ಡಾ. ಕೆ. ಬಿ. ಧನ್ನೂರ ಅಮೃತ ಮಹೋತ್ಸವ ಅಭಿನಂದನಾ ಗ್ರಂಥ ಬಿಡುಗಡೆ

Samagraphrabha
3 Min Read

ರೋಣ : ರಾಜೀವ ಗಾಂಧಿ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳೂ ನರೇಗಲ್ಲದ ಖ್ಯಾತ ವೈದ್ಯರೂ ಆಗಿರುವ ಡಾ. ಕೆ. ಬಿ. ಧನ್ನೂರರವರಿಗೆ ಇದೇ ಜೂನ್ 20, 2025ಕ್ಕೆ 75 ವಸಂತಗಳು ತುಂಬುತ್ತಿದೆ. ಈ ನಿಮಿತ್ಯ ಅವರ ಅಭಿಮಾನಿ ಬಳಗವನ್ನು ಅವರ ಅಮೃತ ಮಹೋತ್ಸವವನ್ನು ಆಚರಿಸುವುದರ ಜೊತೆಗೆ ಅವರಿಗೆ “ಸಮಾಜಮುಖ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿ, ಅಭಿನಂದನಾ ಗ್ರಂಥವನ್ನು 22ನೆ ಜೂನ್. 2025ರಂದು ಅರ್ಪಿಸುವ ಯೋಜನೆಯನ್ನು ಹಾಕಿಕೊಂಡು ನನ್ನನ್ನು ಭೇಟಿಯಾದರು. ఎంబ

ಅವನ ಯೋಚನೆ, ಯೋಜನೆಗಳನ್ನೆಲ್ಲ ಕೇಳಿದ ಮೇಲೆ ಬಹುಮುಖ ವ್ಯಕ್ತಿತ್ವ ಹೊಂದಿರುವ ಡಾ. ಧನ್ನೂರ ಅವರ ಅಮೃತ ಮಹೋತ್ಸವ ಆಚರಣೆ ಸಮರ್ಪಕವಾವನ್ನು ಎಂದು ನನಗನ್ನಿತು ನಮ್ಮ ರಾಜೀವ ಗಾಂಧಿ ಶಿಕ್ಷಣ ಸಂಸ್ಥೆಯ ಆಯುರ್ವೇದಿಕ್ ಮಹಾವಿದ್ಯಾಲಯಕ್ಕೆ ಅವರಿಂದ ಸಂದಿರುವ ಕೊಡುಗೆಯೇನೂ ಕ ಕಡಿಮೆಯದ್ದಲ್ಲ. ಆಯುರ್ವೇದ ಕಾಲೇಜಿನ ಪ್ರಾರಂಭದಿಂದಲೂ ಇಂದಿಗೂ ಡಾ. ಕೆ. ಬಿ. ಧನ್ನೂರರವರು ಯಾವ ಸಮಯದಲ್ಲಿಯೂ ಏನನ್ನೂ ಅಪೇಕ್ಷಿಸವೆ, ಸತತ ಆರು ವರ್ಷಗಳ ಕಾಲ ನಮ್ಮ ಮಹಾವಿದ್ಯಾಲಯವ ವಿದ್ಯಾರ್ಥಿಗಳಿಗೆ ಪಾಠ ಬೋಧನೆಯ ಜೊತೆಗೆ, ಸವಚ್ಛೇದ ಮಾಡುವ ರೀತಿಯನ್ನೂ ಹೇಳಿಕೊಟ್ಟು ವಿದ್ಯಾರ್ಥಿಗಳಿಗೆ ಮಹದುಪಕಾರ ಮಾಡಿದ್ದಾರೆ.

ಇವೆಲ್ಲವನ್ನೂ ಮನಗಂಡು, ಈ ಕಾರ್ಯವನ್ನು ಮನಸಾರೆ ಒಪ್ಪಿಕೊಂಡು ಅಭಿನಂದನಣ ಸಮಿತಿಯವರಿಗೆ ಮುಂದುವರೆಯಲು ತಿಳಿಸಿದೆ. ಸಮಾಜಮುಖ ಗ್ರಂಥಕ್ಕೆ ಶ್ರೀಗಳವರ ಆಶೀರ್ವಚನಗಳನ್ನು ಲೇಖನಗಳನ್ನು, ವೈದ್ಯರ ಅಭಿನಂದನಾ ಗ್ರಂಥ ಇದಾಗಿರುವವರಿಂದ ಓದುಗರಿಗೆ ಅನುಕೂಲವಾಗುವ ದೃಷ್ಟಿಯಿಂದ ವೈದ್ಯಕೀಯ ಲೇಖನಗಳನ್ನು, ಡಾ. ಧನ್ನೂರಪರ ಬಾಲ್ಯದಿಂದ ಇಲ್ಲಿಯ ವರೆಗಿನ ಭಾವಚಿತ್ರಗಳನ್ನು ಸಂಗ್ರಹಿಸಿದ ಚಿತ್ರಾವಳಿ ಮುಂತಾದವುಗಳನ್ನೆಲ್ಲ ಸಮಿತಿಯು ಅತ್ಯಂತ ಉತ್ಸಾಪದಿಂದ ಸಂಗ್ರಹಿಸಲು ಪ್ರಾರಂಭಿಸಿತು.

