ಗುರಿ ಸಾಧನೆಗೆ ಸತತ ಶ್ರಮ ಅವಶ್ಯಕ : ಡಿ.ಎಸ್.ಪಿ. ಸೋಮಶೇಖರ ಜುಟ್ಟಲ

Samagraphrabha
3 Min Read
ಗದಗ : ಹಿಂದಿನ ಕಾಲದಲ್ಲಿ ಯಾವುದೇ ಸೌಲಭ್ಯವಿಲ್ಲದೇ ಕಠಿಣ ಪರಿಸ್ಥಿತಿಯಲ್ಲಿ ಪರಿಶ್ರಮ ವಹಿಸಿ ಅಭಿವೃದ್ಧಿಯ ಹರಿಕಾರರಾಗಿದ್ದು ಇದಕ್ಕೆ ಸಾಕ್ಷಿ ಎಂಬಂತೆ ಸರ್. ಎಂ. ವಿಶ್ವೇಶ್ವರಯ್ಯ, ಡಾ|| ಬಿ.ಆರ್. ಅಂಬೇಡ್ಕರ, ಡಾ|| ಎ.ಪಿ.ಜಿ ಅಬ್ದುಲ್ ಕಲಾಂ, ಡಾ|| ಎಸ್. ರಾಧಾಕೃಷ್ಣನ್ ಈ ಮೊದಲಾದವರುಗಳು ಕಾಣುತ್ತಿದ್ದು, ಇಂದಿನ ವ್ಯವಸ್ಥೆಯಲ್ಲಿ ಎಲ್ಲಾ ಸೌಲಭ್ಯಗಳ ಸೌಕರ್ಯವಿದ್ದು ಸರಳವಾಗಿ ವಿದ್ಯಾರ್ಥಿಗಳು ಅಭಿವೃದ್ದಿ ಹೊಂದಲು ಉತ್ತಮ ಅವಕಾಶವಿದ್ದು ಒಟ್ಟಿನಲ್ಲಿ ತಂದೆ ತಾಯಿಗಳ ಕಣ್ಣಲ್ಲಿ ದು:ಖದ  ಕಣ್ಣೀರು ತರಸದೇ ಆನಂದದ ಭಾಷ್ಪ ಸುರಿಸುವಂತೆ ಸಾಧನೆ ಮಾಡಬೇಕು ಎಂದು ಮೈಲಾರಪ್ಪ ಮೆಣಸಗಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಾಂಸ್ಕøತಿಕ, ಕ್ರೀಡೆ ಚಟುವಟಿಕೆಗಳ ಸಮಾರೋಪ ಮತ್ತು ಬಿ.ಎ ಹಾಗೂ ಬಿ.ಕಾಂ ಅಂತಿಮ ವರ್ಷದ ಬಿಳ್ಕೋಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿಯ ರೇಲ್ವೆ ವಿಭಾಗದ ಹಿರಿಯ ಅಧಿಕಾರಿಗಳಾದ ಡಿ.ಎಸ್.ಪಿ. ಸೋಮಶೇಖರ ಜುಟ್ಟಲರವರು ಮಾಡನಾಡುತ್ತಾ ಹೇಳಿದರು.
 ಇಂದಿನ ವಿದ್ಯಾರ್ಥಿಗಳು ಅಗತ್ಯಕ್ಕಿಂತ ಹೆಚ್ಚು ಹೆಚ್ಚು ಸಾಮಾಜಿಕ ಮಾಧ್ಯಮ (ಸೋಶಿಯಲ್ ಮೀಡಿಯಾ) ದಲ್ಲಿ ನಿರತರಾಗಿದ್ದರಿಂದ ಗುರಿ ತಲುಪುವಲ್ಲಿ ವಿಫಲರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾಮಾಜಿಕ ಮಾಧ್ಯಮದಿಂದ ದೂರವಿದ್ದು, ಮನೆಯಲ್ಲಿ ಓದುವದನ್ನು ಬಿಟ್ಟರೆ ಕ್ರೀಡಾಂಗಣದಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವುದರಿಂದ ಗುರಿ ಮುಟ್ಟಲು ಸಾಧ್ಯ ಎಂದು ಹೇಳಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಎಂ.ಎಂ. ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾದ ಜಯದೇವ ಮೆಣಸಗಿಯವರು ಮಾತನಾಡುತ್ತಾ ಸಾಧನೆಯ ಹಾದಿಯಲ್ಲಿ ಶ್ರಮ ಅವಶ್ಯಕ ಶ್ರಮವಿಲ್ಲದೇ ಗುರಿ ಮುಟ್ಟಲು ಸಾಧ್ಯವಿಲ್ಲ. ಇದಕ್ಕೆ ನಮ್ಮ ಮಹಾವಿದ್ಯಾಲಯದ 6 ವಿದ್ಯಾರ್ಥಿಗಳು ಕ.ವಿ.ವಿ ಮಟ್ಟದ ಆಟಗಾರರು ಬ್ಲೂ ಆಗಿ ಆಯ್ಕೆ ಆಗಿದ್ದು ಅವರ ಶ್ರಮವೇ ಈ ಸಾಧನೆಗೆ ಸಾಧ್ಯ ಎಂದು ಹೇಳಿದರು.
