ರೋಣ: ಪುರಸಭೆಯ ಕೊನೆಯ ಅವಧಿಗಾಗಿ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಸಮ್ಮ ಕೊಪ್ಪದ ಹಾಗೂ ಉಪಾಧ್ಯಕ್ಷರಾಗಿ ಹನುಮಂತಪ್ಪ ತಳ್ಳಿಕೇರಿ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ, ತಹಸೀಲ್ದಾರ್ ನಾಗರಾಜ ಕೆ. ಅವರು ಘೋಷಿಸಿದರು.
ಪುರಸಭೆ ವ್ಯಾಪ್ತಿಯ ಪಟ್ಟಣದ ಎಲ್ಲಾ ವಾರ್ಡಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು,ಮೂಲಭೂತ ಸೌಕರ್ಯಗಳನ್ನು ಸಾರ್ವಜನಿಕರಿಗೆ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷ ಭರವಸೆ ನೀಡಿದರು.
ಪುರಸಭೆ ಕಾರ್ಯಾಲದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ತೆರವಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ
ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಸಮ್ಮ ಕೊಪ್ಪದ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹನುಮಂತಪ್ಪ ತಳ್ಳಿಕೇರಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ರಮೇಶ ಹೊಸಮನಿ ಪುರಸಭೆ ಸದಸ್ಯರಾದ ಮಿಥುನ ಪಾಟೀಲ,ದುರಗಪ್ಪ ಹಿರೇಮನಿ,ಗೀತಾ ಮಾಡಲಗೇರಿ,ಶಂಕುಂತಲಾ ಚಿತ್ರಗಾರ, ವಿದ್ಯಾ ದೊಡ್ಡಮನಿ, ನಾಜಬೇಗಂ ಯಲಿಗಾರ,ರಂಗವ್ವ ಭಜೇಂತ್ರಿ,ದಾವಲಸಾಬ ಬಾಡಿನ,ಮುತ್ತಣ್ಣ ಗಡಗಿ,ಸಂಗಪ್ಲ ಜಿಡ್ಡಿಬಾಗಿಲ,ಈಶಪ್ಪ ಕಡಿಬಿನಕಟ್ಡಿ, ಮಲ್ಲಯ್ಯ ಮಹಾಪುರುಷಮಠ, ಬಾವಾಸಾಬ ಬೆಟಗೇರಿ,ಸಂಜಯ ದೊಡ್ಡಮನಿ ಸೇರಿದಂತೆ ಇತರರು ಹಾಜರಿದ್ದರು.

