ಉತ್ತಮ ಪರಿಸರ ನಿರ್ಮಾಣದಿಂದ ಉತ್ತಮ ಆರೋಗ್ಯ ಸಾಧ್ಯ: ಎಂ ಪಟಗಾರ

Samagraphrabha
1 Min Read

ರೋಣ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಿಜಿಸ್ಟರ್ ರೋಣ ಮತ್ತು ಸರಕಾರಿ ಪ್ರೌಢಶಾಲೆ ಅಬ್ಬಿಗೇರಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಉದ್ಘಾಟಕರಾಗಿ ಆಗಮಿಸಿದ ತಾಲೂಕಿನ ಯೋಜನಾಧಿಕಾರಿಗಳಾದ ಮಹಾಬಲೇಶ್ವರ ಪಟಗಾರ ಮಾತನಾಡಿ ಯೋಜನೆಯ ತಾಲೂಕಿನ ವಿವಿಧ ಕಡೆ 15ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನ ಆ ಯೋಜನೆ ಮಾಡಿದ್ದು ಶಾಲಾ ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಶಾಲೆಗಳಿಗೆ ಅಭಿನವ ಸಂಬಂಧವನ್ನು ಹೊಂದಿದೆ. ಜ್ಞಾನದೀಪ ಶಿಕ್ಷಕರ ವದಗಣನೆ ಸುಜ್ಞಾನ ನಿಧಿ ಶಿಷ್ಯವೇತನ ಕಾರ್ಯಕ್ರಮ ಡೆಸ್ಕ್ ಬೆಂಚ್ ವಿತರಣೆ ಬಗ್ಗೆ ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶಾಲೆಯ ವಿಜ್ಞಾನ ಶಿಕ್ಷಕರಾದ ರೇಣುಕಾ ಕೆಲೂರ್ ಪರಿಸರದಲ್ಲಿ ಉಂಟಾಗುವ ವಾಯುಮಾಲಿನ್ಯ ಶಬ್ದ ಮಾಲಿನ್ಯ ನೀರು ಕಲುಷಿತಗೊಳ್ಳುವುದು. ಇಂದಿನ ಯುವ ಪೀಳಿಗೆಗಳು ಪರಿಸರವನ್ನು ಹಾನಿ ಮಾಡದಂತೆ ನೋಡಿಕೊಳ್ಳಬೇಕು ಪೌಷ್ಟಿಕ ಆಹಾರದ ಬಳಕೆಯನ್ನು ಮಾಡಬೇಕು ಸಾಲುಮರದ ತಿಮ್ಮಕ್ಕನನ್ನು ನೆನೆದು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಂದಾನಪ್ಪ ಹಿರಾಪುರ್ ಕೆರೆ ಸಮಿತಿಯ ಉಪಾಧ್ಯಕ್ಷರು ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ತಮ್ಮ ಜನುಮದಿನದಂದು ಗಿಡವನ್ನು ನೆಡುವುದು ಮತ್ತು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮಾಹಿತಿ ನೀಡಿದರು.

- Advertisement -
Ad image

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಶೋಭಾ ಬಸಲಾಪುರ ವಲಯದ ಮೇಲ್ವಿಚಾರಕಿಯಾದ ಸುಮಾ ಹಿರೇಮಠ್ ಕೃಷಿ ಮೇಲ್ವಿಚಾರಕರಾದ ಶಂಭುಲಿಂಗ ರವರು ನಿರೂಪಿಸಿದರು. ಶಾಲೆಯ ಶಿಕ್ಷಕರಾದ ರತ್ನವ್ವ ಶೆಟ್ಟಿ ರೇಣುಕಾ ಗೌಡರ್ ಸವಿತಾ ಬಂಡ್ರಿ ಶಾಜಿದ ನದಾಫ್ ರಾಜಪ್ಪ ಕೊಡ್ಚಪ್ಪನವರ್ ಪ್ರಕಾಶ್ ಮಡಿವಾಳರ್ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಯಾದ ಈರಮ್ಮ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share this Article