ಸಭಾಪತಿ ಹೊರಟ್ಟಿ ಅವರಿಂದ ತ್ರಿಚಕ್ರ ವಾಹನ ವಿತರಣೆ

Samagraphrabha
1 Min Read

ಗದಗ: ಕರ್ನಾಟಕ‌‌ ರಾಜ್ಯ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಬುಧವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ವಿಕಲಚೇತನ ಇಬ್ಬರು ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳನ್ನು ವಿತರಣೆ ಮಾಡಿದರು.

ವಿಧಾನ ಪರಿಷತ್ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಖರೀದಿಸಲಾದ ಎರಡು ವಾಹನಗಳನ್ನು ವಿತರಿಸಿ ನಂತರ ಮಾತನಾಡಿದ‌ ಅವರು, ಸರ್ಕಾರದ‌ ಸೌಲಭ್ಯಗಳನ್ನು ಅರ್ಹರು ಪಡೆದು ಅಭಿವೃದ್ಧಿ ಹೊಂದಬೇಕು. ತ್ರಿಚಕ್ರ ವಾಹನ ಸದ್ಭಳಕೆ‌ ಸರಿಯಾಗಿ ಮಾಡಿಕೊಳ್ಳುವಂತೆ ತಿಳಿಸಿದರು.

ತ್ರಿಚಕ್ರ ವಾಹನಗಳನ್ನು ಸರಿಯಾಗಿ ಇಟ್ಟುಕೊಂಡು ಜೀವನ ಸಾಗಿಸಲು ಕರ್ನಾಟಕ‌‌ ರಾಜ್ಯ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದರು.

ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಸಿ‌ ಎನ್ ಶ್ರೀಧರ, ಜಿ ಪಂ ಮುಖ್ಯ ಯೋಜನಾಧಿಕಾರಿ‌ ಶ್ರೀಮತಿ ನಿರ್ಮಲಾ,‌ ಜಿಲಗಲಾ ಅಂಗವಿಕಲರ‌ ಕಲ್ಯಾಣಾಧಿಕಾರಿ ಮಹಾಂತೇಶ ಕೆ, ವಾರ್ತಾಧಿಕಾರಿ ವಸಂತ ಮಡ್ಲೂರ, ಅವ್ವ ಟ್ರಸ್ಟ್‌ ಸಂಚಾಲಕ ಬಸವರಾಜ ದಾರವಾಡ, ಪಕ್ಕಿರಪ್ಪ ಕೌಜಗೇರಿ, ನಾಜಿಯಾ ಅಬ್ಬಿಗೇರಿ, ಇಲಾಖೆಯ ಸಿಬ್ಬಂದಿ ವರ್ಗ ಹಾಜರಿದ್ದರು.

- Advertisement -
Ad image

Share this Article