ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿತ; ಶಿಕ್ಷಕ ಸೇರಿ ಇಬ್ಬರು ಮಕ್ಕಳಿಗೆ ಗಾಯ, 16 ವಿದ್ಯಾರ್ಥಿಗಳು ಬಚಾವ್

Samagraphrabha
1 Min Read

ಗಜೇಂದ್ರಗಡ: ಸರ್ಕಾರಿ ಶಾಲೆಯ ಮೇಲ್ಚಾವಣಿ ಕುಸಿದು ಒಬ್ಬ ಶಿಕ್ಷಕ ಹಾಗೂ ಎರಡು ಮಕ್ಕಳಿಗೆ ಗಾಯವಾದ ಘಟನೆ ಗಜೇಂದ್ರಗಡ ತಾಲೂಕಿನ ಚಿಲಝರಿ ಗ್ರಾಮದ ಶಾಲೆಯಲ್ಲಿ ನಡೆದಿದೆ. ವಿದ್ಯಾರ್ಥಿಗಳು ಹೊರಗೆ ಹಾಲು ಕುಡಿಯಲು ಹೋಗಿರುವಾಗ ಈ ದುರ್ಘಟನೆ ನಡೆದ ಹಿನ್ನಲೆ ಅದೃಷ್ಟವಶಾತ್ 18 ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಿಕ್ಷಕರಾದ ಎಮ್, ಡಿ, ವಂಟಿ ಅವರಿಗೆ ಗಂಭೀರ ಗಾಯವಾಗಿದ್ದು, ಮತ್ತು 6 ನೇ ತರಗತಿ ವಿದ್ಯಾರ್ಥಿ ಆದ ಶಂಕರ ತಳವಾರ ಹಾಗೂ ಓರ್ವ ವಿದ್ಯಾರ್ಥಿನಿಯಾದ ಗೌರಮ್ಮ ಡಕ್ಕಿ, ಎಂಬುವವರಿಗೆ ಗಾಯಾವಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಪೋಷಕರು ಶಾಲೆಗೆ ದೌಡಾಯಿಸಿದ್ದಾರೆ.

ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 25 ವರ್ಷದ ಹಿಂದೆಯೇ ನಿರ್ಮಾಣಗೊಂಡಿದ್ದ ಕಟ್ಟಡವಾಗಿದ್ದು, ಆರು ತಿಂಗಳ ಹಿಂದೆಯೇ ಮೇಲಧಿಕಾರಿಗಳಿಗೆ ಬಿಲ್ಡಿಂಗ್‌ ಶಿಥಿಲಾವಸ್ಥೆ ತಲುಪಿದ್ದ ಬಗ್ಗೆ ಮಾಹಿತಿ ನೀಡಲಾಗಿತ್ತು. ಮಾಹಿತಿ ಇದ್ದರೂ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಶಿಕ್ಷಣ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಶಾಲೆಯ ಮುಖ್ಯೋಪಾಧ್ಯಾಯ ಆಯ್, ಎಸ್, ಜಾಪಾಳ್ ಮಾತನಾಡಿ ನಾವು ಕಳೆದ 4 ತಿಂಗಳ ಹಿಂದೆ ಶಾಲೆ ಕಟ್ಟಡದ ಕುರಿತು, ರಾಮಪುರ ಗ್ರಾಮ ಪಂಚಾಯತ್ ಹಾಗೂ ರೋಣ ತಾಲೂಕಿನ ಶಿಕ್ಷಣ ಇಲಾಖೆಗೆ ಲಿಖಿತ ದಾಖಲೆ ನೀಡಿದರು ಸಹ ಇಲ್ಲಿಯವರಿಗೂ ಯಾವದೇ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಮಾಧ್ಯಮ ಮಿತ್ರರಿಗೆ ವಿಷಯ ತಿಳಿಸಿದರು.

- Advertisement -
Ad image

ಕೊಠಡಿಯ ಮೇಲ್ಪಾವಣಿ ಕುಸಿದು ಶಿಕ್ಷಕ ಸೇರಿ ಇಬ್ಬರು ವಿದ್ಯಾರ್ಥಿಗಳಿಗೆ ತೆಲೆಗೆ ಪೆಟ್ಟು ಬಿದ್ದಿರುವ ಬಗ್ಗೆ ಗಮನಕ್ಕೆ ಬಂದಿದೆ. ಸಂಪೂರ್ಣ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಎಂ ಎ ಪಣಿಬಂದ ಪ್ರಭಾರಿ ಬಿಇಒ, ರೋಣ.

Share this Article