ಶಿರಹಟ್ಟಿ ತಾಲೂಕಿನ ವಿವಿಧ ಕಾಮಗಾರಿಗೆ ಸಿ ಇ ಓ ಭೇಟಿ, ಪರಿಶೀಲನೆ

Samagraphrabha
1 Min Read

 

ಗದಗ: ಗದಗ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್‌ ಅವರು ಶಿರಹಟ್ಟಿ ತಾಲೂಕಿನಲ್ಲಿ ನಬಾರ್ಡ ಯೋಜನೆಯಡಿ ಪ್ರಗತಿಯಲ್ಲಿರುವ 100 ಹಾಸಿಗೆಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನೆಡೆಸಿದರು. ಇದೆ ಸಂದರ್ಭದಲ್ಲಿ ಶಿರಹಟ್ಟಿ ವ್ಯಾಪ್ತಿಯ ಸಿ. ಸಿ. ಏನ್ ಸರಕಾರಿ ಪ್ರಾಢಶಾಲೆಗೆ ದಿಢೀರ್ ಭೇಟಿ ನೀಡಿ ಮಕ್ಕಳ ಧಾಖಲಾತಿ, ಬೋಧನಾ ಗುಣಮಟ್ಟ, ಶಾಲಾ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ, ಅಡುಗೆ ಕೋಣೆಗಳಿಗೆ ಭೇಟಿ ನೀಡಿ ಸ್ವಚ್ಛತೆಯನ್ನು ಅವಲೋಕಿಸಿದರು.

ನಂತರ ತಾಲೂಕಿನ ಬೆಳ್ಳಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಬಾಣಂತಿಯರ ಧಾಖಲಾತಿ, ಹೊರ ರೋಗಿಯ ವಿಭಾಗ, ಲೇಬರ್ ವಿಭಾಗ, ಔಷದಿ ವಿಭಾಗ ಪರಿಶೀಲನೆ ನೆಡೆಸಿದರು ಹಾಗೂ ಗ್ರಾಮದ ಸರಕಾರಿ ಪ್ರಾಢಶಾಲೆಗೆ ಭೇಟಿ ನೀಡಿ ಹಾಜರಾತಿ, ಬಿಸಿ ಊಟದ ಕೊಠಡಿ, ಭೋದನಾ ಗುಣಮಟ್ಟ, ಸಿಬ್ಬಂದಿಗಳ ಹಾಜರಾತಿ ಪರಿಶೀಲನೆ ನೆಡೆಸಿದರು. ಇದೇ ವೇಳೆ ಅಡುಗೆ ಸಿಬ್ಬಂದಿಗಳೊಂದಿಗೆ ಮಾತನಾಡಿ ಬಿಸಿಯೂಟಕ್ಕೆ ಬಳಸುವ ತರಕಾರಿ, ಮಕ್ಕಳಿಗೆ ವಿತರಿಸುವ ಮೊಟ್ಟೆ, ಬಾಳೆಹಣ್ಣಿನ ಬಗ್ಗೆ ಮಾಹಿತಿ ಪಡೆದರು. ಶಾಲಾ ಮಕ್ಕಳಿಗೆ ವಿತರಿಸಲಾಗುವ ಊಟದ ಕುರಿತು ಅಕ್ಷರ ದಾಸೋಹದ ಕೊಠಡಿಗಳಿಗೆ ಭೇಟಿ ನೀಡಿ ದವಸ ಧಾನ್ಯ, ತರಕಾರಿಗಳನ್ನು ಪರೀಕ್ಷಿಸಿದರು.

- Advertisement -
Ad image

ತದನಂತರ ತಾಲೂಕಿನ ಇಟಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಸಾಸರವಾಡ ಗ್ರಾಮದ ನಡುಗಡ್ಡೆಯಲ್ಲಿ ಸಮುದಾಯ ಪ್ರವಾಸೋದ್ಯಮದ ಸ್ಥಳ ಪರಿಶೀಲನೆ ನೆಡೆಸಿದರು.

ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ, ಸದರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತ್ ಸಿಬ್ಬಂದಿಗಳು, ಶಾಲಾ ಸಿಬ್ಬಂದಿಗಳು, ನರೇಗಾ ಸಿಬ್ಬಂದಿಗಳು ಹಾಜರಿದ್ದರು.

Share this Article