ಪಂಚಾಯತ ವ್ಯಾಪ್ತಿಯ ಗ್ರಾಮ ಗ್ರಂಥಾಲಯಗಳ ಸದುಪಯೋಗ ಮಾಡಿಕೊಳ್ಳಿ : ಭರತ ಎಸ್

Samagraphrabha
1 Min Read

ಗದಗ : “ರಾಜ್ಯದಲ್ಲೇ ಪ್ರಪ್ರಥಮಬಾರಿಗೆ ಪ್ರಾಯೋಗಿಕವಾಗಿ ಗದಗ ಜಿಲ್ಲೆಯಲ್ಲಿ 92 ಗ್ರಾಮ ಗ್ರಂಥಾಲಯಗಳನ್ನು ಆರಂಭಿಸಲಾಗುತ್ತಿದ್ದು, ಸಾರ್ವಜನಿಕರು ವಿಶೇಷವಾಗಿ ವಿಧ್ಯಾರ್ಥಿ ವಿಧ್ಯಾರ್ಥಿನಿಯರು ಗ್ರಂಥಾಲಯಗಳ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯ ಯಶಸ್ವಿಗೆ ಕೈಜೋಡಿಸಬೇಕು” ಎಂದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭರತ್. ಎಸ್ ರವರು ಕರೆ ನೀಡಿದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೇಂದ್ರ ಸರ್ಕಾರದ Scheme for Special Assistance to States for Capital Investment” ಯೋಜನೆಯ “Children and Adolescents Libraries and Digital Infrastructure” ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲಾ ಪಂಚಾಯತ, ಗ್ರಂಥಾಲಯ ಇಲಾಖೆ ಹಾಗೂ ಶಿಕ್ಷಣ ಪೌಂಡೇಶನ್ ಇವರ ಸಹಯೋಗದಲ್ಲಿ ಗ್ರಾಮ ಗ್ರಂಥಾಲಯಗಳ ನಿರ್ವಾಹಕರಿಗೆ ಗ್ರಂಥಾಲಯದ ನಿರ್ವಹಣೆ ಕುರಿತಂತೆ ಗುರುವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ಒಂದು ದಿನದ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
“ ಗ್ರಾಮ ಗ್ರಂಥಾಲಯ ನಿರ್ವಾಹಕರು ವಾರದ ಎರಡು ದಿನ ಅಂದರೆ ಶನಿವಾರ ಮತ್ತು ರವಿವಾರ ಮದ್ಯಾಹ್ನ 2:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ಕನಿಷ್ಟ 4 ಗಂಟೆಗಳ ಅವಧಿಗೆ ಗ್ರಂಥಾಲಯಗಳನ್ನು ತೆರೆದು ಸಾರ್ವಜನಿಕರಿಗೆ ಪುಸ್ತಕಗಳನ್ನು ಓದಿಕೊಳ್ಳಲು ಅನುಕೂಲ ಕಲ್ಪಿಸಬೇಕು” ಎಂದು ಸೂಚಿಸಿದರು.
92 ಗ್ರಾಮ ಗ್ರಂಥಾಲಯಗಳ ಪೈಕಿ ಮೊದಲನೇ ಹಂತದ ತರಬೇತಿಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ 46 ಗ್ರಾಮಗಳ ಗ್ರಾಮ ಗ್ರಂಥಾಲಯಗಳ ನಿರ್ವಹಣೆಗೆ ಆಯ್ಕೆಯಾದ ಸಂಜೀವಿನಿ-ಎನ್.ಆರ್.ಎಲ್.ಎಮ್ ಸ್ವ-ಸಹಾಯ ಗುಂಪಿನ ಮಹಿಳೆಯರು ಭಾಗವಹಿಸಿದ್ದರು. ಉಪ ಕಾರ್ಯದರ್ಶಿಗಳಾದ ಚಂದ್ರಕಾಂತ ಮುಂಡರಗಿ, ಯೋಜನಾ ನಿರ್ದೇಶಕರಾದ ಎಮ್.ವಿ.ಚಳಗೇರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ಧರು. ಜಿಲ್ಲಾ ಗ್ರಂಥಾಲಯ ಅಧಿಕಾರಿ ವೆಂಕಟೇಶ್ವರಿ ಪ್ರಾಸ್ತಾವಿಕವಾಗಿ ಮಾತನಾಡಿದರು ಹಾಗೂ ಶಿಕ್ಷಣ ಪೌಂಡೇಶನ್ನ ಸಿಬ್ಬಂದಿಗಳು ಗ್ರಾಮ ಗ್ರಂಥಾಲಯಗಳ ನಿರ್ವಾಹಕರಿಗೆ ತರಬೇತಿ ನಿಡಿದರು ಸಂಜೀವಿನಿ-ಎನ್.ಆರ್.ಎಲ್.ಎಮ್ ಯೋಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ರಘುನಾಥಗೌಡ ಪಾಟೀಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Share this Article