ನವಲಗುಂದ : ಮನೆಗೊಂದು ಮರ ಬೆಳೆಸಿ ಪರಿಸರ ಉಳಿಸುವಂತಹ ಕೆಲಸ ಪ್ರತಿಯೊಬ್ಬರು ಮಾಡಬೇಕೆಂದು ಮುಖ್ಯ ಶಿಕ್ಷಕಿ ಎ.ಎಂ ಮುಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆ ನಂ-3 ರಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ನಾವು ವಾಸಿಸುವಂತಹ ಪರಿಸರ ಸಂರಕ್ಷಣೆ ನಮ್ಮಲ್ಲೆರ ಜವಾಬ್ದಾರಿ ಎಂದರು…
ನಂತರ ಮಾತನಾಡಿದ ಶಿಕ್ಷಕ ಸಲೀಂ ಮಕಾಂದಾರ ನಮ್ಮ ಪರಿಸರಕ್ಕೆ ನಾವೇ ಕಾವಲುಗಾರರಾಗಿರಬೇಕು ಪರಿಸರವನ್ನು ಹಾಳು ಮಾಡಬಾರದು, ಪರಿಸರದಲ್ಲಿ ಬರುವ ನೆಲ ಜಲ ಮತ್ತು ಗಿಡ ಮರಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಗಿಡವನ್ನು ಬೆಳೆಸುವುದರೊಂದಿಗೆ ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿ ಇಟ್ಟುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಸಿ. ಎಚ್ ಜಗಾಪುರ, ಎಸ್. ಎಂ ಕಾಗದಗಾರ, ಎಸ್ ಜಿ ಮಕಾಂದಾರ, ರಜಿಯಾ ಹಂಚಿನಾಳ, ರೇಷ್ಮಾ ಮಕಾಂದರ, ಅಡುಗೆ ಸಹಾಯಕಿಯರಾದ ರೇಷ್ಮಾ ಕೋಲ್ಕಾರ್, ಕೌಸರ್ ಕುಂದುಗೋಳ, ಪಾಲಕರಾದ ಮೌಲಾಸಾಬ್ ರೋಣದ, ಜಿಯಾನ ಹುಡೇದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

