ರೋಣ: ತಾಲೂಕಿನ ಹುಲ್ಲೂರು ಗ್ರಾಮದಲ್ಲಿ ರೂ 12 ಲಕ್ಷದ ಜಿಮ್ ಉದ್ಘಾಟನೆ, ರೂ 60 ಲಕ್ಷ ಮೊತ್ತದ ಮೂದೇನಗುಡಿ ಸಿಸಿ ರಸ್ತೆಯ ಭೂಮಿ ಪೂಜೆ, ಎಸ್ ಸಿ ಕಾಲೋನಿಯಲ್ಲಿ 20 ಲಕ್ಷ ರೂಗಳ ಸಿಸಿ ರಸ್ತೆ ಮತ್ತು ಗಟಾರ್ ನಿರ್ಮಾಣದ ಭೂಮಿಪೂಜೆ ಹಾಗೂ 41.97 ಲಕ್ಷ ರೂಗಳ ನೂತನ ಗ್ರಾಮ ಪಂಚಾಯತ್ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದ ಶಾಸಕ ಸಿ. ಸಿ ಪಾಟೀಲ ನಾನು ಲೋಕೋಪಯೋಗಿ ಸಚಿವ ಇದ್ದಾಗ ನಮ್ಮ ಕ್ಷೇತ್ರದಲ್ಲಿ ಸುವರ್ಣ ಯುಗ ಇತ್ತು ಎಂದು ನಾನು ಹೇಳಲು ಬಯಸುತ್ತೆನೆ ಈಗಿನ ಕಾಂಗ್ರೇಸ್ ಸರಕಾರ ಪಂಚ ಗ್ಯಾರಂಟಿ ಯೋಜನೆಯಿಂದ ಆರ್ಥಿಕವಾಗಿ ಹಿಂದೆ ಉಳಿದಿದೆ ಆದ್ದರಿಂದ ಅನುದಾನ ಕಡಿಮೆ ಆಗಿದ್ದು ಕ್ಷೇತ್ರದಲ್ಲಿ ಅಭಿರುದ್ದಿ ಕೆಲಸಗಳನ್ನು ಮಾಡಲು ಅನುದಾನ ಕಡಿಮೆ ಇದೆ ಮುಂದಿನ ದಿನಮಾನಗಳಲ್ಲಿ ಹುಲ್ಲೂರು ಗ್ರಾಮದಲ್ಲಿ ಸಾಕಷ್ಟು ಅಭಿರುದ್ದಿ ಕೆಲಸಗಳನ್ನು ಮಾಡುತ್ತೇನೆ ನೀವು ನಿಮಗೆ ಬೇಕಾದ ಕೆಲಸದ ಅರ್ಜಿಗಳನ್ನು ತೆಗೆದುಕೊಂಡು ಬನ್ನಿ ನಾನೇ ಖುದ್ದಾಗಿ ಸಚಿವರನ್ನು ಭೇಟಿ ಆಗಿ ನಿಮ್ಮ ಊರಿನ ಹಳ್ಳದ ಬಗ್ಗೆ ವಿಚಾರಿಸುತ್ತೇನೆ, ಚುನಾವಣೆ ಬಂದಾಗ ಮಾತ್ರ ನಾನು ಬಿ ಜೆ ಪಿ ಅಭ್ಯರ್ಥಿ ಚುನಾವಣೆಯಲ್ಲಿ ಗೆದ್ದ ನಂತರ ನಾನು ನರಗುಂದ ಮತ ಕ್ಷೇತ್ರದ ಶಾಸಕ ಆದ್ದರಿಂದ ನಾನು ಯಾವುದೇ ಪಕ್ಷದ ಭೇದ ಭಾವ ಇಲ್ಲದೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಜಿ ಟಿ. ಪಾಟೀಲ ಮಾತನಾಡಿ
ಗ್ರಾಮೀಣಾಭಿರುದ್ಧಿಗೆ ಈ ಹುಲ್ಲೂರ್ ಗ್ರಾಮದ ಜನತೆ ಬಹಳ ಒತ್ತು ಕೊಟ್ಟಿದೆ, ಗ್ರಾಮಗಳಲ್ಲಿ ಶಾಲೆಗಳು, ಆಸ್ಪತ್ರೆಗಳು, ಚರಂಡಿಗಳು, ಹಾಗೂ ಇನ್ನಿತರ ಮೂಲ ಸೌಕರ್ಯಗಳನ್ನು ಮಾಡಬೇಕು ಅಂದಾಗ ಮಾತ್ರ ಊರು ಅಭಿರುದ್ದಿ ಆಗಲು ಸಾಧ್ಯ ಇದಕ್ಕೆ ಮಾನ್ಯ ಶಾಸಕರ ಬೆಂಬಲ ಹುಲ್ಲುರಿಗೆ ಇದೆ ಎಂದು ಹೇಳಿದರು.
