ಗದಗ: ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆ ಕುರಿತು ಎಲ್ಲ ವಿವರಗಳೊಂದಿಗೆ ಸುದೀರ್ಘವಾಗಿ ಪತ್ರ ಬರೆದಿದ್ದೇನೆ. ಈ ಪತ್ರಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕುಂಬಕರ್ಣ, ರಾವಣ ಎಂಬ ಪೌರಾಣಿಕ ಸನ್ನಿವೇಶವನ್ನು ಪಾತ್ರಗಳ ಹೆಸರನ್ನು ತೆಗೆದುಕೊಂಡು ಪತ್ರವನ್ನು ಕಸದ ಬುಟ್ಟಿ ಎಸೆಯಬೇಕು ಎಂದು ಹೇಳಿದ್ದಾರೆ. ಆ ಪತ್ರ ಕಸದ ಬುಟ್ಟಿಗೋ, ಕ್ರಮದ ತೊಟ್ಟಿಗೋ
ಎಂಬುದನ್ನು ಯಾರಿಗೆ ಪತ್ರ ಬರೆದಿದ್ದೀನೋ ಅವರು ಅದನ್ನು ನಿರ್ಣಯಿಸುತ್ತಾರೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಕಳೆದ ಹಾಗೂ ಈ ಅವಧಿಯಲ್ಲಿ ಸಿಎಂ ಆಗಿದ್ದಾಗ ಕಣ್ಣು ಮುಚ್ಚಿ ಕುಳಿತಿದ್ದರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೀವು ಸಿಎಂ ಆಗಿದ್ದಾಗ ಅಕ್ರಮದ ವರದಿಗಳು ನಿಮ್ಮ ಕೈಯಲ್ಲಿದ್ದವು, ನೀವು ಅಭಿಷೇಕ ಮಾಡುತ್ತ ಕುಳತಿದ್ದರಾ ಎಂದು ಮರುಪ್ರಶ್ನಿಸಿದರು.
ರಾಜ್ಯದಲ್ಲಿ 1.50 ಲಕ್ಷ ಕೋಟಿ. ರೂ. ಮೊತ್ತದ ಅಕ್ರಮ ಗಣಿಗಾರಿಕೆ ಸಂಪತ್ತು ಕನ್ನಡಿಗರಿಗೆ ವಾಪಾಸ್ ತರಬೇಕೆನ್ನುವುದು ನನ್ನ ಪತ್ರದ ಉದ್ದೇಶವಾಗಿದೆ. ಕುಮಾರಸ್ವಾಮಿ ಅವರೇ ನೀವು ದೊಡ್ಡ ಸ್ಥಾನದಲ್ಲಿದ್ದಿರಿ. ವ್ಯವಸ್ಥೆಗೆ ಸವಾಲಾಗಿರುವ ಅಕ್ರಮ ಲೂಟಿ ಗುನ್ನೆಯಿಂದ ನಷ್ಟವಾಗಿರುವ ಅಮೂಲ್ಯವಾಗಿರುವ ಸಂಪತ್ತು. ಹಾಗೂ ಅದರ ಮೌಲ್ಯವನ್ನು ಕನ್ನಡಿಗರಿಗೆ ವಾಪಸ್ ತರಲು ಅಡಿ ಇಡಿ ಎಂದು ಸಚಿವ ಎಚ್.ಕೆ. ಪಾಟೀಲ ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾಜಿ ಶಾಸಕ ಡಿ.ಆರ್.ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ, ಗದಗ ತಾಲೂಕಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಸಿದ್ಧು ಪಾಟೀಲ, ಫಾರೂಕ್ ಹುಬ್ಬಳ್ಳಿ ಹಾಜರಿದ್ದರು.

