ಮುಂಡರಗಿ : ಎಲ್ಲರಿಗೂ ಸಮಪಾಲು ಎಲ್ಲರಿಗೂ ಸಮಬಾಳು ಎನ್ನುವ ಹಾಗೆ ಆಡಳಿತ ನಡೆಸಿ ಅಂದಿನ ರಾಮರಾಜ್ಯದ ಪ್ರಜೆಗಳ ಸುಬಿಕ್ಷೆಗಾಗಿ ನಡೆಸಿದಂತೆ ನಾಲ್ವಡಿ ಕೃಷ್ಣರಾಜ ಒಡೆಯರು ಆಡಳಿತವನ್ನು ನಡೆಸಿ ಜನರಿಗೆ ಹತ್ತಿರವಾಗಿ ಬದುಕಿದವರು ಎಂದರು
ಅವರು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮುಂಡರಗಿ ಹಾಗೂ ಪ್ರಿಯದರ್ಶಿನಿ ಶಿಕ್ಷಣ ಮಹಾವಿದ್ಯಾಲಯ ಮುಂಡರಗಿ ಇವುಗಳ ಆಶ್ರಯದಲ್ಲಿ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಮತ್ತು ಕೊಡುಗೆ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನಿಡಿದ ವೀಣಾ ಪಾಟೀಲ ಚೈತನ್ಯ ಶಿಕ್ಷಣ ಸಂಸ್ಥೆ ಸೌರಭ ಇವರು ಮಾತನಾಡಿ
ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಬದುಕಿದ ಮಾದರಿ ಅವರು ನಿಡಿದ ಯೋಜನೆಗಳ ಕೊಡುಗೆಗಳು ಇಂದಿಗೂ ಪ್ರಸ್ತುತವಾಗಿವೆ, ಅವರ ಕೈಗೊಂಡ ಅನೇಕ ಕ್ರಾಂತಿಕಾರಕ ಯೋಜನೆಗಳು ಜನರ ಬದುಕಿಗೆ ಮಾದರಿಯಾಗಿದೆ, ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡು ತಾಯಿಯ ಆಸರೆಯಲ್ಲಿ ಬೆಳದ ಮಗ ಮುಂದೆ ರಾಜ್ಯದ ಚುಕ್ಕಾಣೆ ಹಿಡಿದು. ಮೈಸೂರು ರಾಜ್ಯವನ್ನು ಕೈಗಾರಿಕೆ,ವಾಣಿಜ್ಯ,ಕೃಷಿ,ಶಿಕ್ಷಣ ನಿರಾವರಿ,ಆಣೆಕಟ್ಟು,ಇನ್ನೂ ಅನೇಕ ಕೊಡುಗೆಗಳನ್ನು ನಿಡಿದವರು, ಮೈಸೂರನ್ನೂ ಸಂಸ್ಕೃತಿಕ ನಗರವನ್ನಾಗಿ ಅಂದೆ ರೂಪರೇಷ ತಯಾರಿಸಿದ ಮಹಾನುಭಾವ, ತತ್ವಶಾಸ್ತ್ರ ನ್ಯಾಯಶಾಸ್ತ್ರ ಆಡಳಿತಶಾಸ್ತ್ರ ಕಲಿತವರು ಮಹಿಳೆಯರಿಗೆ ಶಿಕ್ಷಣ, ಹಕ್ಕುಗಳನ್ನು ಕಾನೂನುಗಳನ್ನು ರೂಪಿಸುವ ಮೂಲಕ ಮತದಾನ ಹಕ್ಕು ಅವಕಾಶವನ್ನು ಕಲ್ಪಿಸಿದವರು. ಜಾತಿಪದ್ದತ್ತಿ, ಬಾಲ್ಯವಿವಾಹ,ಬಸರಿ ಪದ್ದತ್ತಿ ನಿಲ್ಲಿಸಲೂ ಪಣ ತೊಟ್ಟವರು, ಅವರು ಇಷ್ಠೆ ಅಲ್ಲದೆ ರೈತರ ಹಿತದೃಷ್ಟಿಯಿಂದ ನೀರಾವರಿಯ ಆದ್ಯತೆ ನೀಡುವುದಕ್ಕೋಸ್ಕರ ಆಣೆಕಟ್ಟನ್ನು ಕಟ್ಟಿ ಮೈಸೂರು ಭಾಗದಲ್ಲಿ ನಿರಾವರಿಗೆ ಆದ್ಯತೆ ನಿಡಿ ರೈತರ ಪಾಲಿಗೆ ಆಶಾಕಿರಣವಾದವರು ನಾಲ್ವಡಿ ಕೃಷ್ಣರಾಜ ಒಡೆಯರ್, ಗುರುಕುಲದಲ್ಲಿ ನಡೆಯುತ್ತಿದ್ದ ಶಿಕ್ಷಣವನ್ನು ಮತ್ತಷ್ಟು ಮಕ್ಕಳಿಗೆ ಅನುಕೂಲವಾಗಲಿ ಎನ್ನುವದಕ್ಕೆ ಶಾಲೆಗಳನ್ನು ತೆರೆದು, ವಿಕೇಂದ್ರೀಕೃತ ವ್ಯವಸ್ಥೆ ಜಾರಿ ಮಾಡಿ ಪುರಸಭೆ,ನಗರ ಸಭೆ ಗಳ ಮೂಲಕ ಜನರಿಗೆ ಹತ್ತಿರವಾದ ಆಡಳಿತದಲ್ಲಿ ತಂದವರು ಅವರ ಆಡಳಿತ ಎಲ್ಲರಿಗೂ ಮಾದರಿಯಾಗಿದೆ ಎಂದರು,
