ಗದಗ : ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಗದಗ ಶಹರ ಪೊಲೀಸ್ ಠಾಣೆ ಸಿಪಿಐ ಡಿ ಬಿ ಪಾಟೀಲ್ ಮನೆ ಮೇಲೆ ದಾಳಿ ನಡೆಸಿದ್ದಾರೆ.
ನಗರದ ಶಿವಾನಂದ ನಗರದಲ್ಲಿ ಬಾಡಿಗೆ ಮನೆ ಹಾಗೂ ಗದಗ ಶಹರ ಪೊಲೀಸ್ ಠಾಣೆಯ ಕಚೇರಿ ಮೇಲೆ ದಾಳಿ ನಡೆಸಿ ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ ಜೊತೆಗೆ ಸಿಪಿಐ ಡಿ ಬಿ ಪಾಟೀಲ್ ಗೆ ಸೇರಿದ ಬಾಗಲಕೋಟೆ, ಜಮಖಂಡಿ, ಕೆರೂರ ಮನೆಗಳು ಸೇರಿದಂತೆ
ಏಳು ಜಾಗದಲ್ಲಿ ಪರಿಶೀಲನೆ ನಡೆಸಿದ್ದಾರೆ.

ಶೌಚಾಲಯ ಬಾಗಿಲು ಬಡಿದ ಲೋಕಾ ಅಧಿಕಾರಿಗಳು :
ಮನೆಯ ಹೊರಗಡೆ ಶೌಚಾಲಯದಲ್ಲಿ ಕುಳಿತುಕೊಂಡಿದ್ದ ಸಿಪಿಐ ಇದನ್ನು ಗಮನಿಸಿದ ಲೋಕಾ ಅಧಿಕಾರಿಗಳು ಶೌಚಾಲಯ ಬಳಿ ಬಂದು ಕಿವಿ ಕೊಟ್ಟು ಕೇಳಿದರು. ಮೊಬೈಲ್ ನಲ್ಲಿ ಏನಾದರೂ ಮಾತನಾಡುತ್ತಿದ್ದಾರೆ ಎಂದು ಡೋರ್ ಗೆ ಕಿವಿಕೊಟ್ಟು ಕೇಳ್ತಾಯಿದ್ದರು. ಡೋರ್ ಬಡೆದ ನಂತರ ಶೌಚಾಲಯದಿಂದ ಹೊರಗಡೆ ಬಂದ ಡಿ.ಬಿ ಪಾಟೀಲ.
ದಾಳಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ, ಪಿ ಎಸ್ ಪಾಟೀಲ ಸಿಪಿಐ ಪರಶುರಾಮ ಕವಟಗಿ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.

