ಕೂಡಲೆ ತುರ್ತು ಪರಿಹಾರ ಒದಗಿಸಿ – ಗಂಗಪ್ಪ ಮನಮಿ

Samagraphrabha
2 Min Read

ನವಲಗುಂದ: ಬೆಣ್ಣೆ ಹಳ್ಳ ಮತ್ತು ತುಪ್ಪರಿ ಹಳ್ಳಗಳ ಅಪಾಯದ ಮಟ್ಟ ಮೀರುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಕೂಡಲೇ ಸರಕಾರ ನೆರವಿಗೆ ಧಾವಿಸಿ ತುರ್ತು ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಬಿಜೆಪಿ ತಾಲೂಕಾ ಅದ್ಯಕ್ಷರಾದ ಗಂಗಪ್ಪ ಮನಮಿ ಆಗ್ರಹಿಸಿದರು.

ಪಟ್ಟಣದಲ್ಲಿ ತಹಶೀಲ್ದಾರ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಉಭಯ ಹಳ್ಳಗಳು ಅಪಾಯದ ಮಟ್ಟ ಮೀರಿ ಪ್ರವಾಹದ ಮಿತಿ ಮೀರುತ್ತಿದೆ ಹಳ್ಳದ ಆಸುಪಾಸಿನ ರೈತರು ಈಗಾಗಲೆ ತಮ್ಮ ಜಮೀನುಗಳಲ್ಲಿ ಬಿತ್ತನೆ ಕಾರ್ಯ ಸಂಪೂರ್ಣಗೊಳಿಸಿದ್ದು, ಮಳೆಯ ಅವಾಂತರದಿಂದ ಚಿಗುರೊಡೆದಿದ್ದ ಬೆಳೆ ಕೊಚ್ಚಿ ಹೋಗಿ ರೈತಕುಲ ಸಂಕಷ್ಟಕ್ಕಿಡಾಗಿದೆ, ಇದರಿಂದ ಆರಂಭದಲ್ಲಿಯೇ ಅನ್ನದಾತನಿಗೆ ಪೆಟ್ಟು ಬಿದ್ದಂತಾಗಿದ್ದು ಈ ಕೂಡಲೇ ಸೂಕ್ತ ಪರಿಹಾರ ವಿತರಣೆ ಮಾಡಬೇಕೆಂದು ಆಗ್ರಹ ಮಾಡಿದರು.

ರೈತ ಮುಖಂಡರಾದ ದ್ಯಾಮನಗೌಡ ಪಾಟೀಲ ಮಾತನಾಡಿ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಸಮೀಕ್ಷೆ ಮಾಡಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದು ಬೇಡ, ಖುದ್ದಾಗಿ ರೈತರ ಹೊಲಗಳಿಗೆ ತೆರಳಿ ಗ್ರಾಮೀಣ ಭಾಗದ ಜನತೆಯ ರೈತರ ಸಂಕಷ್ಟಗಳಿಗೆ ಸಹಕರಿಸಿ ಪರಿಹಾರವನ್ನು ಒದಗಿಸುವ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡಿದರು.

ನಿಕಟಪೂರ್ವ ಅದ್ಯಕ್ಷರಾದ ಎಸ್.ಬಿ.ದಾನಪ್ಪಗೌಡರ ಮಾತನಾಡಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ 24 ಗಂಟೆ ಒಳಗಾಗಿ ಮಳೆಯಿಂದ ಹಾನಿಗೊಳಗಾದ ರೈತರ ಕುಟುಂಬಕ್ಕೆ ಪರಿಹಾರ ಒದಗಿಸಲಾಗಿತ್ತು. ಸತತ ನಾಲ್ಕು ದಿನ ಮಳೆಯಿಂದ ಸಮಸ್ಯೆ ಕಣ್ಮುಂದೆ ಇದ್ದರೂ ಕೂಡ ಸ್ಥಳಿಯ ಆಡಳಿತ ಹಾಗೂ ಸರಕಾರ ಯಾವುದೇ ಕ್ರಮ ಜರುಗಿಸದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

- Advertisement -
Ad image

ರೈತ ಮುಖಂಡ ಷಣ್ಮುಖ ಗುರಿಕಾರ ಮಾತನಾಡಿ ಕೇವಲ ನಾಟಕೀಯ ಸಮೀಕ್ಷೆ ಮಾಡದೆ ವಾಸ್ತವಕ್ಕೆ ಹತ್ತಿರವಾದ ನೈಜ ಸಮಿಕ್ಷೆ ಮಾಡಿದಾಗ ಮಾತ್ರ ರೈತರಿಗೆ ನ್ಯಾಯ ಸಿಗಲು ಸಾಧ್ಯವಾಗುತ್ತದೆ ಎಂದರು.

ನವಲಗುಂದ ನಗರದ ಅದ್ಯಕ್ಷರಾದ ಸಾಯಿಬಾಬ ಆನೆಗುಂದಿ, ಸುರೇಶ್ ಗಾಣಿಗೇರ, ಸಿದ್ದಣ್ಣ ಕಿಟಗೇರಿ ಅಣ್ಣಪ್ಪ ಬಾಗಿ, ಎಸ್. ಎನ್. ಬಾಳನಗೌಡ್ರ, ದೇವರಾಜ ದಾಡಿಬಾಯಿ, ಮಲ್ಲಿಕಾರ್ಜುನ ಸಂಗನಗೌಡರ, ಬಸುರಾಜ್ ಕಾತರಕಿ, ಜಯಪ್ರಕಾಶ ಬದಾಮಿ ಪ್ರಕಾಶ್ ಪಾಟೀಲ್, ನಾಗೇಶ್ ಬೆಂಡಿಗೇರಿ, ಫಕ್ಕಿರಪ್ಪ ಜಕ್ಕಪ್ಪನವರ, ಆನಂದ ಚವಡಿ ಮೃತುಂಜಯ, ಅರುಣ್ ಮೆಣಸಿನಕಾಯಿ,ದಿಂಡಿ ಬಿ ಎಲ್ ಪೂಜಾರ್ ಪಾಲಾಕ್ಷ ಗೌಡ್ರ ಪಾಟೀಲ್ ನಾಗಪ್ಪ ಹರ್ತಿ, ಮಲ್ಲನಗೌಡ ಹಿರೇಗೌಡರ, ಮಂಜು ರೋಗನವರ ಪ್ರವೀಣ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು…

Share this Article