ಸಾಮೂಹಿಕ ಮದುವೆಯಿಂದ ಸಾಮಾಜಿಕ ಸಾಮರಸ್ಯ, ದುಂದುವೆಚ್ಚಕ್ಕೆ ಕಡಿವಾಣ- ಸಲೀಂ ಅಹ್ಮದ್

Samagraphrabha
2 Min Read

ಗದಗ: ಸಾಮೂಹಿಕ ಮದುವೆಗಳು ಇಂದು ಅತ್ಯಂತ ಪ್ರಸ್ತುತವಾಗಿದ್ದು ಇಂತಹ ಮದುವೆಗಳಿಂದ ಸಾಮಾಜಿಕ ಸಾಮರಸ್ಯ ಬೆರೆಸುವ ಜೊತೆಗೆ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
ರೋಣ ತಾಲೂಕಿನ ಕುರುಡಗಿ ಗ್ರಾಮದಲ್ಲಿ ಭಾನುವಾರ ಅಂಜುಮನ್ ಇಸ್ಲಾಂ ಸಮಿತಿ ವತಿಯಿಂದ ನೂತನ ನಫೀಸಾ ಕೌಸರ್ ಮಸ್ಜಿದ್ ಕಟ್ಟಡದ ಉದ್ಘಾಟನೆ ಹಾಗೂ
ಸಾಮೂಹಿಕ ವಿವಾಹ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ಇಂದು ನನಗೆ ಅತ್ಯಂತ ಸಂತೋಷದ ದಿನ ಆಗಿದ್ದು ಒಂದು ನೂತನ ಮಸ್ಜಿದ್ ಲೋಕಾರ್ಪಣೆ ಇನ್ನೊಂದು ಕಡೆ ನವದಂಪತಿಗಳು ಹೊಸ ಜೀವನಕ್ಕೆ ಕಾಲಿ ಇರಿಸತಾ ಇದ್ದಾರೆ. ನೂತನ ದಂಪತಿಗಳಿಗೆ ಭವಿಷ್ಯದ ಬದುಕು ಒಳ್ಳೆಯದಾಗಲಿ ಎಂದರು. ಇಂತಹ ಸಾಮೂಹಿಕ ಮದುವೆ ಇಡೀ ನಾಡಿಗೆ ಮಾದರಿಯಾಗಲಿ, ಇನ್ನು ಗ್ರಾಮದಲ್ಲಿ ಎಲ್ಲ ವರ್ಗದ ಜನರು ಬಹಳಷ್ಟು ಅನ್ಯೋನ್ಯತೆಯಿಂದ ಇದ್ದು ಈ ಕಾರ್ಯಕ್ರಮದಲ್ಲಿ ಸಹ ಜಾತಿ ಮತ ಪಂಥ ಧರ್ಮ ಎನ್ನದೇ ಎಲ್ಲರೂ ಭಾಗವಹಿಸಿದ್ದು ಬಹಳ ಮಾದರಿ ಕಾರ್ಯಕ್ರಮ ಆಗಿದೆ ಎಂದರು. ಇನ್ನು ಗ್ರಾಮದ ಹಿರಿಯರು ಅಂಜುಮನ್ ಇಸ್ಲಾಂ ಸಮಿತಿ ವತಿಯಿಂದ ಗ್ರಾಮದಲ್ಲಿ ಶಾದಿ ಮಹಲ್ ನಿರ್ಮಾಣಕ್ಕೆ ಸಹಾಯ ಕೋರಿದ್ದಾರೆ ಶಾದಿ ಮಹಲ್ ನಿರ್ಮಾಣದ ಭರವಸೆ ನೀಡಿದರು.
ನುಡಿದಂತೆ ನಡೆದ ಸರಕಾರ ಕಾಂಗ್ರೆಸ್ ಸರಕಾರ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮುನ್ನ ನಾವು ಕೊಟ್ಟ ಭರವಸೆಗಳನ್ನ ಪ್ರಾಮಾಣಿಕವಾಗಿ ಈಡೇರಿಸತಾ ಇದ್ದೇವೆ. ಐದು ಗ್ಯಾರಂಟಿಗಳ ಮೂಲಕ ಜನರ ಹತ್ತಿರ ಆಗಿದ್ದು ವಿಶೇಷವಾಗಿ
ಶಕ್ತಿ ಯೋಜನೆ ಹಾಗೂ ಗೃಹ ಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರಿಗೆ ಮರೆಯಲಾಗದ ಕೊಡುಗೆ ನೀಡಿದ ಸರಕಾರ ನಮ್ಮದು ಎಂದರು.
ನರೇಂದ್ರ ಮೋದಿ ಸರಕಾರ ಸುಳ್ಳಿನ ಸರಕಾರ
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಅವರು ಅಧಿಕಾರಕ್ಕೆ ಬಂದ ನಂತರ ಕೇವಲ ಸುಳ್ಳು ಹೇಳುವುದರಲ್ಲಿ ಕಾಲಹರಣ ಮಾಡತಾ ಇದ್ದು ಯಾವುದೇ ಭರವಸೆಗಳು ಈಡೇರಿಸಲು ಆಗಿಲ್ಲ ನಿರುದ್ಯೋಗ ಸಮಸ್ಯೆ, ರೈತರಿಗೆ ನೀಡಿದ ಅನೇಕ ಭರವಸೆಗಳು ಹಾಗೇ ಉಳಿದಿವೆ. ಮಹದಾಯಿ ಯೋಜನೆ ಜಾರಿ ಮಾಡುವುದಾಗಿ ಹೇಳತಾ ಬಂದಿದ್ದು ಇದುವರೆಗೆ ಜಾರಿ ಆಗತಾ ಇಲ್ಲ ಕಿಡಿಕಾರಿದರು. ಮಾಜಿ ಶಾಸಕ ಬಿ‌.ಆರ್ .ಯಾವಗಲ್ ಮಾತನಾಡಿದರು,ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಚಂದ್ರಶೇಖರ ಜುಟ್ಟಲ್, ಎಸ್‌. ಡಿ‌.ಮಕಾಂದಾರ, ಯುವ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿವೇಕ ಯಾವಗಲ್, ಲಾಲಸಾಹೇಬ್ ನಧಾಪ, ಸೈಯದ್ ಖಾಲಿ, ಗ್ರಾಪಂ ಅಧ್ಯಕ್ಷ ಶಿವನಗೌಡ, ಸದಸ್ಯ ಶೌಖತ್ ಅಲಿ,ವಕೀಲ ಕುಂಬಾರಮಟ್ಟಿ, ಪೀರಸಾಬ್ ನಧಾಪ್, ಎಫ್ ಎಂ‌‌, ನಧಾಪ್ ಮುಂತಾದವರು ಇದ್ದರು.

Share this Article