ಕೇವಲ ಕೆಲವೇ ದಿನಗಳಲ್ಲಿ ಗ್ರಂಥಕ್ಕೆ ಒಂದು ಸ್ವರೂಪವನ್ನು ನೀಡುವುದರ ಜೊತೆಗೆ ಅದನ್ನೊಂದು ಮೌಲಿಕ ಕೃತಿಯನ್ನಾಗಿಸುವಲ್ಲಿ ಸಂಪಾದಕ ಮಂಡಳಿ

- Advertisement -
Ad image

ಅಹರ್ನಿತಿ ಶ್ರಮಿಸಿದೆ. ಅದಕ್ಕಾಗಿ ಈ ಗ್ರಂಥದ ಸಂಪಾದಕ ಮಂಡಳಿಯನ್ನು ನಾನು ಹೃತ್ತೂರ್ವಕವಾಗಿ ಅಭಿನಂದಿಸುತ್ತೇನೆ. ಈ ಸಮಿತಿಯಲ್ಲಿ ಅರುಣ ಬಿ. ಕುಲಕರ್ಣಿಯವರು ಪ್ರಧಾನ ಸಂಪಾದಕರಾಗಿ, ಎಂ. ಎಸ್. ವಧೇಸೂರಮಠರವರು ಸಂಪಾದಕರಾಗಿ, ಡಾ. ಕಲ್ಲಯ್ಯ ಹಿರೇಮಠರವರು ಸಹ-ಸಂಪಾದಕರಾಗಿ ಮತ್ತು ಸಂಪಾದಕ ಮಂಡಳಿಯ ಸದಸದ್ಯರಾಗಿ ಬಿ. ಎಫ್. ಚೇಗರೆಡ್ಡಿ, ಡಾ. ಆರ್. ಕೆ. ಗಚ್ಚಿನಮಠ, ಡಾ. ಎಲ್. ಡಿ. ಬಾಕಳೆ, ಶ್ರೀ ವಿ. ಬಿ. ಸೋಮನಕಟ್ಟಿಮಠ, ಕೆ. ಎಸ್. ಕಳಕಣ್ಣವರ, ಶ್ರೀ ಶುರೇಶ ಹಳ್ಳಿಕೇರಿ, ಡಾ. ಐ. ಬಿ. ಕೊಟ್ಟೂರಶೆಟ್ಟಿ ಮತ್ತು ಡಾ. ವಾಯ್, ಎಸ್. ಪಾಪಣ್ಣವರ ಇವರುಗಳು ಅತ್ಯಂತ ಶ್ರದ್ದೆ ಮತ್ತು ಪ್ರಾಮಾಣಿಕತೆಯಿಂದ ಶ್ರಮಿಸಿದ ಪರಿಣಾಮವಾಗಿ ಗ್ರಂಥದ ಕಾರ್ಯ ಪೂರ್ಣಗೊಂಡು ಜೂನ್ 22, 2025ರಂದು ಬೆಳಿಗ್ಗೆ 10.30ಕ್ಕೆ ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ಸಮಾಜಮುಖ ಗ್ರಂಥ ಲೋಕಾರ್ಪಣೆಗೊಳ್ಳಲಿದೆ.

ನಮ್ಮ ಸಂಸ್ಥೆಯ ಆವರಣದಲ್ಲಿ ಜರುಗಲಿರುವ ಈ ಸಮಾರಂಭದ ವಿವ್ಯ ಶಾನಿಧ್ಯವನ್ನು ಹಾಲಕೆರೆ ಸಂಸ್ಥಾನ ಮಠದ ಜ. ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿಯವರು ವಹಿಸಲಿದ್ದಾರೆ. ರೋಣ ಗುಲಗಂಜಿ ಮಠದ ಮ ನಿ ಪ್ರ ಗುರುಪಾದ ದೇವರು, ನರೇಗಲ್ಲ ಹಿರೇಮಠದ ಪ ಬ್ರ ಮಲ್ಲಿಕಾರ್ಜುನ ಶಿವಾಚಾರ್ಯರು ಮತ್ತು ನಿಡಗುಂದಿಕೊಪ್ಪದ ಮ. ನಿ. ಪ್ರ ಅಭಿನವ ಚನ್ನಬಸವ ಮಹಾಸ್ವಾಮಿಗಳವರು ನೇತೃತ್ವ ವಹಿಸಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಂಸದರಾದ ಆರ್. ಎಸ್. ಪಾಟೀಲರು ವಹಿಸಲಿದ್ದು, ಗದಗ ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯ ಪ್ರವಾಸೋದ್ಯಮ ಸಚಿವರಾಗಿರುವ ಡಾ. ಎಚ್. ಕೆ. ಪಾಟೀಲರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಡಿ. ಆರ್. ಪಾಟೀಲರವರು ಗ್ರಂಥದ ಲೋಕಾರ್ಪಣೆ ಮಾಡಲಿದ್ದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಡಾ. ಕೆ. ಬಿ. ಧನ್ನೂರ ದಂಪತಿಗಳ ಉಪಸ್ಥಿತಿಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಪಂ. ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದ ಉಪನ್ಯಾಸಕರಿಂದ ಸಂಗೀತ ಸೇವೆ ಜರುಗಲಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this Article