ಹುಲ್ಲೂರು ಕೆರೆ ಹುಳೆತ್ತಲು ಮನವಿ ಮಾಡಿದ ದಸರತ್ ಗಾಣಿಗೇರ ಹಾಗೂ ಊರಿನ ಜನತೆಗೆ ತ್ವರಿತವಾಗಿ ಸ್ಪಂದಿಸಿದ ಶಾಸಕ ಸಿಸಿ ಪಾಟೀಲ್ ಹಳ್ಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಂಗ್ರೇಸ್ ಸರಕಾರ ಬಂದ ಮೇಲೆ ಇಲ್ಲಿಯ ವರೆಗೆ ನಾನು ಯಾವುದೇ ಸಚಿವರ ಹತ್ತಿರ ಹೋಗಿ ಕಾಮಗಾರಿ ಅಥವಾ ಇನ್ನಿತರ ಕೆಲಸಗಳ ಬಗ್ಗೆ ಮಾತನಾಡಿಲ್ಲ ಹುಲ್ಲೂರು ಜನತೆಗೋಸ್ಕರ ನಾನು ಗ್ರಾಮೀಣಾಭಿರುದ್ಧಿ ಸಚಿವರಾದ ಶ್ರೀ ಪ್ರಿಯಾಂಕ ಖರ್ಗೆ ಅವರ ಜೊತೆ ಮಾತನಾಡಿ ಬೆಣ್ಣೆ ಹಳ್ಳದ ಹುಳೆತ್ತಲು ಅನುದಾನ ಬಿಡುಗಡೆ ಮಾಡಿಸುತ್ತೇನೆ ನೀವು ನಾಳೆ ಒಳಗಾಗಿ ನನಗೆ ಹಳ್ಳ ವಿಸ್ತೀರ್ಣ ನೀಡಿ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ. ಪಂ ಅಧ್ಯಕ್ಷೆ ನೀಲವ್ವ ಅಬ್ಬಿಗೇರಿ , ತಾ. ಪಂ ಇಒ ಚಂದ್ರಶೇಖರ್ ಕಂದಕೂರ, ಹಿರಿಯರಾದ ದಶರಥ ಗಾಣಿಗೇರ, ಜಿ ವ್ಹಿ ಪಾಟೀಲ, ಸಿದ್ದು ಪಾಟೀಲ, ಗ್ರಾಮ ಪಂಚಾಯತ ಸದಸ್ಯರಾದ ಸೋಮು ಚರದ್, ರೇಣುಕಾ ಪೂಜಾರ್, ಮುದುಕಪ್ಪ ಹಡನೂರ್, ಮಹಾದೇವಿ ಕಲ್ಗುಡಿ, ಬಸವರಾಜ್ ಅವರಾದಿ, ಶರಣಪ್ಪ ಅಂಗಡಿ, ಎಸ್ ಕೆ ಪಾಟೀಲ, ಮುತ್ತಣ್ಣ ಜಗ್ಗಣ್ಣವರ್, ಶುಭಾಸ್ ಹೊಸಂಗಡಿ, ಹುಲ್ಲೂರ ಗ್ರಾಮದ ಗುರುಹಿರಿಯರು ಯುವಕರು ಮತ್ತು ಗ್ರಾಮ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.

