ಅರಣ್ಯ ಸಂಪತ್ತನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ : ಎ. ಬಿ. ಕೋಲಾರ.

Samagraphrabha
1 Min Read

ಗಜೇಂದ್ರಗಡ:
ನಗರದ
ಶ್ರೀ ಜಗದಂಬಾ ವಿದ್ಯಾವರ್ಧಕ ಸಂಘದ ಶ್ರೀ ವಿ. ಟಿ. ರಾಯಬಾಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ
ವಿಶ್ವ ಪರಿಸರ ದಿನಾಚರಣೆಯ ನಿಮಿತ್ಯ ವನಮಹೋತ್ಸವ ಆಚರಣೆ ಮಾಡಲಾಯಿತು.

ಕಾರ್ಯಕ್ರಮವನ್ನು ಸಸಿಗೆ ನೀರು ಉಣಿಸುವ ಮೂಲಕ ಚಾಲನೆ ನೀಡಲಾಯಿತು.

ಮುಖ್ಯ ಅತಿಥಿಗಳಾಗಿ ರೋಣ ತಾಲೂಕಿನ ಅರಣ್ಯಧಿಕಾರಿಗಳಾದ ಶ್ರೀ ಎ. ಬಿ. ಕೋಲಾರ ಉದ್ಘಾಟನೆ ಮಾಡಿ, ಅರಣ್ಯ ಸಂಪತ್ತನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ, ಎಲ್ಲರೂ ಒಂದೊಂದು ಗಿಡವನ್ನು ನೆಡಬೇಕೆಂದು ಸಂದೇಶ ಕೊಟ್ಟರು.

- Advertisement -
Ad image

ಬಳಿಕ ಸಂಸ್ಥೆಯ ಕಾರ್ಯದರ್ಶಿ ಗುರುನಾಥಸಾ ರಾಯಬಾಗಿ ಮಾತನಾಡಿ ಹಸಿರುಮನೆ ಗಳಂತಹ ಸ್ವಸ್ಥ ಸಮಾಜ ನಿರ್ಮಾಣ ಮಾಡಬೇಕು ಅಂದಾಗ ಮಾತ್ರ ಉತ್ತಮ ಗಾಳಿ, ಮಳೆ, ಬೆಳೆ ಬರಲು ಸಾಧ್ಯ ಎಂದರು.

ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀ ಗೋವಿಂದ ದಂಡಿನ ಮಾತನಾಡಿ
ಅವರು ಪ್ಲಾಸ್ಟಿಕ್ ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿ, ಇಲ್ಲವೇ ಪುನರ್ ಬಳಕೆ ಮಾಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರು ಶ್ರೀ ಅಂಬಾಸಾ ರಾಯಬಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ
ಶ್ರೀಜಿ.ಎಚ್.ರಂಗ್ರೇಜಿ, ಕಾರ್ಯದರ್ಶಿಗಳಾದ ಶ್ರೀ ಜಿ. ಕೆ. ರಾಯಬಾಗಿ, ಸದಸ್ಯರಾದ ಶ್ರೀ ಎಸ್. ಎಸ್. ರಾಯಬಾಗಿ, ಶ್ರೀ ಎಸ್. ಕೆ. ರಾಯಬಾಗಿ, ಶ್ರೀ ಆರ್. ಟಿ. ರಾಯಬಾಗಿ, ಶ್ರೀ ಎನ್. ಕೆ.ಪವಾರ ಶ್ರೀಮತಿ ಎಸ್. ಡಿ. ಲಕ್ಕುಂಡಿ ಸೇರಿದಂತೆ ಶಾಲೆಯ ಶಿಕ್ಷಕ /ಶಿಕ್ಷಕಿ ಯರು ಹಾಗೂ ಸಿಬ್ಬಂಧಿ ವರ್ಗದವರು ಇದ್ದರು.

Share this Article