ಸಮಾರಂಭದ ಮತ್ತೋರ್ವ ಅತಿಥಿಗಳಾಗಿದ್ದ ಎಂ.ಎಂ. ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಎನ್. ಎಂ ಮುಲ್ಲಾ ರವರು ಮಾಡನಾಡುತ್ತಾ, ಸತ್ಯದ ಕಡೆ ನಿಮ್ಮ ಧರ್ಮವಿರಬೇಕು ಭ್ರಷ್ಟಾಚಾರಕ್ಕೆ ಅವಕಾಶ ನೀಡದೇ ಅದನ್ನು ವಿರೋಧಿಸುವ ಗುಣ ಬೆಳಸಿಕೊಳ್ಳಬೇಕು. ಅಂದಾಗ ಸುಂದರ ವ್ಯಕ್ತಿತ್ವ ರೂಪಗೊಳ್ಳುತ್ತದೆ ಎಂದು ಹೇಳಿದರು. ಸಮಾರಂಭದಲ್ಲಿ ಸಾಧಕರಾದ ಪ್ರೊ ಎಸ್. ಕೆ. ಮುಂಡರಗಿ ತಮ್ಮ ವೃತ್ತಿ ಬದುಕಿನಲ್ಲಿ ಕೆ-ಸೆಟ್ ಪಾಸಾಗಿದ್ದು ಅಲ್ಲದೇ ಮಹಾವಿದ್ಯಾಲಯದಲ್ಲಿ 6 ವಿದ್ಯಾರ್ಥಿಗಳು ಬ್ಲೂ ಬರಲಿಕ್ಕೆ ಸೂಕ್ತ ಮಾರ್ಗದರ್ಶನ ನೀಡಿದ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೊ. ಶಿವರಾಜ ಕೊರಸ್‍ರವರನ್ನು ಸನ್ಮಾಸಿದ್ದು ಅಲ್ಲದೇ ಕ.ವಿ.ವಿ ತಂಡಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಾದ 1) ಸಿದ್ದಾರ್ಥ ಎಮ್. ಬಳ್ಳಾರಿ ಬಿ.ಕಾಂ 6ನೇ ಸೆಮಿಸ್ಟರ್ ಅಂತರಾಷ್ಟ್ರಿಯ ಪ್ಯಾರಾ ಓಲಂಪಿಕ್- ಥೈಲಂಡದಲ್ಲಿ ನಡೆದ 100 ಮೀಟರ್, 200 ಮೀಟರ್, 400 ಮೀಟರ್ ಓಟದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. 2) ಮುತ್ತು ಆರ್. ಭಾವಿ ಬಿ. ಎ 6ನೇ ಸೆಮಿಸ್ಟರ್ ಕುಸ್ತಿಯಲ್ಲಿ ಕೆ.ಯು.ಡಿ-2024-25 ನೇ ಸಾಲಿನಲ್ಲಿ ಬ್ಲೂ ಆಗಿ ಆಯ್ಕೆ 3) ಪ್ರಿಯಾಂಕಾ ಸಜ್ಜನರ- ಬಿ. ಎ 4 ನೇ ಸೆಮಿಸ್ಟರ್ ಬಾಸ್ಕೆಟ್ ಬಾಲದಲ್ಲಿ 2024-25 ನೇ ಸಾಲಿನಲ್ಲಿ ಕೆ.ಯು.ಡಿ ಬ್ಲೂ ಆಗಿ ಆಯ್ಕೆ, 4) ಇಂದ್ರಜಿತ್ ಗಾಗಡೆ, ಆದರ್ಶ ಸಿಂಗನಳ್ಳಿ  ಬಿಕಾಂ 2ನೇ ಸೆಮಿಸ್ಟರ್, ಸಾಹಿಲ್ ಗಡಾದ ಬಿ.