ಗದಗ : ಹಲವು ಅತ್ಯಂತ ಹಿಂದುಳಿದ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್ ಬೌದ್ದ, ಸಿಖ್ಖ, ಮತ್ತು ಪಾರ್ಸಿ ಸಮುದಾಯದ ಜನಾಂಗವನ್ನು ಗುರುತಿಸಿ ಹಿಂದುಳಿದ ನಿರ್ದೇಶನಾಲಯದಿಂದ ಹೊರತಂದು ವಿಶೇಷವಾಗಿ ರಚಿಸಲಾದ ಒಕ್ಕೂಟವೇ ಅಲ್ಪಸಂಖ್ಯಾತ ಸಮುದಾಯವಾಗಿರುತ್ತದೆ.ಇದು ಕೇವಲ ಒಂದೇ ಸಮುದಾಯವನ್ನು ಗುರಿಯನ್ನಾಗಿಸಿ ರಚನೆ ಮಾಡಲಾದ ಒಕ್ಕೂಟವಲ್ಲ. ಒಕ್ಕೂಟದ ಸಮಸ್ತ ಸಮುದಾಯದ ನಾಗರಿಕರ ಸಾಮಾಜಿಕ, ಆರ್ಥಿಕ, ಸೈಕ್ಷಣಿಕ, ಮತ್ತು ಇತರೆ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ಸೈಕ್ಷಣಿಕ ರಿಯಾಯತಿ, ಮಹಿಳೆಯರ ಮತ್ತು ಮಕ್ಕಳ ಉದ್ಯೋಗವನ್ನು ಒದಗಿಸಿ ಆರ್ಥಿಕ ಸಬಲೀಕರಣದ ಮೂಲೋದ್ದೇಶದೊಂದಿಗೆ ಕಾರ್ಯಗತವಾಗಿರುತ್ತದೆ.
ಈ ಒಂದು ವಿವಿಧ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್ ಬೌದ್ದ, ಸಿಖ್ಖ, ಮತ್ತು ಪಾರ್ಸಿಗಳ ಶ್ರೇಯೋಭಿವೃದ್ಧಿಗಾಗಿ ಕಳೆದ 2019 ರಲ್ಲಿಯೇ ಸಮಿಶ್ರ ಸರಕಾರವಾದ ಎಚ್ ಡಿ ಕುಮಾರಸ್ವಾಮಿ ಸಂಪುಟದಲ್ಲಿಯೇ ಉಪಸಮಿತಿಯು ಶಿಫಾರಸ್ಸು ಮಾಡಲಾಗಿತ್ತು. ಇದೀಗ ಸಂಪುಟದ ಮುಂದೆ ಬಂದು ಒಪ್ಪಿಗೆ ದೊರೆತಿದೆ. ಈಗಾಗಲೇ ಇದ್ದ ಶೇ. 10 ರಷ್ಟು ಮೀಸಲಾತಿ ಪ್ರಮಾಣ ಶೇ. 15 ಕ್ಕೆ ಹೆಚ್ಚಿಸಲಾಗಿದೆ. ಕೇಂದ್ರದಲ್ಲಿ ಈಗಾಗಲೇ ಸಾಚಾರ್ ಸಮಿತಿ ವರದಿ ಪ್ರಕಾರ ಕೇಂದ್ರ ಸರ್ಕಾರದಲ್ಲಿ ವಸತಿ ಯೋಜನೆಗಳಲ್ಲಿ ಶೇ. 15 ರಷ್ಟು ಮೀಸಲಾತಿ ಅಲ್ಪಸಂಖ್ಯಾತ ಸಮುದಾಯಕ್ಕೆ ಇದೆ.
ಅದರಂತೆ ರಾಜ್ಯದ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ.15 ರಷ್ಟು ಮೀಸಲು ನೀಡುವ ಮೂಲಕ ಸರ್ವ ಧರ್ಮಿಯ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಯ ಸರ್ಕಾರದ ನಿರ್ಧಾರವನ್ನುಕೈಗೊಂಡ ಘನ್ ರಾಜ್ಯ ಸರಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಕಾನೂನು ಸಚಿವರಾದ ಡಾ ಎಚ್ ಕೆ ಪಾಟೀಲ್ ಸಾಹೇಬರಿಗೆ ಸಮಸ್ತ ಅಲ್ಪಸಂಖ್ಯಾತ ಸಮುದಾಯದ ಭಾಂಧವರ ಪರವಾಗಿ ಗದಗ ಬೆಟಗೇರಿ ನಗರಸಭೆಯ ಸದಸ್ಯರು ಹಾಗೂ ವಿರೋಧ ಪಕ್ಷದ ಉಪ ನಾಯಕರಾದ ಜನಾಬ್ ಬರಕತ್ ಅಲಿ ಮುಲ್ಲಾ ರವರು ಶ್ಲಾಘನೆಯನ್ನು ವ್ಯಕ್ತಪಡಿಸಿರುತ್ತಾರೆ.
