ಶಿರಹಟ್ಟಿ : ಪಟ್ಟಣದ ಜಿ.ಎಚ್.ಪಿ.ಜಿ.ಎಸ್ ನೂತನವಾಗಿ ಪ್ರಾರಂಭವಾಗಿರುವ ಎಲ್‍ಕೆಜಿ ಶಾಲೆಯ 30 ಮಕ್ಕಳಿಗೆ ಬಜಾಜ್ ಫೈನಾನ್ಸ್ ವತಿಯಿಂದ ಉಚಿತವಾಗಿ ಸ್ಕೂಲ್ ಬ್ಯಾಗ್‍ಗಳನ್ನು ವಿತರಿಸಿದರು.
ಈ ವೇಳೆ ಫಕ್ಕೀರೇಶ ಅಡವಿ ಮಾತನಾಡುತ್ತಾ, ಈ ಮಕ್ಕಳನ್ನು ನೋಡಿದರೆ ನಮ್ಮ ಬಾಲ್ಯದ ನೆನಪಾಗುತ್ತದೆ. ಬಾಲ್ಯ ಎಂಬುದು ಅತ್ಯಂತ ಅಮೂಲ್ಯವಾದದ್ದು, ತಾವೆಲ್ಲರೂ ಕಷ್ಟಪಟ್ಟು ಓದುವದರ ಜೊತೆಗೆ ಇಷ್ಟಪಟ್ಟು ಓದಿದಾಗ ಮಾತ್ರ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯವಾಗುತ್ತದೆ. ಅಂದಾಗ ಮಾತ್ರ ತಾವು ಕಲಿತ ಶಾಲೆಗೆ ಮತ್ತು ಇಲ್ಲಿಯ ಶಿಕ್ಷಕರಿಗೆ ಹಾಗೂ ಪೋಷಕರಿಗೆ ಕೀರ್ತಿ ತಂದು ಕೊಡಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯರಾದ ಪರಸಪ್ಪ ಬಂತಿ, ಆರ್ ಬಿ. ಪಲ್ಲೇದ, ಎನ್ ಎಮ್. ಕಟ್ಟಿಮನಿ, ಡಿ ಸಿ. ಕಾಳಪ್ಪನವರ, ಎಫ್ ಎ. ಮಕಾಂದಾರ, ಜೆ ಬಿ. ಪಾಟೀಲ, ಕಾಶಪ್ಪ ಸ್ವಾಮಿ, ಎಂ ಎಚ್. ಶಿರಹಟ್ಟಿ, ಪ್ರಿಯಾಂಕಾ ನಿಂಗೋಜಿ, ಬಜಾಜ್ ಫೈನಾನ್ಸ್ ಸಿಬ್ಬಂದಿ ಮಂಜುನಾಥ ಗಾಣಿಗೇರ ಹಾಗೂ ಇನ್ನಿತರರು ಇದ್ದರು.
ಬಜಾಜ್ ಫೈನಾನ್ಸ್ ವತಿಯಿಂದ ಎಲ್‍ಕೆಜಿಯ 30 ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ
