತ್ತಾರೆ.
ಆರಾಧ್ಯದೈವ ಶ್ರೀ ಅಜಾತ ನಾಗಲಿಂಗ ಮಹಾಸ್ವಾಮಿಗಳ 144ನೇ ಆರಾಧನಾ ಮಹೋತ್ಸವ ಜೂನ್ 29 (ರವಿವಾರ)ರಂದು ಆರಾಧನಾ ಮತ್ತು ಮಜಾರ ಪೂಜೆ ಹಾಗೂ 30 ( ಸೋಮವಾರ) ರಂದು ಪಲ್ಲಕ್ಕಿ ಹಾಗೂ ಮೇಣೆ ಮಹೋತ್ಸವ ಅತೀ ವಿಜೃಂಭಣೆಯಿಂದ ಜರಗುವುದು.

ಸರ್ವ-ಧರ್ಮ ಸಮನ್ವಯ ಸಾಧಿಸುವಂತಹ ಅಜಾತ ನಾಗಲಿಂಗ ಶ್ರೀಗಳ ಲೀಲೆ ಅಪಾರವಾಗಿದೆ, ಪವಾಡ ಪುರುಷ ಅಜಾತ ನಾಗಲಿಂಗ ಶ್ರೀಗಳು ತಮ್ಮ ಲೀಲೆಯ ಮೂಲಕ ಜನಾನುರಾಗಿದ್ದರು, ಭಕ್ತರು ಯಾವುದೇ ಜಾತಿ ಭೇದ ವಿಲ್ಲದೆ ಜಾತ್ರೆಯಲ್ಲಿ ಪಾಲ್ಗೊಂಡು ಶ್ರೀಗಳ ಕೃಪೆಗೆ ಪಾತ್ರರಾಗಬೇಕು.
- ಮಾಬುಸಾಬ ಎಮ್. ಯರಗುಪ್ಪಿ
ಸಮಾಜ ಸೇವಕರು, ನವಲಗುಂದ
ಅಜಾತ ನಾಗಲಿಂಗ ಶ್ರೀಗಳು ಪವಾಡ ಪುರುಷರು, ಅವರ ಜಾತ್ರೆಯಲ್ಲಿ ಹಳ್ಳಿಗಳಿಂದ ಸಾಕಷ್ಟು ಭಕ್ತರು ಪಾಲ್ಗೊಂಡು ಪುನೀತರಾಗುತ್ತಾರೆ.
- ಮಲ್ಲಿಕಾರ್ಜುನಸ್ವಾಮಿ ಮಠಪತಿ
ರೈತ ಮುಖಂಡರು, ಗೊಬ್ಬರಗುಂಪಿ

