ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಣೆ

Samagraphrabha
1 Min Read

ನವಲಗುಂದ: ಪಟ್ಟಣದ ಶ್ರೀ ವಿದ್ಯಾ-ಜ್ಯೋತಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.

ಮಾಜಿ ಸೈನಿಕ ಮಾರುತಿ ಡೊಂಬರ ಮಾತನಾಡಿ ಮಕ್ಕಳು ಪ್ರತಿದಿನ ಯೋಗಾಸನ ಮಾಡುವುದರಿಂದ ಆಗುವ ಉಪಯೋಗಗಳ ಬಗ್ಗೆ ತಿಳಿಸಿ ಹಾಗೂ ತಾವೇ ಮಕ್ಕಳಿಗೆ ಯೋಗಾಸನದ ಆಸನಗಳನ್ನು ಹೇಳಿಕೊಟ್ಟರು..

ಸಂಸ್ಥೆಯ ಕಾರ್ಯದರ್ಶಿ ಬಿ.ಎಸ್. ಕುರುಬರ ಮಾತನಾಡಿ ಯೋಗ ಬಲ್ಲವನಿಗೆ ರೋಗವಿಲ್ಲ ಎನ್ನುವಂತೆ ಯೋಗ ಮಾಡುವುದರಿಂದ ಉತ್ತಮ ಆರೋಗ್ಯ ಹೊಂದಬಹುದೆಂದು ಮಕ್ಕಳಿಗೆ ಸಲಹೆ ನೀಡಿದರು.

- Advertisement -
Ad image

ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ಮಾರುತಿ ಡೊಂಬರ ಅವರಿಗೆ ಶಿಕ್ಷಣ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು, ಶಾಲೆಯ ಮುಖ್ಯ ಶಿಕ್ಷಕಿ ನೀಲಾ ಕುರುಬರ ಸಹ ಶಿಕ್ಷಕ ಅನಿಲ ಕೊಣ್ಣೂರ, ಸಹ ಶಿಕ್ಷಕಿ ಮಂಜುಳಾ ಲಿಂಗದಾಳ, ಭುವನೇಶ್ವರಿ ಇನಾಮತಿ, ಫರ್ಜಾನ ನದಾಫ್, ಅಮೀನಾಬೇಗಂ ನಾಶಿಪುಡಿ, ಗಂಗಾ ದೊಡ್ಡಮನಿ, ವಿನೋದ ಕುರಹಟ್ಟಿ, ಈರಣ್ಣ ಮಠಪತಿ, ಶರಣು ನಿಡವಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು…

Share this Article