ಎ 2ನೇ ಸೆಮಿಸ್ಟರ, ಅಭಿಷೇಕ ಮುಟಗಾರ ಬಿ.ಕಾಂ 6ನೇ ಸೆಮಿಸ್ಟರ್ ಇವರು ಹಾಕಿಯಲ್ಲಿ ಕೆ.ಯು.ಡಿ ಬ್ಲೂ 2024-25 ನೇ ಸಾಲಿನಲ್ಲಿ ಆಯ್ಕೆಯಾಗಿದ್ದಾರೆ. ಇವರೆಲ್ಲರಿಗೂ ಮಹಾವಿದ್ಯಾಲಯದ ಪರವಾಗಿ ಸನ್ಮಾನ ಕಾರ್ಯಕ್ರಮವನ್ನು, ಪ್ರೊ ಎಸ್. ಬಿ ಹಿರೇಮಠ ನಿರ್ವಹಿಸಿದರು.
ಸಮಾರಂಭದಲ್ಲಿ ಸರ್ವರನ್ನು ವಿದ್ಯಾರ್ಥಿನಿ ವಿನುತಾ ಬಿಂಗಿ ಸ್ವಾಗತಿಸಿದರು, ಮಹಾವಿದ್ಯಾಲಯ ನಡೆದುಬಂದ ದಾರಿಯನ್ನು ಸಭೆಗೆ ವಿವರಿಸುತ್ತಾ ಪ್ರಾಸ್ತಾವಿಕವಾಗಿ ಹಿರಿಯ ಪ್ರಾಧ್ಯಾಪಕರಾದ ಬಿ. ಎಮ್. ನದ್ದಿಮುಲ್ಲ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದುಕೊಂಡಿದ್ದ ಪ್ರಾಚಾರ್ಯರು ಎಸ್.ಜಿ. ಮರಿಗುದ್ದಿಯವರು ಮಾತನಾಡುತ್ತಾ ವಿದ್ಯಾರ್ಥಿಗಳು ಹಿರಿದಾದ ಗುರಿ ಹೊಂದಿ ಆ ನಿಟ್ಟಿನಲ್ಲಿ ಅಭ್ಯಾಶಿಸಿ ಯಶಸ್ವಿ ವಿದ್ಯಾರ್ಥಿಗಳಾಗಿ ಎಂದು ಹರಿಸುತ್ತಾ ಸಮಾರೋಪ ಭಾಷಣ ಮಾಡಿದರು ಸಮಾರಂಭದಲ್ಲಿ ಗದುಗಿನ ವಿವಿಧ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ|| ಬಿ. ಜಿ ಹಿರೇಮಠ, ಡಾ|| ಆರ್. ಎಸ್. ದಾನರಡ್ಡಿ ಡಾ|| ವ್ಹಿ.ಎ. ನಿಂಗೋಜಿ, ಪ್ರೊ ಎಂ. ಆಯ್. ಜೋಬಾಳಿ, ಪ್ರೊ. ಕರ್ಲವಾಡ, ಡಾ|| ವ್ಹಿ. ಡಿ. ಮುಳಗುಂದ ಮಹಾವಿದ್ಯಾಲಯದ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ವಿದ್ಯಾರ್ಥಿ ಪ್ರತಿನಿಧಿಗಳಾದ ಸ್ನೇಹಾ ಬಿಂಗಿ ಹಾಗೂ ಸೃಷ್ಟಿ ಆಳವಂಡಿ ಅಚ್ಚು ಕಟ್ಟಾಗಿ ನೆರವೇರಿಸಿದರು ಕೊನೆಗೆ ವಿದ್ಯಾರ್ಥಿ ಗೌರಮ್ಮ ವಂದನಾರ್ಪಣೆಗೈದರು.

Share this Article