ಕಾರ್ಯಕ್ರಮದ ಉಧ್ಘಾಟನೆ ಮಾಡಿದ ಪ್ರಿಯದರ್ಶಿನಿ ಶಿಕ್ಷಣ ಮಹಾವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷರಾದ ಶಿದ್ದಲಿಂಗಯ್ಯ ಹಿರೇಮಠ ಮಾತನಾಡಿ ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಉಳಿಸಿ ಬೆಳಸಿ ಇಂದಿನ ಯುವ ಬಳಗಕ್ಕೆ ಮುಟ್ಟಿಸುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಳಗದವರು ಮಾಡುತ್ತಿರುವದು ಹೆಮ್ಮೆಯ ವಿಷಯವಾಗಿದೆ, ಕನ್ನಡ ಭಾಷೆ ತಮಿಳುನಿಂದ ಬಂದಿದೆ ಎಂದು ಹೇಳಿದ ಕಮಲ್ ಹಾಸನ್ ಎಚ್ಚರದಿಂದ ಇರಬೇಕು, ಕನ್ನಡ ಭಾಷೆ ಸಾವಿರಾರು ವರ್ಷಗಳ ಇತಿಹಾಸ ಇದೆ ಅದನ್ನು ಅರಿಯಬೇಕು ಕಲಾವಿದನಾಗಿ ಬೆಳಯುತ್ತಿದ್ದಿಯಾ ಕಲಾವಿದರ ಕ್ಷೇತ್ರದ ಕುರಿತು ಚಿಂತಿಸು ಭಾಷೆಯ ವಿಷಯಕ್ಕೆ ಬರಬೇಡಾ ಎಂದು ಹೆಚ್ಚರಿಸಿದರು,
ಪ್ರಾಸ್ತವಾಕವಾಗಿ ಗೌರವ ಕಾರ್ಯದರ್ಶಿ ಮಂಜುನಾಥ ಮುಧೋಳ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು 1915 ಮೇ 5 ರಂದು ಮೈಸೂರಿನ ಶಂಕರಪುರ ಬಡಾವಣೆಯ ಒಂದು ಚಿಕ್ಕ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ನಾಲ್ವಡಿ ಕೃಷ್ಣರಾಜ್ ಒಡೆಯರ್ ನೆತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಾರಿಗೆ ಬಂದಿತು, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಿನಲ್ಲಿ ಬಹಳ ಕ್ರಿಯಾಶಿಲತೆಯಿಂದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದತ್ತಿ ಉಪನ್ಯಾಸ, ಆಜೀ ಸದಸ್ಯತ್ವ ಮಾಡಿಸುವದು,ಕರ್ನಾಟಕ ಸಂಭ್ರಮ ೫೦ ಕಾರ್ಯಕ್ರಮಗಳು,ಕರ್ನಾಟಕ ಏಕಿಕರಣದ ರೂವಾರಿಗಳ ಜೀವನ ಆದರ್ಶದ ಬದುಕನ್ನು ತಿಳಿಸುವ ಕಾರ್ಯಮಾಡುತ್ತಿದೆ, ಪಟ್ಟಣದಲ್ಲಿ ಕವಿಗಳಿಗೆ,ಸಾಹಿತಿಗಳಿಗೆ,ಅನುಕೂಲಕರವಾಗಲು ಸಾಹಿತ್ಯ ಭವನ ನಿರ್ಮಾಣದ ಹಂತದಲ್ಲಿದೆ ಎಲ್ಲರೂ ಕೈಜೋಡಿಸಿರಿ ಎಂದರು.
ಅತಿಥಿಗಳಾಗಿ ಪ್ರಾಚಾರ್ಯ ಡಾ. ಬಿ ಜಿ ಹಿರೇಮಠ, ಆರ್ ಎಲ್ ಪೋಲಿಸ್ ಪಾಟೀಲ ಮಾತನಾಡಿದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ ಎಮ್ ಜಿ ಗಚ್ಚಣ್ಣವರ ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರ್ ಬದುಕು ನಮಗೆಲ್ಲರಿಗೂ ಮಾದರಿಯಾಗಿದೆ ಅವರು ಕೈಗೊಂಡು ಕೈಗಾರಿಕಾ, ಕೃಷಿ ವಿದ್ಯುತ್, ನಿರಾವರಿ ಅಷ್ಠೆ ಅಲ್ಲದೆ ೪೯ ಸಂಸ್ಥೆಗಳನ್ನು ಕಟ್ಟಿ ನೇಲ ಜಲ ಕೃಷಿಗಾಗಿ ತಮ್ಮದೆ ಆದ ಕೊಡುಗೆ ನಿಡಿ ಸಮ ಸಮಾಜ ನಿರ್ಮಿಸಿದವರು ಎಂದರು.
ಕಸಾಪ ಕಾರ್ಯಕಾರಣಿ ಸದಸ್ಯರಾದ ರಮೇಶಗೌಡ ಪಾಟೀಲ ರವರು ಕುವೇಂಪು ರವರ ಬಾರಿಸು ಕನ್ನಡ ಡಿಂಡಿಮವ ಎಂಬ ಕವಿತೆಯನ್ನು ಹಾಡಿ ಎಲ್ಲರ ಪ್ರಶಂಸೆಗೆ ಪಾತ್ರಾರದರು,
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಉಪಪ್ರಚಾರ್ಯ ಸುರೇಶ ಚುರ್ಚಾಳಮಠ, ಕೃಷ್ಣಮೂರ್ತಿ ಸಾವುಕಾರ,ಮೊಹನ್ ಪಾಟೀಲ,ರವಿಗೌಡ ಪಾಟೀಲ, ಮಹಾವಿದ್ಯಾಲಯದ ಉಪನ್ಯಾಸಕರು ಸಿಬ್ಬಂದಿ ,ಪ್ರಶಿಕ್ಷಣಾರ್ಥಿಗಳು ಇದ್ದರು.
ಸರ್ವರನ್ನು ಉಪನ್ಯಾಸಕ ಜಿ ಸಿ ಜಿವನ್ನವರ ಸ್ವಾಗತಿಸಿದರು.
ಕುಮಾರಿ ಸೌಮ್ಯಲತಾ ಜೀ ಪ್ರಶಿಕ್ಷಣಾರ್ಥಿ ಪ್ರಾರ್ಥಿಸಿದರು.
ಉಪನ್ಯಾಸಕ ಗಂಗಾಧರ ಗುಜ್ಜಟ್ಟಿ ನಿರೂಪಿಸಿದರು
ಬಸವರಾಜ ಉಮಚಗಿ ವಂದಿಸಿದರು.

